ಬೆಂಗಳೂರು: ಕನ್ನಡದ "ಕಿಸ್" ಚಿತ್ರ ಹಲವು ಕಾರಣಗಳಿಂದ ವಿಶೇಷವಾಗಿದ್ದು ಯುವ ಸಂಗೀತ ನಿರ್ದೇಶಕ ಆದಿ ಹರಿ ಪಾಲಿಗಂತೂ ಅತ್ಯಂತ ಮಹತ್ವದ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ. 18 ವರ್ಷದ ಆದಿ ಅವರನ್ನು ಈ ಚಿತ್ರದ ಮೂಲಕ ಕನ್ನಡ ಸಿನಿ ಪ್ರಪಂಚಕ್ಕೆ ಪರಿಚಯಿಸಲಾಗುತ್ತಿದ್ದು ಇವರ ಹಿನ್ನೆಲೆ ಸಂಗೀತದಲ್ಲಿ ಮೂಡಿ ಬಂದ ಮೊದಲ ಹಾಡು "ನೀನೆ ಮೊದಲು, ನೀನೇ ಕೊನೆ" ಗೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ದನಿಯಾಗಿರುವುದು ಗಮನಾರ್ಹ.