ಹುಟ್ಟುತಲೇ ಯಾರು ರಾಜಕಾರಣಿಗಳಲ್ಲ: ಅಭಿಶೇಕ್ ಅಂಬರೀಶ್

ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಅಂಬರೀಶ್ ಅಮರ್ ಚಿತ್ರದ ಮೂಲಕ ಯಶಸ್ವಿಯಾಗಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದು ಸ್ಯಾಂಡಲ್ವುಡ್ ಸ್ಟಾರ್...
ಅಭಿಶೇಕ್ ಅಂಬರೀಶ್
ಅಭಿಶೇಕ್ ಅಂಬರೀಶ್
ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಅಂಬರೀಶ್ ಅಮರ್ ಚಿತ್ರದ ಮೂಲಕ ಯಶಸ್ವಿಯಾಗಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದು ಸ್ಯಾಂಡಲ್ವುಡ್ ಸ್ಟಾರ್ ನಟರಾದ ದರ್ಶನ್ ಪುನಿತ್ ರಾಜಕುಮಾರ್, ಯಶ್ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ನಾಯಕರು ಶುಭ ಹಾರೈಸಿದ್ದರು. 
ಸಂದೇಶ್ ನಾಗರಾಜ್ ಅಮರ್ ಚಿತ್ರವನ್ನು ನಿರ್ಮಿಸಿದ್ದು ನಾಗಶೇಖರ್ ನಿರ್ದೇಶನ ಮಾಡಿದ್ದರು. ಇನ್ನು ಅರ್ಜುನ್ ಜನ್ಯರ ಸಂಗೀತ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಚಿತ್ರದಲ್ಲಿ ನನ್ನ ಧ್ವನಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿತ್ತು. ಆದರೆ ಪ್ರೇಕ್ಷಕರು ನನ್ನ ಗಡಸು ಧ್ವನಿಯನ್ನು ಮೆಚ್ಚಿದ್ದಾರೆ. ನನ್ನ ನಟನೆ ನನ್ನ ತಂದೆ(ಅಂಬರೀಶ್) ಅವರನ್ನು ಹೋಲುತ್ತಿದೆ ಎಂದು ಜನರು ನನಗೆ ಹೇಳುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ನೀವು ಮಾಡಿದ್ದೀರಾ ಎಂದು ಕೇಳುತ್ತಾರೆ. ಅದಕ್ಕೆ ನಾನು ಅದು ಸ್ವಾಭಾವಿಕ ಎಂದು ಹೇಳುತ್ತಿದ್ದೇನೆ. ಒಟ್ಟಿನಲ್ಲಿ ನನ್ನಲ್ಲಿ ನನ್ನ ತಂದೆಯನ್ನು ಕಾಣುತ್ತಿರುವುದು ನನಗೆ ಸಂತಸ ತಂದಿದೆ ಎಂದು ಅಭಿಶೇಕ್ ಹೇಳಿದ್ದಾರೆ.
ಚಿತ್ರರಂಗದಲ್ಲಿ ಬೆಳೆಯುವುದು ಸುಲಭವಲ್ಲ ಎಂದು ಅರಿತುಕೊಂಡಿದ್ದೇನೆ. ತೀವ್ರ ಸ್ಪರ್ಧೆಯನ್ನು ನೀಡಬೇಕಿದೆ. ಇದರ ಜೊತೆಗೆ ಚಿತ್ರಮಂದಿರಗಳಿಂದ ದೂರ ಉಳಿದಿರುವ ಪ್ರೇಕ್ಷಕರನ್ನು ಮತ್ತೆ ಕರೆದೊಯ್ಯುವುದು ಸವಾಲಿನ ಕೆಲಸ. ಆದರೆ ಅದು ಅಸಾಧ್ಯವಾದ ಕೆಲಸ ಎಂದು ನಾನು ಭಾವಿಸುವುದಿಲ್ಲ. ಮೊದಲನೆಯದಾಗಿ ನಾವು ಅವರೊಂದಿಗೆ ನಿಜವಾಗಿಯೂ ಸ್ಪರ್ಧಿಸುತ್ತಿದ್ದೇವೆ ಎಂದು ಭಾವಿಸುವುದಿಲ್ಲ. ನಮ್ಮ ಅನೇಕ ಚಲನಚಿತ್ರಗಳು ನಾಟಕೀಯ ಬಿಡುಗಡೆಯ ನಂತರ ಕೊನೆಗೊಳ್ಳುತ್ತದೆ.
ಆಗಂತ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದಿಲ್ಲ ಅಂತ ನಾನು ಹೇಳುವುದಿಲ್ಲ. ಯಾಕೆಂದರೆ ಕೆಜಿಎಫ್, ದಂಗಲ್, ಬಾಹುಬಲಿ ಮತ್ತು ಅವೆಂಜರ್ಸ್: ಎಂಡ್ ಗೇಮ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೆ ಹಣ ಬಾಚಿವೆ. ಇದನ್ನು ನೋಡಿದರೆ ನಾನು ಉತ್ತಮ ಚಿತ್ರಗಳನ್ನು ಮಾಡಿದರೆ ಖಂಡಿತವಾಗಿಯೂ ಜನ ಚಿತ್ರವನ್ನು ನೋಡುತ್ತಾರೆ ಎಂದು ಹೇಳಿದರು. 
ಇನ್ನು ತಾಯಿ ಸುಲಮತಾ ಅವರು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದು ನಾನು ಎಂದಿಗೂ ನನ್ನ ತಾಯಿಗೆ ಆಸರೆಯಾಗಿ ನಿಲ್ಲುತ್ತೇನೆ. ಹುಟ್ಟತ್ತಲೇ ಯಾರು ರಾಜಕಾರಣಿಗಳಲ್ಲ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com