ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಿದೆ: ನಿವೃತ್ತಿ ನೀಡಬಾರದು- ಲತಾ ಮಂಗೇಶ್ಕರ್

ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಾಗಿದ್ದು,ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಲೇ ನಿವೃತ್ತಿ ನೀಡಬಾರದೆಂದು ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಒತ್ತಾಯಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮುಂಬೈ: ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಾಗಿದ್ದು,ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಲೇ  ನಿವೃತ್ತಿ ನೀಡಬಾರದೆಂದು ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಒತ್ತಾಯಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಟೀ ಇಂಡಿಯಾ, ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಟೂರ್ನಿಯಿಂದಲೇ ನಿರ್ಗಮಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದರೂ ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ವಿಫಲರಾದ ಮಹೇಂದ್ರ ಸಿಂಗ್ ಭವಿಷ್ಯ ಬಗ್ಗೆ ಊಹಾಪೋಹಾದ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ 89 ವರ್ಷದ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಟ್ವೀಟರ್ ಮೂಲಕ ಧೋನಿ ಪರ ಬ್ಯಾಟ್ ಬೀಸಿದ್ದಾರೆ.
'' ನಮಸ್ಕಾರ ಎಂಎಸ್ ಧೋನಿ. ನೀವು ನಿವೃತ್ತಿಯಾಗಬಯಿಸಿದ್ದೀರಾ ಎಂಬುದನ್ನು ಕೇಳಿದ್ದೇನೆ. ದಯವಿಟ್ಟು ಆ ರೀತಿ ಆಲೋಚನೆ ಮಾಡಬೇಡಿ.ದೇಶಕ್ಕೆ ನಿಮ್ಮ ಆಟ ಅಗತ್ಯವಾಗಿದೆ. ನಿವೃತ್ತಿಯಂತಹ ಯೋಚನೆಯೊಂದಿಗೆ ಮನರಂಜಿಸಬಾರದು ಎಂದು ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com