ದಶರಥ ಚಿತ್ರಕ್ಕೆ ಕೆವಿ ರಾಜುರ 'ಯುದ್ಧಕಾಂಡ' ಪ್ರೇರಣೆ!

ಯುದ್ಧಕಾಂಡ ಚಿತ್ರದಲ್ಲಿ ತಮ್ಮ ಖಡಕ್ ವಾದದ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 30 ವರ್ಷಗಳ ಬಳಿಕ ದಶರಥ ಚಿತ್ರದಲ್ಲಿ ಮತ್ತೆ ವಕೀಲಿ ಕೋಟ್...
ರವಿಚಂದ್ರನ್
ರವಿಚಂದ್ರನ್
Updated on
ಯುದ್ಧಕಾಂಡ ಚಿತ್ರದಲ್ಲಿ ತಮ್ಮ ಖಡಕ್ ವಾದದ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 30 ವರ್ಷಗಳ ಬಳಿಕ ದಶರಥ ಚಿತ್ರದಲ್ಲಿ ಮತ್ತೆ ವಕೀಲಿ ಕೋಟ್ ಧರಿಸಿದ್ದಾರೆ. 
ಇತ್ತೀಚೆಗೆ ಬಿಡುಗಡೆಯಾಗಿರುವ ದಶರಥ ಚಿತ್ರ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಎಂಎಸ್ ರಮೇಶ್ ಅವರು ಹಿರಿಯ ನಿರ್ದೇಶಕ ಕೆವಿ ರಾಜು ಅವರ ಯುದ್ಧಕಾಂಡ ಚಿತ್ರದ ಪ್ರೇರಣೆಯಿಂದ ನಾನು ದಶರಥ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 
ದಶರಥ ಚಿತ್ರ ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಅಂತಿಮವಾಗಿ ಇದೀಗ ಬಿಡುಗಡೆಯಾಗಿದೆ. ಆದರೆ ನಾನು ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಒಬ್ಬರು ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸಬೇಕು ಅಥವಾ ಅದಕ್ಕೆ ಹೊಂದಿಕೊಳ್ಳಬೇಕು. ನಾನು ಈ ಉದ್ಯಮದಲ್ಲಿ ಬದುಕಲು ಬಯಸಿದರೆ ಎರಡನೇಯದನ್ನು ಹಾರಿಸಿಕೊಳ್ಳುತ್ತೇನೆ ಎಂದು ರಮೇಶ್ ಹೇಳಿದ್ದಾರೆ.
ಚಿತ್ರತಂಡದಿಂದ ನನಗೆ ಸರಿಯಾ ರೀತಿಯಲ್ಲಿ ಬೆಂಬಲ ಸಿಗಲಿಲ್ಲ ಎಂದು ರಮೇಶ್ ಬೇಸರಗೊಂಡಿದ್ದಾರೆ. ಕೆಲವು ಕಲಾವಿದರು ಮತ್ತು ತಂತ್ರಜ್ಞರು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ನಾನೊಬ್ಬನೇ ಚಿತ್ರದ ಬಗ್ಗೆ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ. ಆದರೆ ಯಾರ ಬಗ್ಗೆಯೂ ದೂರು ನೀಡಲು ನನಗೆ ಸಮಯವಿಲ್ಲ ಎಂದು ರಮೇಶ್ ಹೇಳಿದ್ದಾರೆ.
ಸ್ವತಂತ್ರ ನಿರ್ದೇಶಕನಾಗಿ ದಶರಥ ನನ್ನ 14ನೇ ಚಿತ್ರವಾಗಿದೆ. ಇನ್ನು 130 ಚಿತ್ರಗಳಿಗೆ ಸಂಭಾಷಣೆಗಾರನಾಗಿ ಚಿತ್ರರಂಗದಲ್ಲಿ 14 ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿದೆ. ಈಗೆಲ್ಲಾ ಒಂದು ಚಿತ್ರದ ಯಶಸ್ಸು ನಿರ್ದೇಶಕನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ರಮೇಶ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com