ಯಜಮಾನ' ಯಶಸ್ಸಿನ ಬಳಿಕ ಬರವಣಿಗೆಯತ್ತ ಹರಿಕೃಷ್ಣ!

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ದರ್ಶನ್ ತೂಗುದೀಪ್ ಅಭಿನಯದ "ಯಜಮಾನ" ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಚೊಚ್ಚಲ ನಿರ್ದೇಶನದ ಚಿತ್ರವೇ ನೂರು ದಿನಗಳ ಕಾಲ ಪ್ರದರ್ಶನ ಕಂಡಿದ್ದು....
ವಿ.ಹರಿಕೃಷ್ಣ
ವಿ.ಹರಿಕೃಷ್ಣ
Updated on
ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ದರ್ಶನ್ ತೂಗುದೀಪ್ ಅಭಿನಯದ "ಯಜಮಾನ" ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಚೊಚ್ಚಲ ನಿರ್ದೇಶನದ ಚಿತ್ರವೇ ನೂರು ದಿನಗಳ ಕಾಲ ಪ್ರದರ್ಶನ ಕಂಡಿದ್ದು ಹರಿಕೃಷ್ಣ ಅವರಿಗೆ ಆತ್ಮವಿಶ್ವಾಸ ಇಮ್ಮಡಿಯಾಗುವಂತೆ ಮಾಡಿದೆ. "ನನ್ನ ಕೆಲಸವನ್ನು ಮೆಚ್ಚಿ ಇದಕ್ಕೆ ದೊಡ್ಡ ಯಶಸ್ಸು ದೊರಕಿಸಿಕೊಟ್ಟ ಪ್ರೇಕ್ಷಕರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ. ಈ ಚಿತ್ರ ತಯಾರಿಸಲು ನನಗೆ ಏನು ಪ್ರೇರಣ ಎಂಬುದಕ್ಕಿಂತ ಒಂದು ಉತ್ತಮ ಚಿತ್ರ ತಯಾರಿಸಬೇಕೆನ್ನುವುದು ನನಗೆ ಮುಖ್ಯವಾಗಿತ್ತು." ಹರಿಕೃಷ್ಣ ಹೇಳಿದ್ದಾರೆ.
"ನನ್ನ ಮುಂದೆ ಇದೀಗ ಅನೇಕ ಉತ್ತಮ ಹಾಗು ಕಳಪೆ ಎನ್ನಬಹುದಾದ ಕಥೆಗಳಿದೆ. ಆದರೆ ಯಾವುದೂ ಪರಿಪೂರ್ಣವಾಗಿಲ್ಲ, ಸುಧಾರಣೆಗೆ ಅವಕಶವಿದೆ. ಪ್ರೇಕ್ಷಕರಿಗೆ ಮನರಂಜನೆ ನೀಡುವುದು ದೊಡ್ಡ ಸವಾಲು.ಒಂದೊಮ್ಮೆ ಪ್ರೇಕ್ಷಕರಿಗೆ ನಮ್ಮ ಕೆಲಸವು ಇಷ್ಟವಾದರೆ ಮಾತ್ರ ಫಲಿತಾಶದಲ್ಲಿ ನಾನು ಯಶಸ್ವಿಯಾಗಲು ಸಾಧ್ಯ. " ಹರಿಕೃಷ್ಣ ಹೇಳಿದ್ದು "ಯಜಮಾನ" ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್, ಬಿ. ಸುರೇಶ್, ನಟ ದರ್ಶ್ನ ಅವರುಗಳಿಗೆ ಧನ್ಯವಾದ ಹೇಳಿದ್ದಾರೆ.
ಸಧ್ಯ ಹರಿಕೃಷ್ಣ ಸ್ಕ್ರಿಪ್ಟ್ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ."ನನ್ನ ಬಳಿ ಕೆಲವು ಒನ್ ಲೈನ್ ಸ್ಟೋರಿಗಳಿದೆ, ನಾನದನ್ನು ನನ್ನ ಟೀಂ ಜತೆ ಸೇರಿ ಅಭಿವೃದ್ದಿಪಡಿಸಬೇಕಿದೆ" ಇನ್ನು ಮುಂದಿನ ಚಿತ್ರವು ಯಾವ ವಿಷಯಗಳನ್ನು ಹೊಂದಿರಲಿದೆ ಎಂದು ಕೇಳಿದರೀ"  ಎಲ್ಲಾ ರೀತಿಯ ವಿಷಯಗಳೂ ಇದೆ, ಆಕ್ಷನ್, ಪ್ರೀತಿ-ಪ್ರೇಮ, ಹಾಸ್ಯ ಎಲ್ಲವೂ ಇರಲಿದೆ, ಯಾವುದೇ ರೀತಿಯ ವಿಷಯವಾಗಬಹುದು, ಇದು ಕಮರ್ಷಿಯಲ್ ಹಾಗೂ ಪ್ರೇಕ್ಷಕರಿಗೆ ತಲುಪುವ ವಿಷಯವಾಗಿರಬೇಕು" ಅವರು ಉತ್ತರಿಸಿದ್ದಾರೆ.
ಇನ್ನು ಸಂಗೀತ ನಿರ್ದೇಶಕರಾಗಿ "ಮುನಿರತ್ನ ಕುರುಕ್ಷೇತ್ರ", "ಪೊಗರು" ತಂಡದೊಡನೆ ಇರುವ ಹರಿಕೃಷ್ಣ "ನನಗೆ ಚಿತ್ರರಂಗದ ಮೇಲೆ ಪ್ರೀತಿ, ಇದಾವುದೇ ವಿಭಾಗವಾಗಿರಲಿನನ್ನ ಕೆಲಸದ ವೇಳೆ ನಾನು ಯಾವುದೇ ನಿರ್ದಿಷ್ಟ ವಿಭಾಗವನ್ನು ಮಾತ್ರ ಗಮನಿಸುವುದಿಲ್ಲ.ಸಿನಿಮಾರಂಗವು ಎಲ್ಲಾ ಬಗೆಯ ಕುಶಲತೆಯನ್ನೂ ಅಪೇಕ್ಷಿಸುತ್ತದೆ. ಸಧ್ಯ ನಾನು ಸಂಗೀತವನ್ನು ಬದಿಗಿಟ್ಟು ಬರವಣೆಗೆ ನಡೆಸಿದ್ದೇನೆ. ಇದೊಂದು ಹಂತವಷ್ಟೇ, ಮುಂದೆ ಮತ್ತೆ ಸಂಗೀತವನ್ನು ಎತ್ತಿಕೊಳ್ಳುವುದು ನಿಶ್ಚಿತ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com