ಸುದೀಪ್
ಸಿನಿಮಾ ಸುದ್ದಿ
ಸೂರಿ ನಿರ್ದೇಶಿಸಿ-ಸುದೀಪ್ ನಟನೆಯ ಮುಂದಿನ ಸಿನಿಮಾಗೆ ಶ್ರೀಕಾಂತ್ ನಿರ್ಮಾಪಕ
ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾ ವನ್ನು ಟಗರು ಸೂರಿ ನಿರ್ದೇಸಿಸಲಿದ್ದಾರೆ ಎಂದು ನಿರ್ಮಾಪಕ ಶ್ರೀಕಾಂತ್ ಹೇಳಿದ್ದಾರೆ, ಆದರೆ ಸಿನಿಮಾ ಬೇಗ ಸೆಟ್ಟೇರುವುದಿಲ್ಲ, ..
ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾ ವನ್ನು ಟಗರು ಸೂರಿ ನಿರ್ದೇಸಿಸಲಿದ್ದಾರೆ ಎಂದು ನಿರ್ಮಾಪಕ ಶ್ರೀಕಾಂತ್ ಹೇಳಿದ್ದಾರೆ, ಆದರೆ ಸಿನಿಮಾ ಬೇಗ ಸೆಟ್ಟೇರುವುದಿಲ್ಲ, ಸಿನಿಮಾ ತುಂಬಾ ಲೇಟ್ ಆಗಿ ಆರಂಭವಾಗಲಿದೆ.
ಸೂರಿ ಮತ್ತು ಸುದೀಪ್ ಇಬ್ಬರು ಈ ಮೊದಲಿನ ಕಮಿಠಟ್ ಮೆಂಟ್ ಗಳಲ್ಲಿ ಬ್ಯುಸಿಯಾಗಿರುವ ಕಾರಣ ಸಿನಿಮಾ ನಿಧಾನವಾಗಿ ಆರಂಭವಾಗಲಿದೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ, ಎಲ್ಲರೂ ಒಟ್ಟಾಗಿ ಕುಳಿತು ಸ್ಕ್ರಿಪ್ಟ್ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.
ಶ್ರೀಕಾಂತ್ ಸದ್ಯ ಸಲಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀಕಾಂತ್ ಅವರ ಎರಡನೇ ಪ್ರಾಜೆಕ್ಟ್ ಇದಾಗಿದ್ದು, ಮೂರನೇ ಪ್ರಾಜೆಕ್ಟ್ ಸುದೀಪ್ ಮತ್ತು ಸೂರಿ ಪ್ರಾಜೆಕ್ಟ್ ಇದಾಗಿದೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಬಿಲ್ಲಾ ರಂಗಾ ಭಾಷಾ ಚಿತ್ರವನ್ನು ಸುದೀಪ್ ಮಾಡಲಿದ್ದಾರೆ.. ಅದ್ರ ಜೊತೆಗೆ ಈಗ ಸೂರಿ ಕಲ್ಪನೆಯಲ್ಲಿ ಮೂಡಿಬರಲಿರುವ ಹೆಸರಿಡದ , ಬಹುಕೋಟಿ ವೆಚ್ಚದ ಚಿತ್ರಕ್ಕೂ ಕಿಚ್ಚ ಕಾಲ್ ಶೀಟ್ ಕೊಟ್ಟಿದ್ದಾರೆ,.
ಕಿಚ್ಚ-ಸೂರಿ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಟಗರು ಖ್ಯಾತಿಯ ಕೆ.ಪಿ ಶ್ರೀಕಾಂತ್ ಬಂಡವಾಳ ಹಾಕ್ತಿದ್ದಾರೆ..ಬಹುತೇಕ ಟಗರು ಟೆಕ್ನಿಶಿಯನ್ಸ್ ಈ ಚಿತ್ರಕ್ಕೂ ಕೆಲಸ ಮಾಡುವ ಸಾಧ್ಯತೆಯಿದೆ..ಕಾರಣ ಏನು ಅನ್ನೋದು ಗೊತ್ತಾಗಿದೆ..
ಈ ಹಿಂದೆ ರಂಗ ಎಸ್ ಎಸ್ಎಲ್ಸಿ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಸೂರಿ ಕಿಚ್ಚನ ಜೊತೆ ಕೆಲಸ ಮಾಡಿದ್ದರು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ