ಗೋಲ್ಡನ್ ಸ್ಟಾರ್ ಗಣೇಶ್
ಸಿನಿಮಾ ಸುದ್ದಿ
ಗಣೇಶ್ ಅಭಿನಯದ 'ವೇರ್ ಈಸ್ ಮೈ ಕನ್ನಡಕ' ಚಿತ್ರೀಕರಣ ಮುಂದೂಡಿಕೆ
ಹೋಂ ಬ್ಯಾನರ್ ಗೋಲ್ಡನ್ ಮೂವೀಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ "ಗೀತಾ" ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್....
ಹೋಂ ಬ್ಯಾನರ್ ಗೋಲ್ಡನ್ ಮೂವೀಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ "ಗೀತಾ" ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ಯೋಜನೆಯಾದ "ವೇರ್ ಈಸ್ ಮೈ ಕನ್ನಡಕ" ಚಿತ್ರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ರಾಜ್ ಹಾಗೂ ದಾಮಿನಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡಬೇಕಿದ್ದು ಇದಲ್ಲದೆ ಪತ್ರಲೇಖಾ ಹಾಗೂ ಅರ್ಬಾಜ್ ಖಾನ್ ಸಹ ಈ ಒಂದು ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ.
ಬೆಂಗಳೂರಿನಲ್ಲಿ ಈ ಚಿತ್ರದ ಮಹೂರ್ತ ನೆರವೇರಿತ್ತು. ಚಿತ್ರತಂಡ ಈ ಚಿತ್ರದ ಮುಖ್ಯ ಚಿತ್ರೀಕರಣವನ್ನು ಲಂಡನ್ ನಲ್ಲಿ ನಡೆಸಲು ಉದ್ದೇಶಿಸಿದ್ದು ಏಪ್ರಿಲ್ ನಲ್ಲೇ ಚಿತ್ರೀಕರಣ ಪ್ರಾರಂಬವಾಗಬೇಕಿತ್ತು. ಆದರೆ ಈಗ ಸಧ್ಯಕ್ಕಂತೂ ಶೂಟಿಂಗ್ ಪ್ರಾರಂಬವಾಗುವ ಲಕ್ಷಣಗಳಿಲ್ಲ.
"ಚಿತ್ರೀಕರಣ ಮಾಡಬೇಕಾದದ್ದು ಯುನೈಟೆಡ್ ಕಿಂಗ್ ಡಂ ನಲ್ಲಿ, ಅಲ್ಲೀಗ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದೆ. ನಾವು ವೇಳಾಪಟ್ಟಿಯಲ್ಲಿಯೂ, ಚಿತ್ರೀಕರಣದ ಸ್ಥಳಗಳಲ್ಲಿಯೂ ಸಮಸ್ಯೆ ಹೊಂದಿದ್ದು ದ ನಾವು ಚಿತ್ರೀಕರಣಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ತಂಡವು ಸ್ಕ್ರಿಪ್ಟ್ ಅನ್ನು ಪುನಃ ಬರೆಯಲು ಸ್ವಲ್ಪ ಸಮಯ ತೆಗೆದುಕೊಂಡಿದೆ. ಈ ಎಲ್ಲ ಸಂಗತಿಗಳ ಕಾರಣ ಶೂಟಿಂಗ್ ಯಾವಾಗ ಪ್ರಾರಂಭವಾಗಲಿದೆ ಎನ್ನುವುದನ್ನು ಈಗಲೇ ಹೇಳಲು ಬರುವುದಿಲ್ಲ" ಗಣೇಶ್ ಹೇಳಿದ್ದಾರೆ.
"ನಾನೀಗ ನನ್ನ ಹೋಂ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಗೀತಾ ಚಿತ್ರದ ಕುರಿತು ಗಮನ ಕೇಂದ್ರೀಕರಿಸಿದ್ದೇನೆ. ಇದು ಸ್ವಂತ ನಿರ್ಮಾಣದ ಚಿತ್ರವಾಗಿರುವ ಕಾರಣ ಚಿತ್ರದ ಪ್ರತಿಯೊಂದು ವಿವರಗಳನ್ನು ನಾನು ಪರಿಶೀಲಿಸುತ್ತಿದ್ದೇನೆ, ಅದು ಈಗಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ಚಿತ್ರದ ಡಬ್ಬಿಂಗ್ ಪೂರ್ಣವಾಗಿದೆ" ನಟ ಗಣೇಶ್ ಹೇಳಿದ್ದಾರೆ.
ಸ್ಟಾರ್ ನಟನ ಜನ್ಮದಿನವಾದ ಜುಲೈ 2ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ, ನಟ ಹೇಳುವಂತೆ ತನ್ನನ್ನು ಪ್ರೇಕ್ಷಕರು ಹಿಂದೆಂದೂ ನೋಡಿರದ ಪಾತ್ರದಲ್ಲಿ ಅವರು ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಬರುವ 15 ದಿನಗಳಲ್ಲಿ ಚಿತ್ರದ ಟ್ರೈಲರ್‌ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.ಆಗಸ್ಟ್‌ನಲ್ಲಿ ಮೆಗಾ ಆಡಿಯೊ ಬಿಡುಗಡೆ ಮಾಡಲು ಯೋಜಿಸುತ್ತಿದೆ.ಗಣೇಶ್ ಜತೆಗೆ ರಗ್ಡಿ ಪ್ರೊಡಕ್ಷನ್ಸ್ ನ ಅರುಣ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ.
ಗೋಲ್ಡನ್ ಸ್ಟಾರ್ ಈ ಹಿಂದೆ "99" ಚಿತ್ರದಲ್ಲಿ ಕಡೆಯ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದು ಇನ್ನು ನಾಗಣ್ಣ ನಿರ್ದೇಶನದ ಗಿಮಿಕ್ ಬಿಡುಗಡೆಗೆ ಸಿದ್ಧವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ