ಥ್ರಿಲ್ಲರ್ ಡ್ರಾಮಾ ಕಥಾನಕವಾಗಿರುವ ಚಿತ್ರದ ಚಿತ್ರಕಥೆಯು ಬಹಳಾಷ್ಟು ವಿಶೇಷವಾಗಿದೆ."ನಿರ್ದೇಶಕರು ನಿರೂಪಣೆ ಮಾಡುವಾಗ ನಾನೆಷ್ಟು ಉತ್ಸುಕಳಾಗಿದ್ದೆ ಎಂದರೆ ಮುಂದೇನಾಗಲಿದೆ ಎಂಬ ಕುತೂಹಲ ನನ್ನಲ್ಲಿ ಸದಾ ಮೂಡುತ್ತಿತು" ಐಶಾನಿ ಹೇಳಿದ್ದಾರೆ."ಚಿತ್ರಕಥೆ ಯಾರನ್ನಾದರೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ.ನನ್ನಂತಹ ನಟಿಗೆ ಹೆಚ್ಚಾಗಿ ರೋಮ್ಯಾಂಟಿಕ್ ಚಲನಚಿತ್ರಗಳು ಮತ್ತು ಹುಡುಗಿಯರ ಸಾಮಾನ್ಯ ಒಳತೋತಿಯ ಪಾತ್ರಗಳನ್ನೇ ನೀಡಲಾಗುತ್ತದೆ. ಆದರೆ , ಇದು ವಿಭಿನ್ನ ರೀತಿಯಪಾತ್ರವಾಗಿದ್ದು ಇದರಲ್ಲಿ ನಾನು ಅಸಾಂಪ್ರದಾಯಿಕ ಮತ್ತು ಚಮತ್ಕಾರಿ ಪಾತ್ರವನ್ನು ನಿರ್ವಹಿಸುತ್ತೇನೆ. "