ಸುದೀಪ್ ಅಳಿಯ ಸಂಚಿತ್ ಸಂಜೀವ್ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ!

ಬೆಲ್ ಬಾಟಮ್ ಚಿತ್ರದ ಯಶಸ್ಸು ನಿರ್ದೇಶಕ ಜಯತೀರ್ಥರನ್ನು ಮತ್ತಷ್ಟು ಜನಪ್ರಿಯಗೊಳಿಸಿದೆ, ಉತ್ತಮ ...
ಜಯತೀರ್ಥ, ಸುದೀಪ್ ಮತ್ತು ಸಂಚಿತ್ ಸಂಜೀವ್
ಜಯತೀರ್ಥ, ಸುದೀಪ್ ಮತ್ತು ಸಂಚಿತ್ ಸಂಜೀವ್
ಬೆಲ್ ಬಾಟಮ್ ಚಿತ್ರದ ಯಶಸ್ಸು ನಿರ್ದೇಶಕ ಜಯತೀರ್ಥರನ್ನು ಮತ್ತಷ್ಟು ಜನಪ್ರಿಯಗೊಳಿಸಿದೆ, ಉತ್ತಮ ಪ್ರಾಜೆಕ್ಟ್ ಗಳು ಬರುತ್ತಿವೆ.
ಕನ್ನಡ ಚಿತ್ರೋದ್ಯಮಕ್ಕೆ ಬರುತ್ತಿರುವ ಹೊಸಬ ನಟ, ನಟಿಯರು, ನಿರ್ಮಾಣ ಸಂಸ್ಥೆಗಳು ಜಯತೀರ್ಥ ಅವರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಜಯತೀರ್ಥ ಅವರು ಯಾವುದನ್ನು ಒಪ್ಪಿಕೊಳ್ಳುವ ಮೊದಲು ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಅವರು ನಟ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರನ್ನು ತೆರೆಯ ಮೇಲೆ ಪರಿಚಯಿಸುತ್ತಿದ್ದಾರೆ. ತಮ್ಮ ಹೋಂ ಬ್ಯಾನರ್ ನಲ್ಲಿ ಸುದೀಪ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸಂಚಿತ್ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಎರಡು ವರ್ಷಗಳ ಚಲನಚಿತ್ರ ನಿರ್ಮಾಣ, ನಟನೆಯ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಪ್ರಸ್ತುತ ಮುಂಬೈಯಲ್ಲಿ ಕೂಡ ಅಲ್ಪಾವಧಿಯ ತರಬೇತಿ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com