ಈ ಚಿತ್ರ ಕಮರ್ಷಿಯಲ್ ಎಂಟರ್ಟೈನ್ ಚಿತ್ರವಾಗಿದ್ದು ಜಯಣ್ಣ, ಭೋಗೇಂದ್ರ ಜೋಡಿ ಜಯಣ್ಣ ಫಿಲ್ಮ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಿದೆ. ಹರ್ಷ ಈ ಶೀರ್ಷಿಕೆಯನ್ನು 2016ರಲ್ಲೇ ನೊಂದಾಯಿಸಿದ್ದರು. ಇನ್ನು ಈ ನಿರ್ಮಾಪಕ ಜೊಡಿ ಹಾಗೂ ಶಿವರಾಜ್ ಕುಮಾರ್ ಅಭಿನಯದಲ್ಲಿ ಮೂಡಿಬರುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಈ ಹಿಂದೆ "ಬಂಗಾರ ಸನ್ ಆಫ್ ಬಂಗಾರದ ಮನುಷ್ಯ", "ಮುಫ್ತಿ", "ರುಸ್ತುಂ" ಚಿತ್ರಗಳಲ್ಲಿ ಇದೇ ನಿರ್ಮಾಪಕರು-ನಟ ಜೋಡಿ ಇದ್ದಿತ್ತು.