ಮತ್ತೆ ಸಿನಿಮಾದಲ್ಲಿ ನಟಿಸುತ್ತಿರುವುದು ನನ್ನ ರೋಗವನ್ನು ಮರೆಸುತ್ತಿದೆ: ರಾಘಣ್ಣ

ಅಮ್ಮನ ಮನೆ ಸಿನಿಮಾ ಜೊತೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ವಿಶೇಷ ಸಂಬಂಧವಿದೆ, ರಾಘಣ್ಣನ ಕೊನೆಯ ಸಿನಿಮಾ ಪಕ್ಕದ್ಮನೆ ಹುಡುಗಿಯಾಗಿತ್ತು....
ರಾಘವೇಂದ್ರ ರಾಜ್ ಕುಮಾರ್
ರಾಘವೇಂದ್ರ ರಾಜ್ ಕುಮಾರ್
Updated on
ಅಮ್ಮನ ಮನೆ ಸಿನಿಮಾ ಜೊತೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ವಿಶೇಷ ಸಂಬಂಧವಿದೆ, ರಾಘಣ್ಣನ ಕೊನೆಯ ಸಿನಿಮಾ ಪಕ್ಕದ್ಮನೆ ಹುಡುಗಿಯಾಗಿತ್ತು.ಈ ಸಿನಿಮಾ 15 ವರ್ಷಗಳ ಹಿಂದೆ ತೆರೆ ಕಂಡಿತ್ತು. 
ಅನಾರೋಗ್ಯದ ಸಮಸ್ಯೆಗಳಿಂದಾಗಿ ದೀರ್ಘ ಸಮಯ ಸಿನಿಮಾದಿಂದ ದೂರ ಉಳಿದಿದ್ದರು, ಸಿನಿಮಾ ರಂಗ ಕೂಡ ಸಂಪೂರ್ಣವಾಗಿ ರಾಘಣ್ಣನನ್ನು ಮರೆತಿತ್ತು. ನನ್ನ ದೇಹದ ಎಡಭಾಗಕ್ಕೆ ಪ್ಯಾರಲಿಸಿಸ್ ಆದ ನಂತರ ನನ್ನ ವೃತ್ತಿ ಜೀವನ ಮುಗಿಯಿತು ಎಂದುಕೊಂಡಿದ್ದೆ,ಎಲ್ಲಾ ಮಾರ್ಗಗಳು ಮುಚ್ಚಿದ್ದ ವೇಳೆ ನನಗೆ ಹೊಸದೊಂದು ಬೆಳಕು ಕಂಡಿತು, ನಿಖಿಲ್ ಮಂಜು ನಿರ್ದೇಶನದ ಅಮ್ಮನ ಮನೆ ಸಿನಿಮಾದಲ್ಲಿ ಆಫರ್ ಬಂದಿದೆ ಎಂದು ಹೇಳಿದ್ದಾರೆ.
ನಟನೆ ಮಾಡುವುದು ಕೂಡ ಒಂದು ಥೆರಪಿಯಾಗಿದೆ,  ನಟನೆಗೆ ಇಲಿದ ಮೇಲೆ, ನಾನು ರೋಗಿ ಎಂಬುದನ್ನೇ ಮರೆತಿದ್ದೇನೆ, ನನ್ನ ದೈನಂದಿನ ದಿನಚರಿಯಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗಿದೆ, ಮೇಕ್ ಅಪ್ ಮಾಡಿಕೊಳ್ಳುವುದು, ಕ್ಯಾಮೆರಾ ಮುಂದೆ ನಿಂತುಕೊಳ್ಳಲು ಸಿದ್ದನಾಗುವುದು, ನಾನು ಈಗ ಸ್ವಲ್ಪ ಜವಾಬ್ದಾರಿ ಹೊರುತ್ತಿದ್ದೇನೆ, ಪ್ರಾಮಾಣಿಕವಾಗಿ ನಾನು ಕೆಲಸ ಮಾಡಲು ಬಯಸುತ್ತಿದ್ದೇನೆ ಎಂದು ರಾಘಣ್ಣ ಹೇಳಿದ್ದಾರೆ.
ತಮ್ಮ ಮಕ್ಕಳ ಹಾಗೂ ಪತ್ನಿ ತಮಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತಿದ್ದಾರೆ, ಮತ್ತೆ ನನ್ನನ್ನು ತೆರೆ ಮೇಲೆ ನೋಡಲು, ಅವರು ಆಸೆ ಪಡುತ್ತಿದ್ದಾರೆ, ಇದರಿಂದ ನನ್ನ ಪ್ಯಾರಲಿಸಿಸ್ ನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ, ನನ್ನ ಕಮ್ ಬ್ಯಾಕ್ ಗೆ ಈ ಸಿನಿಮಾ ಸಹಾಯ ಮಾಡುತ್ತಿದೆ, ತಮ್ಮ ಮುಂದಿನ ಹುಟ್ಟುಹಬ್ಬದಂದೇ ಅವರ 2ನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಅಮ್ಮನ ಮನೆ ಸಿನಿಮಾ ನನ್ನ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಮರ್ಪಿಸುತ್ತೇನೆ, ನಾನು ಆನಾರೋಗ್ಯದಿಂದ ಇದ್ದಾಗ, ನನ್ನ ಆರೋಗ್ಯವನ್ನು ಗಮನಿಸಿದೇ ಆಕೆಯ ಬಗ್ಗೆ ಕೇರ್ ತಗೊಂಡೆ, ಅವರ ವ್ಯಕ್ತಿತ್ವವನ್ನ ಅಮ್ಮನ ಮನೆ ಸಿನಿಮಾ ಮೂಲಕ ವಾಪಸ್ ತರಲು ಪ್ರಯತ್ನಿಸುವೆ ಎಂದು ಹೇಳಿದ್ದಾರೆ,ಇಂಥ ಒಂದು ಸನ್ನಿವೇಷ ನನ್ನ ನಿಜ ಜೀವನದಲ್ಲೂ ನಾನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
ಒಂದು ಮಗು ಆಹಾರವಿಲ್ಲದೇ ಸಾಯಬಹುದು, ಆದರೆ ಶಿಕ್ಷಣವಿಲ್ಲದೇ ಸಾಯಬಾರದು, ಇದು ಒಂದು ಹಕ್ಕು, ಇಂಥಹ ಸಿನಿಮಾದಲ್ಲಿ ನಾನು ಒಂದು ಭಾಗವಾಗಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com