ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದ ಅಕ್ಕಿ

ಬಹುತೇಕ ನಟರು ಒಂದೇ ಭಾಷೆಯ ಚಿತ್ರಗಳಿಗೆ ಸೀಮಿತವಾಗಿರುತ್ತಾರೆ. ಆದರೆ, ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಬಾಲಿವುಡ್ ಖಿಲಾಡಿ...
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
Updated on: 
ಮುಂಬೈ: ಬಹುತೇಕ ನಟರು ಒಂದೇ ಭಾಷೆಯ ಚಿತ್ರಗಳಿಗೆ ಸೀಮಿತವಾಗಿರುತ್ತಾರೆ. ಆದರೆ, ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್, ಕೇವಲ ಒಂದೇ ಭಾಷೆಗೆ ಸೀಮಿತವಾಗದೆ, ಸ್ಥಳೀಯ ಭಾಷಾ ಚಿತ್ರಗಳಲ್ಲಿಯೂ ನಟಿಸಲು ಸಜ್ಜಾಗಿದ್ದಾರೆ.
ಈ ಕುರಿತು ಅಕ್ಷಯ್ ಕುಮಾರ್ ಮಾತನಾಡಿ, ಸ್ಥಳೀಯ ಭಾಷೆಗಳಲ್ಲಿ ಗ್ಲಾಮರ್ ಇರುವುದಿಲ್ಲವೆಂದು ಯಾರೂ ಹೇಳುತ್ತಾರೆ. ಪ್ರಸ್ತುತ ಸ್ಥಳೀಯ ಭಾಷಾ ಚಿತ್ರಗಳೇ ಹೆಚ್ಚು ದಿನ ಪ್ರದರ್ಶನಗೊಳ್ಳುತ್ತೀವೆ. ಅವು ಕೇವಲ ಗ್ಲಾಮರ್ ಗೆ ಸೀಮಿತವಾಗದೇ, ಗಲ್ಲಾಪಟ್ಟಿಗೆಯು ತುಂಬಿಸುವಲ್ಲಿ ಯಶಸ್ವಿಯಾಗುತ್ತಿವೆ ಎಂದರು.
ಮುಂಬರುವ ದಿನಗಳಲ್ಲಿ ಭೋಜಪುರಿ ಹೊರತಾಗಿ ತಮಿಳು, ತೆಲುಗು ಹಾಗೂ ಕನ್ನಡ ಭಾಷಾ ಚಿತ್ರಗಳಲ್ಲಿಯೂ ನಟಿಸುವಾಸೆ ಇದೆ. ನನ್ನ ಸಿನಿ ಜೀವನದ ಆರಂಭದ ದಿನಗಳಲ್ಲಿ ದಕ್ಷಿಣ ಭಾರತೀಯ ಚಿತ್ರಗಳಲ್ಲಿಯೂ ನಟಿಸಿದ್ದೇನೆ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಅಕ್ಷಯ್ ಕುಮಾರ್ ಅವರು ಈ ಹಿಂದೆ ವಿಷ್ಣು ವಿಜಯ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರ ಜತೆ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com