ನಾನು ಸದಾ ನಗುವನ್ನೇ ಬಯಸುತ್ತೇನೆ, ಇದರಿಂದ ಮನಸ್ಸು ಹಗುರಾಗುತ್ತದೆ: ತಾನ್ಯಾ ಹೋಪೆ

"ಯಜಮಾನ" ಚಿತ್ರದ ನಂತರ ನಟಿ ತಾನ್ಯಾ ಹೋಪೆಗೆ ಸ್ಯಾಂಡಲ್ ವುಡ್ ನಲ್ಲಿ ಅಪೂರ್ವ ಸ್ವಾಗತ ಸಿಕ್ಕಿದೆ. ಬಸಣ್ಣಿ ಎಂದೇ ಜನಪ್ರಿಯವಾಗಿರುವ ಈ ನಟಿ ತನ್ನ ಮೊದಲ....
ತಾನ್ಯಾ ಹೋಪೆ
ತಾನ್ಯಾ ಹೋಪೆ
Updated on
ಬೆಂಗಳೂರು: "ಯಜಮಾನ" ಚಿತ್ರದ ನಂತರ ನಟಿ ತಾನ್ಯಾ ಹೋಪೆಗೆ ಸ್ಯಾಂಡಲ್ ವುಡ್ ನಲ್ಲಿ ಅಪೂರ್ವ ಸ್ವಾಗತ ಸಿಕ್ಕಿದೆ. ಬಸಣ್ಣಿ ಎಂದೇ ಜನಪ್ರಿಯವಾಗಿರುವ ಈ ನಟಿ ತನ್ನ ಮೊದಲ ಚಿತ್ರ ಬಿಡುಗಡೆಯಾಗಿ ಇನ್ನೂ ಮೂರನೇ ವಾರದಲ್ಲೇ ಎರಡನೇ ಚಿತ್ರದ ಬಿಡುಗಡೆ ಕಾಣುತ್ತಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ "ಉದ್ಘರ್ಷ"  ಚಿತ್ರ ದಕ್ಷಿಣ ಭಾರತದ ಪ್ರಮುಖ ಬಾಷೆಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ತಾನ್ಯಾ, ಸಾಯಿ ಧನ್ಸಿಕಾ, ಠಾಕೂರ್ ಅನೂಪ್ ಸಿಂಗ್, ಕಬೀರ್ ಧುಹಾನ್ ಸಿಂಗ್, ಶ್ರದ್ದಾ ದಾಸ್ ಮೊದಲಾದವರ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
"ಯಜಮಾನ" ಚಿತ್ರಕ್ಕೆ ಮೊದಲೇ ನಾನು "ಉದ್ಘರ್ಷ ಚಿತ್ರಕ್ಕಾಗಿ ಸಹಿ ಮಾಡಿದ್ದೆ ಎಂದು ತಾನ್ಯಾ ಹೇಳಿದ್ದಾರೆ. "ಈ ಸಿನಿಮಾ ಬಗ್ಗೆ ಮಾತನಾಡುವಾಗ ನಾನು ಕನ್ನಡದ ಪ್ರಸಿದ್ದ ನಿರ್ದೇಶಕರು ನನ್ನ ಬಳಿ ಬಂದು ಚಿತ್ರಕಥೆ ವಿವರಿಸಿ ನನ್ನ ಪಾತ್ರದ ಬಗೆಗೆ ಹೇಳಿದ್ದನ್ನು ನೆನೆಯಬೇಕಾಗುತ್ತದೆ. ಸುನೀಲ್ ಕುಮಾರ್ ದೇಸಾಯಿ ಅಷ್ಟು ದೊಡ್ಡ ನಿರ್ದೇಶಕರಾಗಿದ್ದರೂ ನನ್ನ ಬಳಿ ಬಂದು ಕಥೆ ವಿವರಿಸಿದ್ದರು. ಆಗಲೇ ನಾನು ನಿರ್ಧರಿಸಿದೆ, ಎರಡನೇ ಮಾತನಾಡದೇ ಈ ನಿರ್ದೇಶಕರ ಕೆಳಗೆ ಕೆಲಸ ಮಾಡಲೇಬೇಕು. ಬಳಿಕ ನನಗೆ ತಿಳಿದದ್ದೆಂದರೆ ಇಂತಹಾ ನಿರ್ದೇಶಕರ ಬಳಿ ಕೆಲಸ ಮಾಡಿದರೆ ನಾನೂ ಸಹ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಲು ಅವಕಾಶವಿದೆ." ತಾನ್ಯಾ ಹೇಳಿದ್ದಾರೆ.
ಒಂದು ರಾತ್ರಿಯಲ್ಲಿ ನಡೆಯುವ ಕಥಾನಕ "ಉದ್ಘರ್ಷ" ದಲ್ಲಿ ನಟಿಸಿರುವ ಅನುಭವ ನನ್ನ ಪಾಲಿಗೆ ಅತೀ ಹೊಸದಾಗಿತ್ತು. "ನನ್ನ ಪಾಲಿನ ಚಿತ್ರೀಕರಣ ಬಹುಪಾಲು ಕೊಡಗಿನಲ್ಲಿ ನಡೆದಿತ್ತು. ಅದೂ ದಟ್ಟ ಅಡವಿಯ ನಡುವೆ ಚಿತ್ರೀಕರಣ ಸಾಗಿತ್ತು. ಧನ್ಸಿಕಾ, ನಾನು ಹಾಗೂ ಅನೂಪ್ ಜತೆಯಾಗಿ ಸೆಟ್ ನಲ್ಲಿದ್ದೆವು. ನಾವು ಸಾಕಷ್ಟು ಹಾಸ್ಯ,  ವಿನೋದಗಳೊಡನೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು ಇಷ್ಟು ದಿನಗಳಲ್ಲಿ ಯಾರೊಬ್ಬರಿಗೆ ಬೇಸರವನ್ನುಂಟು ಮಾಡಿಲ್ಲ.
"ಉದ್ಘರ್ಷ ನನ್ನ ಮೊದಲ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನಾನು ಯಾವುದೇ ಒಂದೇ ಬಗೆಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟ ಪಡಲಾರೆ. ಪ್ರತಿ ಚಿತ್ರವೂ ನನ್ನ ವೃತ್ತಿಜೀವನಕ್ಕೆ  ಹೊಸ ಅನುಭವ, ಹೊಸಬಗೆಯ ತರಬೇತಿ ನೀಡುವಂತಿರಬೇಕೆಂದು ಣಾನು ಆಶಿಸುತ್ತೇನೆ. ನನಗೆ ಸಾಧ್ಯವಾದಷ್ಟು ಉತ್ತಮ ಚಿತ್ರಗಳಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಬಯಸುತ್ತೇನೆ.
"ನಾನು ಪ್ರಸ್ತುತ ನನ್ನ ಬಳಿ ಬರುವ ಯಾವ ಅವಕಾಶವನ್ನೂ ವ್ಯರ್ಥವಾಗಲು ಬಿಡಲಾರೆ." ತಾನ್ಯಾ ಹೇಳಿದ್ದಾರೆ. ಇನ್ನು ಚಿತ್ರರಂಗ, ಅಭಿನಯದ ಹೊರತು ಅವರು ಹಾಸ್ಯ ಅಥವಾ ಕಾಮಿಡಿ ಶೋಗಳನ್ನು ಇಷ್ಟ ಪಡುತ್ತಾರೆ. ಒಂದೊಮ್ಮೆ ಚಿತ್ರದ ಅಂತ್ಯ ದುಃಖಭರಿತವಾಗಿದ್ದರೆ ಆಗ ಅದೇ ಭಾವವು ಸಾಕಷ್ಟು ದಿನ ಉಳಿಯುವ ಸಾಧ್ಯತೆ ಇದೆ, ಹಾಗಾಗಿ ನಾನು ಹಾಸ್ ಸನ್ನಿವೇಶವನ್ನು ಹೆಚ್ಚು ಇಷ್ಟ ಪಡುತ್ತೇನೆ. ಇದರಿಂದ ಮನಸ್ಸು ಹಗುರಾಗುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com