ಬೆಲ್ ಬಾಟಮ್ ಯಶಸ್ಸಿನ ನಂತರ 'ಆ್ಯಂಟಗನಿ ಶೆಟ್ಟಿ' ಆಗುತ್ತಿದ್ದಾರೆ ರಿಷಬ್ ಶೆಟ್ಟಿ!

‘ಆ್ಯಂಟಗನಿ ಶೆಟ್ಟಿ’ ಚಿತ್ರದ ಮೂಲಕ ರಿಷಬ್ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಕಾಲಿಡುತ್ತಿದ್ದಾರೆ. ಉತ್ತರ ಕರ್ನಾಟಕ ಮೂಲದ ಸಮಥ್‌ರ್‍ ಕಡಕೋಳ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ..
‘ಆ್ಯಂಟಗನಿ ಶೆಟ್ಟಿ’ ಚಿತ್ರದ ಪೋಸ್ಟರ್
‘ಆ್ಯಂಟಗನಿ ಶೆಟ್ಟಿ’ ಚಿತ್ರದ ಪೋಸ್ಟರ್
Updated on: 
ಬೆಲ್ ಬಾಟಮ್ ಯಶಸ್ಸಿನ ನಂತರ ನಟ ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಪಕರಾಗಲು ಹೊರಟಿದ್ದಾರೆ. 
‘ಆ್ಯಂಟಗನಿ ಶೆಟ್ಟಿ’ ಚಿತ್ರದ ಮೂಲಕ  ರಿಷಬ್ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಕಾಲಿಡುತ್ತಿದ್ದಾರೆ. ಉತ್ತರ ಕರ್ನಾಟಕ ಮೂಲದ ಸಮಥ್‌ರ್‍ ಕಡಕೋಳ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 
ಸಮರ್ಥ ಹೇಳಿದ ಕತೆ ಕೇಳಿ ಖುಷಿಯಾಯಿತು. ನಾನೇ ಸಿನಿಮಾ ನಿರ್ಮಾಣ ಮಾಡಲು ಒಪ್ಪಿಕೊಂಡೆ. ಪಾತ್ರದ ಕುರಿತು ಈಗ ಹೆಚ್ಚು ಹೇಳಲಾರೆ. ನನಗೂ ಈ ಪಾತ್ರಕ್ಕೂ ಹತ್ತಿರದ ಕನೆಕ್ಷನ್‌ ಇದೆ. ಒಂದು ವಿಭಿನ್ನ ಪಾತ್ರ ಅಂತ ಹೇಳಬಲ್ಲೆ ಅಷ್ಟೇ ಎಂದು ರಿಷಬೇ ಹೇಳಿದ್ದಾರೆ. 
ಮುಂದಿನ ವರ್ಷದ ಆರಂಭದಲ್ಲಿ ಈ ಸಿನಿಮಾ ಶುರುವಾಗಲಿದೆ. ಈಗಷ್ಟೇ ಪೋಸ್ಟರ್‌ ಬಿಡುಗಡೆ ಆಗಿದ್ದು, ಸಮರ್ಥ್ ಮತ್ತು ಶ್ರೀಪಾದ ಜೋಶಿ ಚಿತ್ರಕತೆ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com