ನಾಯಕ ನಟ, ನಿರ್ದೇಶಕ ತೇಜ್
ಸಿನಿಮಾ ಸುದ್ದಿ
ಕನ್ನಡದಲ್ಲಿ 'ರಿವೈಂಡ್' ಮಾಡುತ್ತಿರುವ ತೇಜ್
ತಮಿಳು ಚಿತ್ರ ಮೂಲಕ ತೇಜ್ ಅವರ ಸಿನಿಮಾ ವೃತ್ತಿ ಆರಂಭವಾದರೂ ಕೂಡ ತಾವು ಪಕ್ಕಾ ಬೆಂಗಳೂರಿಗ ...
ತಮಿಳು ಚಿತ್ರ ಮೂಲಕ ತೇಜ್ ಅವರ ಸಿನಿಮಾ ವೃತ್ತಿ ಆರಂಭವಾದರೂ ಕೂಡ ತಾವು ಪಕ್ಕಾ ಬೆಂಗಳೂರಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕೊಂಜಮ್ ವೆಯಿಲ್ ಕೊಂಜಮ್ ಮಝೈ, ಕಾದಲಕ್ಕು ಮರನಾಮ್ ಇಲ್ಲೈ, ಗಾಂತಮ್ ಮತ್ತು ಮೊಜಿವಾತು ಯತನೀಲ್ ಮುಂತಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ತೇಜ್ 9 ವರ್ಷಗಳ ನಂತರ ಕನ್ನಡದ ರಿವೈಂಡ್ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.
ಇದು ಕನ್ನಡ ಮತ್ತು ತಮಿಳು ದ್ವಿಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಆಕ್ಷನ್ -ಕಟ್ ತೇಜ್ ಅವರದ್ದೇ. ಬೆಂಗಳೂರು ಮತ್ತು ಸಿಂಗಾಪುರಗಳಲ್ಲಿ ಚಿತ್ರೀಕರಣ ಶೆಡ್ಯೂಲ್ ಮಾಡಿಕೊಂಡಿದ್ದು ಜರ್ಮನಿ ಮತ್ತು ಲಿತುಯೇನಿಯಾದ ಆಕರ್ಷಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂದರು.
ಚಿತ್ರದಲ್ಲಿ ಇಬ್ಬರು ನಾಯಕಿಯರಂತೆ. ಚಂದನ ಒಬ್ಬ ನಾಯಕಿಯಾದರೆ ಮತ್ತೊಂದು ನಾಯಕಿಯ ಹುಡುಕಾಟ ನಡೆಯುತ್ತಿದೆ. ಸಂಪತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಂದರ್ ರಾಜ್, ಮಂಡ್ಯ ರವಿ, ಆನಂದ್ ಕೂಡ ಚಿತ್ರದಲ್ಲಿದ್ದಾರೆ. ವಿಲನ್ ಪಾತ್ರ ಮಾಡಲು ಚೀನಾದ ಪ್ರಮುಖ ಕಲಾವಿದರೊಬ್ಬರ ಜೊತೆ ಚಿತ್ರತಂಡ ಮಾತುಕತೆ ಹಂತದಲ್ಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ