ಅರುಂಧತಿ ನಾಗ್
ಸಿನಿಮಾ ಸುದ್ದಿ
ದೇಶ ಸರ್ವಾಧಿಕಾರತ್ವದ ಹಿಡಿತಕ್ಕೆ: ಅರುಂಧತಿ ನಾಗ್ ಆತಂಕ
ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಹೆಸರಾಂತ ರಂಗಕರ್ಮಿ, ಅರುಂದತಿ ನಾಗ್ ಆತಂಕ ವ್ಯಕ್ತಪಡಿಸಿದ್ದಾರೆ.ಚುನಾವಣಾ ಪ್ರಕ್ರಿಯೆಯಲ್ಲಿ ನೈಜ ವಿಷಯಗಳು ಸಮಾಧಿಯಾಗಿದ್ದು, ಒಂದು ದೇಶವಾಗಿ, ಸರ್ವಾಧಿಕಾರ ವ್ಯವಸ್ಥೆಯತ್ತ ಹೋಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಯಾದದ್ದು ಅಲ್ಲ ಎಂದಿದ್ದಾರೆ.
ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಹೆಸರಾಂತ ರಂಗಕರ್ಮಿ, ಅರುಂದತಿ ನಾಗ್ ಆತಂಕ ವ್ಯಕ್ತಪಡಿಸಿದ್ದಾರೆ.ಚುನಾವಣಾ ಪ್ರಕ್ರಿಯೆಯಲ್ಲಿ ನೈಜ ವಿಷಯಗಳು ಸಮಾಧಿಯಾಗಿದ್ದು, ಒಂದು ದೇಶವಾಗಿ, ಸರ್ವಾಧಿಕಾರ ವ್ಯವಸ್ಥೆಯತ್ತ ಹೋಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಯಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ನಾನು ಸಂಪೂರ್ಣವಾಗಿ ಗೊಂದಲಮಯ ಹಾಗೂ ಒತ್ತಡದ ಸಂದರ್ಭದಲ್ಲಿದ್ದೇನೆ. ಕಳೆದ ಬಾರಿ ಅಧಿಕಾರಿ ಹಿಡಿದಿದ್ದ ಬಿಜೆಪಿ ಈ ಬಾರಿಯೂ ಅಧಿಕಾರ ಹಿಡಿಯುವುದು ಪ್ರಜಾಪ್ರಭುತ್ವಕ್ಕೆ ನ್ಯಾಯಸಮ್ಮತವಲ್ಲ, ಅಮೆರಿಕಾ, ಇಐ ಸಾಲ್ವಡಾರ್, ವೆನೆಜುವೆಲಾ, ರಷ್ಯಾ ಅಥವಾ ಭಾರತ ಮತ್ತಿತರ ರಾಷ್ಟ್ರಗಳು ಸರ್ವಾಧಿಕಾರತ್ವದ ಸಾಗುತ್ತಿರುವುದು ಆತಂಕ ಹುಟ್ಟಿಸಿದೆ ಎಂದು ಹೇಳಿದ್ದಾರೆ.
ಸಮಾಜದ ಧ್ವನಿಯಾಗಿ ವಿಶ್ವದ ರಂಗಭೂಮಿ ಹೆಜ್ಜೆ ಇಡಲು ಇದು ಸೂಕ್ತ ಸಂದರ್ಭವಾಗಿದೆ ಎಂದು 62 ವರ್ಷದ ರಂಗ ಚಿಂತಕಿ ಅರುಂಧತಿ ನಾಗ್ ಅಭಿಪ್ರಾಯಪಟ್ಟಿದ್ದಾರೆ.
ರಂಗ ಕಲಾವಿದರಾಗಿ ಸರಿಯಾದ ಮೌಲ್ಯಗಳ ಪರ ನಿಲುವು ತಾಳಬೇಕಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕಿದೆ. ಇದಲ್ಲದೇ ರಂಗಕರ್ಮಿಗಳು ಇನ್ನೇನು ಮಾಡಬೇಕು? ಈ ಸಂದರ್ಭದಲ್ಲಿ ಜನರ ಭಾಷೆಯಲ್ಲಿ ರಂಗಭೂಮಿ ಮಾತನಾಡಬೇಕಿದೆ. ಇದು ಎಚ್ಚರಿಸುವ ಕರೆ ಎಂದು ಭಾವಿಸುವುದಾಗಿ ಅವರು ಹೇಳಿದ್ದಾರೆ.
ಪ್ರಸ್ತುತ ಸರ್ಕಾರ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎಂದು ನಾನು ಹೇಳುವುದಿಲ್ಲ, ಆದರೆ, ತಪ್ಪಿನ ಅಂಶಗಳ ಬಗ್ಗೆ ಮಾತನಾಡುತ್ತಿದೆ. ನಾವು ಈಗಾಗಲೇ ಯುದ್ಧ ಮಾಡಿದ್ದು, ಹಲವರು ಹುತಾತ್ಮರಾಗಿದ್ದಾರೆ. ಮಾಸ್ಕಟ್ ನಂತೆ ಚುನಾವಣೆಯಲ್ಲಿ ಸೈನಿಕರನ್ನು ಮುಂಚೂಣಿಗೆ ತರುವುದು ನ್ಯಾಯಸಮ್ಮತ ಒಪ್ಪಂದವಲ್ಲ ಎಂದಿದ್ದಾರೆ.


