'ಗೀತಾ' ಚಿತ್ರದ ಒಂದು ದೃಶ್ಯ
ಸಿನಿಮಾ ಸುದ್ದಿ
ಜೂನ್ ಮೊದಲ ವಾರದಿಂದ ಗೋಲ್ಡನ್ ಸ್ಟಾರ್ ಗಣೇಶ್ 'ಗೀತಾ' ಡಬ್ಬಿಂಗ್ ಶುರು
ವಿಜಯ್ ನಾಗೇಂದ್ರ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿರುವ ಚಿತ್ರ "ಗೀತಾ"ಗೆ ಜೂನ್ ಮೊದಲ ವಾರದಿಂದ ಡಬ್ಬಿಂಗ್ ಕೆಲಸ ಪ್ರಾರಂಭವಾಗಲಿದೆ.
ವಿಜಯ್ ನಾಗೇಂದ್ರ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿರುವ ಚಿತ್ರ "ಗೀತಾ"ಗೆ ಜೂನ್ ಮೊದಲ ವಾರದಿಂದ ಡಬ್ಬಿಂಗ್ ಕೆಲಸ ಪ್ರಾರಂಭವಾಗಲಿದೆ.ಚಿತ್ರವನ್ನು ಎಸ್.ಎಸ್. ಫಿಲ್ಮ್ಸ್ ಸಹಯೋಗದಲ್ಲಿ ಗೋಲ್ಡನ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಈ ಹಿಂದೆ ಪತ್ರಿಕೆಯೊಡನೆ ಮಾತನಾಡಿದ್ದ ನಟ ಗಣೇಶ್ "ಗೀತಾ" ತಮ್ಮ ವೃತ್ತಿಜೀವನದಲ್ಲಿ ಬಹಳ ವಿಶೇಷವಾದ ಚಿತ್ರವೆಂದು ಹೇಳಿದ್ದರು. 1980 ರ ದಶಕದಲ್ಲಿ ಶಂಕರ್ ನಾಗ್ ನಟಿಸಿದ್ದ ಇದೇ ಶಿರ್ಷಿಕೆಯ ಚಿತ್ರ ಭಾರೀ ಜನಪ್ರಿಯತೆ ಗಳಿಸಿತ್ತು.
ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಇನ್ನೂ ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಚಿತ್ರತಂಡ ಈ ಹಾಡುಗಳ ಚಿತ್ರೀಕರಣವನ್ನು ಜುಲೈನಲ್ಲಿ ಪ್ರಾರಂಭಿಸಲು ಯೋಜಿಸಿದೆ.ಚಿತ್ರದಲ್ಲಿ ಮೂವರು ನಾಯಕಿಯರಿರಲಿದ್ದಾರೆ. ಇದರಲ್ಲಿ ಪಾರ್ವತಿ ಅರುಣ್ ಗೆ ಇದು ಚೊಚ್ಚಲ ಚಿತ್ರ, ಹಾಗೆಯೇ ಪ್ರಯಾಗಾ ಮಾರ್ಟಿನ್ ಕನ್ನಡದಲ್ಲಿ ಇದೇ ಪ್ರಥಮ ಬಾರಿಗೆ ಅಭಿನಯಿಸುತ್ತಿದ್ದಾರೆ.
ಚಿತ್ರದಲ್ಲಿ ಗಣೇಶ್ ಜತೆಗೆ ಶಾನ್ವಿ ಶ್ರೀವಾಸ್ತವ ಸಹ ಇರಲಿದ್ದು ಇದು ಶಾನ್ವಿ-ಗಣೇಶ್ ಜೋಡಿಯ ಎರಡನೇ ಚಿತ್ರವಾಗಿದೆ.ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

