ಸನಾ ತಿಮ್ಮಯ್ಯ
ಸನಾ ತಿಮ್ಮಯ್ಯ

ಹೆಸರು ಬದಲಾಯಿಸಿಕೊಂಡ 'ಒಡೆಯ' ನಾಯಕಿ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಚೊಚ್ಚಲ ಬಾರಿಗೆ ನಾಯಕಿಯಾಗಿ ಅಭಿನಯಿಸಿರುವ ಮಾಡೆಲ್, ನಟಿ ರಾಘವಿ ತಿಮ್ಮಯ್ಯ ತಮ್ಮ ಹೆಸರನ್ನು ಸನಾ ತಿಮ್ಮಯ್ಯ ಎಂದು ಬದಲಾಯಿಸಿಕೊಂಡಿದ್ದಾರೆ.
Published on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಚೊಚ್ಚಲ ಬಾರಿಗೆ ನಾಯಕಿಯಾಗಿ ಅಭಿನಯಿಸಿರುವ ಮಾಡೆಲ್, ನಟಿ ರಾಘವಿ ತಿಮ್ಮಯ್ಯ ತಮ್ಮ ಹೆಸರನ್ನು ಸನಾ ತಿಮ್ಮಯ್ಯ ಎಂದು ಬದಲಾಯಿಸಿಕೊಂಡಿದ್ದಾರೆ.

ದಾಖಲಾತಿಗಳಲ್ಲಿರುವ ಮೂಲ ಹೆಸರು, ಬೆಳ್ಳಿ ತೆರೆಗೆ  ಸರಿ ಹೊಂದದ ಕಾರಣ ಹೆಸರನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದೆ. ಒಡೆಯ ಚಿತ್ರ ತಂಡ ಹಾಗೂ ಪೋಷಕರೊಂದಿಗೆ ಸಮಾಲೋಚಿಸಿ ಹೆಸರು ಬದಲಾಯಿಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಹೊಸ ಹೆಸರಿನೊಂದಿಗೆ ತನ್ನ ವೃತ್ತಿ ಜೀವನ ಚೆನ್ನಾಗಿರಲಿದೆ ಎಂಬ ಭರವಸೆಯನ್ನು ಅವರು ಹೊಂದಿದ್ದಾರೆ. ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ. ಸಕಾರಾತ್ಮಕ ಯೋಚನೆಗಳಿಂದ ಮುನ್ನುಗ್ಗುವುದಾಗಿ ಹೇಳಿದ ಅವರು, ಒಡೆಯ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೋಢಕ್ಷನ್ ಹಂತದಲ್ಲಿದೆ ಡಿಸೆಂಬರ್ ವೇಳೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಸಂದೇಶ್ ಪ್ರೊಢಕ್ಷನ್ ನಂತಹ ದೊಡ್ಡ ಬ್ಯಾನರ್ ಹಾಗೂ ದರ್ಶನ್ ,ನಿರ್ದೇಶಕ ಎಂಡಿ ಶ್ರೀಧರ್ ಅವರೊಟ್ಟಿಗೆ ಕೆಲಸ 
ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದದ್ದು ತುಂಬಾ ಸಂತೋಷವನ್ನುಂಟು ಮಾಡಿದೆ. ನಾನು ಸೂಪರ್ ಲಕ್ಕಿ ಅಂತಾ ಪ್ರತಿಯೊಬ್ಬರು ಹೇಳುತ್ತಿದ್ದಾರೆ . ಶೂಟಿಂಗ್ ಸನ್ನಿವೇಶ ತುಂಬಾ ಹಿತಕರವಾಗಿತ್ತು ಎಂದು ಗ್ಲಾಮರ್ ಬೆಡಗಿ ಸನಾ ತಿಮ್ಮಯ್ಯ ಹೇಳಿದ್ದಾರೆ.

ನಟನೆ ಬಗ್ಗೆ ಯಾವಾಗಲೂ ಆಸಕ್ತಿ ಇತ್ತು. ಆದರೆ, ಇಂಡಸ್ಟ್ರೀಯಲ್ಲಿ ಯಾರೂ ಮಾರ್ಗದರ್ಶಕರು ಇರಲಿಲ್ಲ. ರಂಗ ತರಬೇತಿ ವೇಳೆಯಲ್ಲಿ ಜಾಹಿರಾತುಗಾಗಿ ಆಡಿಷನ್ ಕೊಡಲು ಶುರು ಮಾಡಿದ್ದೆ. ಆ ಸಂದರ್ಭದಲ್ಲಿ ದರ್ಶನ್ ಜೊತೆಗಿನ ನಾಯಕಿಗಾಗಿ ಸಂದೇಶ್ ಪ್ರೊಢಕ್ಷನ್ ಹುಡುಕಾಟದ ಬಗೆ ತಿಳಿಯಿತು.ನಂತರ ಆಡಿಷನ್ ಗೆ ಹೋಗಿ ಪಾತ್ರ ಗಿಟ್ಟಿಸಿಕೊಂಡಿದ್ದಾಗಿ ಸನಾ ನೆನಪಿಸಿಕೊಳ್ಳುತ್ತಾರೆ. 

ಸಿನಿಮಾ ಮತ್ತೊಂದು ಶಾಲೆ, ಒಡೆಯ ಶೆಟ್ ನನ್ನ ತರಗತಿಯಾಗಿತ್ತು. ಕಲಾವಿದರಿಗೆ ದೈಹಿಕ ಹಾಗೂ ಮಾನಸಿಕ ಸ್ಥಿಮಿತತ್ತೆ ಬಹಳ ಮುಖ್ಯವಾಗಿರುತ್ತದೆ ಎನ್ನುವ ಸನಾ, ಎರಡನೇ ಸಿನಿಮಾದ ಕಥೆ ಓದಲು ಪ್ರಾರಂಭಿಸಿದ್ದಾರೆ. ದರ್ಶನ್ ಅವರೊಟ್ಟಿಗೆ ಒಡೆಯದಲ್ಲಿ ನಟಿಸಿದ ನಂತರ ಎಲ್ಲಾರ ಗಮನ ತಮ್ಮತ್ತ ಬಿದ್ದಿದ್ದು, ಉತ್ತಮ ಚಿತ್ರಕಥೆಯತ್ತ ಎದುರು ನೋಡುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com