ಕನ್ನಡ ಬಿಗ್‍ಬಾಸ್ ಮನೆಯಲ್ಲಿ ದೀಪಿಕಾ-ಭೂಮಿ ಶೆಟ್ಟಿ ಲಿಪ್ ಲಾಕ್: ವಿಡಿಯೋ ವೈರಲ್!

ಈ ಬಾರಿ ಸೆಲೆಬ್ರಿಟಿಗಳಿಂದ ಕೂಡಿರುವ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿ ಎಂಬಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ.
ಭೂಮಿ ಶೆಟ್ಟಿ-ದೀಪಿಕಾ ದಾಸ್
ಭೂಮಿ ಶೆಟ್ಟಿ-ದೀಪಿಕಾ ದಾಸ್
Updated on

ಬೆಂಗಳೂರು: ಈ ಬಾರಿ ಸೆಲೆಬ್ರಿಟಿಗಳಿಂದ ಕೂಡಿರುವ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿ ಎಂಬಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. 

ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಕಿಸ್ಸಿಂಗ್ ವಿಚಾರಗಳು. ನಿನ್ನೆಯಷ್ಟೇ ಚಂದನಾಗೆ ಕಿಶ್ ಕಿಸ್ ಮಾಡಿದ್ದರು. ಇದು ಬಾರಿ ಚರ್ಚೆಗೆ ಕಾರಣವಾಗಿತ್ತು. ಇದರ ಮಧ್ಯೆ ಇದೀಗ ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಲಿಪ್ ಲಾಕ್ ದೃಶ್ಯಗಳು ಸದ್ದು ಮಾಡುತ್ತಿವೆ. 

ಬೆಳಗ್ಗೆ ಈ ಇಬ್ಬರು ತುಟಿಗೆ ತುಟಿಯಿಟ್ಟು ಕಿಸ್ ಮಾಡಿದ್ದಾರೆ. ಇದನ್ನು ಕಂಡ ಹರೀಶ್ ರಾಜ್ ಇಲ್ಲಿ ಏನು ನಡೆಯುತ್ತಿದೆ ಎಂದು ಕಂಗಾಲಾದರು. ಇನ್ನು ಈ ಇಬ್ಬರ ಲಿಪ್ ಲಾಕ್ ಸದ್ಯ ಬಿಗ್ ಬಾಸ್ ಮನೆಯಲ್ಲಿರುವವರ ತಲೆಯನ್ನು ಕೆಡಿಸಿದೆ. ಇದಕ್ಕೆ ಉತ್ತರ ಸಿಗಬೇಕಾದರೆ ವಾರಂತ್ಯದವರೆಗೂ ಕಾಯಬೇಕು. 

ಸದ್ಯ ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಲಿಪ್ ಲಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com