ಬಂಡೀಪುರ ಅರಣ್ಯ ಸಿಬ್ಬಂದಿ, ಮಾವುತರೊಂದಿಗೆ ಇಡೀ ದಿನ ಕಳೆದ ರೋರಿಂಗ್​ ಸ್ಟಾರ್​

ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿರುವ ಶ್ರೀಮುರಳಿ, ಅಲ್ಲಿರುವ ಕಾಡು ಜನ ಹಾಗೂ ಅರಣ್ಯ ಸಿಬ್ಬಂದಿ ಅವರೊಂದಿಗೆ ಗುಡಿಸಲಿಗೆ ಭೇಟಿ ನೀಡಿ ಅಲ್ಲಿನ ಜನರ ಜೊತೆ ಕಾಲ‌‌ ಕಳೆದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ
ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ
Updated on: 

ಬೆಂಗಳೂರು: ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿರುವ ಶ್ರೀಮುರಳಿ, ಅಲ್ಲಿರುವ ಕಾಡು ಜನ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕೆಲ ಸಮಯ ಕಳೆದರು. 

ಕರ್ನಾಟಕ ಸರ್ಕಾರದ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಸೆಪ್ಟೆಂಬರ್ ನಲ್ಲಿ ಆಯ್ಕೆಯಾದ ‌ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಸಿನಿಮಾ ಪ್ರಚಾರ, ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಬಂದು ಅಲ್ಲಿನ ಸಿಬ್ಬಂದಿ ಮತ್ತು ವನವಾಸಿಗಳೊಂದಿಗೆ ಕಳೆದು ಖುಷಿಪಟ್ಟರು. 

ಬಂಡೀಪುರದಲ್ಲಿ ಅರಣ್ಯಾಧಿಕಾರಿಗಳ ಜೊತೆ ಸುತ್ತಾಡಿ ಪ್ರಕೃತಿ ಸೌಂದರ್ಯ, ಪ್ರಾಣಿ ಪಕ್ಷಿಗಳನ್ನು ನೋಡುತ್ತಾ ಮಾತುಕತೆಯಾಡುತ್ತಾ ಸುತ್ತಾಡಿದರು. ಅಲ್ಲಿನ ಸಿಬ್ಬಂದಿ ಮತ್ತು  ಕಾಡುಜನರ ಗುಡಿಸಲುಗಳಿಗೆ ಭೇಟಿ ನೀಡಿದರು. ಅಲ್ಲಿದ್ದ ಮಕ್ಕಳಿಗೆ ಕೆಲವೊಂದು ಉಡುಗೊರೆಗಳನ್ನು ನೀಡಿದರು. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನೌಕರರು .ಮಾವುತರು ಹಾಗೂ ಕಾಡಿನ ಜನರೊಂದಿಗೆ ರೋರಿಂಗ್ ಸ್ಟಾರ್ ಮುರುಳಿ

ವರದಿ: ಗೂಳಿಪುರ ನಂದೀಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com