ಕನ್ನಡದ ನಟಿ ನಮಿಕಾ ರತ್ನಾಕರ್ ಸ್ಯಾಂಡಲ್ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ವರ್ಜಿನ್ ಶೀರ್ಷಿಕೆ ಕೇಳಿ ಭಯಪಟ್ಟಿದೆ ಎಂದು ಹೇಳಿದ್ದಾರೆ.
ಕೃಷ್ಣ ಅಭಿನಯದ ವರ್ಜಿನ್ ಚಿತ್ರಕ್ಕೆ ನಮಿಕಾ ರತ್ನಾಕರ್ ನಟಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಚಿತ್ರದ ಕಥೆ ಕೇಳುವಾಗ ಚಿತ್ರಕ್ಕೆ ವರ್ಜಿನ್ ಎಂಬ ಶೀರ್ಷಿಕೆ ಇಡಲಾಗುವುದು ಎಂದು ಹೇಳಿದ್ದರು. ಈ ಟೈಟಲ್ ಕೇಳಿ ನನ್ನಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದವು ಎಂದು ಹೇಳಿದರು.
ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ಬಿ ನಾಯ್ಡು ಅವರು ಇದೀಗ ಸ್ವತಂತ್ರ ನಿರ್ದೇಶಕರಾಗಿ ವರ್ಜಿನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ವರ್ಜಿನ್ ಟೈಟಲ್ ಕೇಳುತ್ತಿದ್ದಂತೆ ಒಂದೊಂದು ಬೋಲ್ಡ್ ಸಿನಿಮಾ ಎಂಬ ಭಾವನೆ ಬರುತ್ತದೆ. ಆದರೆ ಇದೊಂದು ಕ್ಯುಟ್ ಲವ್ ಸ್ಟೋರಿ ಎಂದು ಹೇಳಿದರು.
Advertisement