'ಕಿಸ್ 'ಯಶಸ್ಸಿನ ನಂತರ ಮತ್ತೊಮ್ಮೆ ಅರ್ಜುನ್-ವಿರಾಟ್ ಜೋಡಿಯ ಚಿತ್ರ?

ಹೊಸಮುಖಗಳಾದ ವಿರಾಟ್ ಮತ್ತು ಶ್ರೀಲೀಲಾ ಜೋಡಿಯ "ಕಿಸ್" ಚಿತ್ರ ರಾಜ್ಯಾದ್ಯಂತ ಅತ್ಯುತ್ತಮ ಪ್ರದರ್ಶನ ಕಂಡಿದೆ. 5 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. 
ವಿರಾಟ್ ಹಾಗೂ ಎಪಿ ಅರ್ಜುನ್
ವಿರಾಟ್ ಹಾಗೂ ಎಪಿ ಅರ್ಜುನ್
Updated on

ಹೊಸಮುಖಗಳಾದ ವಿರಾಟ್ ಮತ್ತು ಶ್ರೀಲೀಲಾ ಜೋಡಿಯ "ಕಿಸ್" ಚಿತ್ರ ರಾಜ್ಯಾದ್ಯಂತ ಅತ್ಯುತ್ತಮ ಪ್ರದರ್ಶನ ಕಂಡಿದೆ. 5 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. ಇದೀಗ ನಿರ್ದೇಶಕ, ನಿರ್ಮಾಪಕರು ಚಿತ್ರವನ್ನು ಶತದಿನಗಳ ಗಡಿ ತಲುಪಿಸುವ ಉತ್ಸಾಹದಲ್ಲಿದ್ದಾರೆ. ಹೊಸಬರನ್ನೇ ಹಾಕಿಕೊಂಡು ಚಿತ್ರ ನಿರ್ಮಿಸಿದವರಿಗೆ ಇದೊಂದು ಸವಾಲಾಗಿರಲಿದೆ.

"ಕಿಸ್" ಬಿಡುಗಡೆಯಾಗಿದ್ದ ವಾರ ಅನೇಕ ದೊಡ್ಡ ಚಿತ್ರಗಳು ತೆರೆಗೆ ಬಂದಿದ್ದವು.ಬಿಡುಗಡೆಯಾದ ಮೊದಲ ವಾರದಲ್ಲಿ ಚಿತ್ರ ಹೆಚ್ಚು ಸದ್ದು ಮಾಡಿಲ್ಲವಾಗಿಯೂ ಎರಡನೇ ವಾರದಿಂದ ಚೆನ್ನಾಗಿ ಪ್ರತಿಕ್ರಿಯೆ ಬಂದಿದೆ. ಯುವಜನತೆ ಸೇರಿದಂತೆ ಚಿತ್ರಪ್ರೇಮಿಗಳಲ್ಲಿ ಚಿತ್ರ ಇನ್ನೂ ತನ್ನತ್ತ ಸೆಳೆಯುತ್ತಿರುವುದಕ್ಕೆ ನನಗೆ ಖುಷಿ ಇದೆ.ಎಂದು ಎಪಿ ಅರ್ಜುನ್ ಹೇಳಿದ್ದಾರೆ.

ಚಿತ್ರದ ಶೀರ್ಷಿಕೆಯ ಕಾರಣ ಅನೇಕ ಕೌಟುಂಬಿಕ ಪ್ರೇಕ್ಷಕರು ಚಿತ್ರಮಂದಿರದಿಂದ ದೂರ ಉಳಿದಿದ್ದರು.ಆದರೆ ಚಿತ್ರವು ಬಹಳಷ್ಟು ಯುವಕರನ್ನು ಸೆಳೆದಿದೆ.ಅವರಲ್ಲಿ ಹಲವರು ಎರಡು, ಮೂರು ಬಾರಿ ಚಿತ್ರ ವೀಕ್ಷಿಸಿದ್ದಾರೆ. 

ಚಿತ್ರದ ಯಶಸ್ಸಿನ ಬಳಿಕ ಅರ್ಜುನ್ ಇದೀಗ ಇನ್ನೊಂದು ಯೋಜನೆಗಾಗಿ ವಿರಾಟ್ ಬಳಿ ಸಮಾಲೋಚನೆಯಲ್ಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಆದರೆ ಈ ಚಿತ್ರದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂಬುದು ಅರ್ಜುನ್ ಬಲ್ಲ ಮೂಲಗಳ ಮಾಹಿತಿ.

ಚಿತ್ರವು ಸೆಟ್ಟೇರುವುದು ಖಚಿತವಾಗಿದ್ದಾಗ ನಿರ್ಮಾಪಕರು ಹೆಚ್ಚಿನ ವಿವರ ಪ್ರಕಟಿಸಲಿದ್ದಾರೆ. ಇದು ಬಹುತೇಕ ಡಿಸೆಂಬರ್‌ನಲ್ಲಿ ಸಂಭವಿಸಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com