ನಟ ಶೇನ್ ನಿಗಮ್ ಗೆ ನಿರ್ಮಾಪಕ ಜೋಬಿ ಜಾರ್ಜ್ ರಿಂದ ಜೀವ ಬೆದರಿಕೆ

ಮಳೆಯಾಳಂ ಚಿತ್ರರಂಗದ ಭರವಸೆಯ ಯುವ ನಟ ಶೇನ್ ನಿಗಮ್ ಅವರು, ತಾವು ಮತ್ತೊಂದು ಚಿತ್ರಕ್ಕಾಗಿ ಹೇರ್ ಕಟ್ ಮಾಡಿಸಿದ್ದಕ್ಕೆ ವೆಯಿಲ್ ಚಿತ್ರದ ನಿರ್ಮಾಪಕ ಜೋಬಿ ಜಾರ್ಜ್ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶೇನ್ ನಿಗಮ್
ಶೇನ್ ನಿಗಮ್

ಕೊಚ್ಚಿ: ಮಳೆಯಾಳಂ ಚಿತ್ರರಂಗದ ಭರವಸೆಯ ಯುವ ನಟ ಶೇನ್ ನಿಗಮ್ ಅವರು, ತಾವು ಮತ್ತೊಂದು ಚಿತ್ರಕ್ಕಾಗಿ ಹೇರ್ ಕಟ್ ಮಾಡಿಸಿದ್ದಕ್ಕೆ ವೆಯಿಲ್ ಚಿತ್ರದ ನಿರ್ಮಾಪಕ ಜೋಬಿ ಜಾರ್ಜ್ ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕುಂಬಳಂಗಿ ನೈಟ್ಸ್ ಚಿತ್ರದ ಖ್ಯಾತಿಯ ನಟ ಶೇನ್ ನಿಗಮ್ ಅವರು ಫೇಸ್ ಬುಕ್ ಲೈವ್ ಗೆ ಬಂದು ಈ ಆರೋಪ ಮಾಡಿದ್ದು, ತಮ್ಮ ಹೊಸ ಹೇರ್ ಸ್ಟೈಲ್ ನಿಂದ ವೆಯಿಲ್ ಚಿತ್ರದ ಮುಂದಿನ ಭಾಗದ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ನಿರ್ಮಾಪಕರು ಪತ್ರದ ಮೂಲಕ ಬೆದರಿಕೆ ಹಾಕಿರುವುದಾಗಿ ದೂರಿದ್ದಾರೆ.

ಈ ಸಂಬಂಧ ಜಾರ್ಜ್ ಅವರ ವಿರುದ್ಧ ಶೇನ್ ನಿಗಮ್ ಅವರು ಮಲೆಯಾಳಂ ಚಲನಚಿತ್ರ ಕಲಾವಿದರ ಸಂಘಕ್ಕೂ ದೂರು ನೀಡಿದ್ದು, ನಾನು ಈಗ ಅಸಹಾಯಕನಾಗಿದ್ದೇನೆ. ಆದರೆ ನಿಮ್ಮ ಬೆಂಬಲವಿದ್ದರೆ ಮಾತ್ರ ನಾನು ಅವರ ವಿರುದ್ಧ ಹೋರಾಡಲು ಸಾಧ್ಯ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಾನು ಈ ಹಿಂದೆ ಯಾವತ್ತೂ ಈ ರೀತಿ ಲೈವ್ ಮಾಡಿಲ್ಲ. ಆದರೆ ಪರಿಸ್ಥಿತಿ ನಿಮ್ಮ ಮುಂದೆ ಬರುವಂತೆ ಮಾಡಿತು ಎಂದು ಅಭಿಮಾನಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾನು ವೆಯಿಲ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಮತ್ತೊಂದು ಚಿತ್ರ 'ಕುರ್ಬಾನಿ'ಗಾಗಿ ಹೇರ್ ಕಟ್ ಮಾಡಿಸಿದ್ದೇನೆ. ಆದರೆ ನನ್ನ ಹೊಸ ಹೇರ್ ಸ್ಟೈಲ್ ಗೆ ಜಾರ್ಜ್ ಅವರು ವಿರೋಧ ವ್ಯಕ್ತಪಡಿಸಿದ್ದು, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com