ಅವನೇ ಶ್ರೀಮನ್ನಾರಾಯಣ, ಪೊಗರು ಡಿ.27ಕ್ಕೆ ಬಾಕ್ಸ್ ಆಫೀಸ್ ಮುಖಾಮುಖಿ!   

2019 ವರ್ಷಾಂತ್ಯ ಕನ್ನಡ ಸಿನಿಮಾ ಪ್ರಿಯರಿಗೆ ಭರ್ಜರಿಯ ಇಯರ್ ಎಂಡಿಂಗ್ ಆಗಿರಲಿದೆ. ಕಾರಣ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿವೆ. 
27  ಅವನೇ ಶ್ರೀಮನ್ನಾರಾಯಣ, ಪೊಗರು ಡಿ.27ಕ್ಕೆ ಬಾಕ್ಸ್ ಆಫೀಸ್ ಮುಖಾಮುಖಿ!
27  ಅವನೇ ಶ್ರೀಮನ್ನಾರಾಯಣ, ಪೊಗರು ಡಿ.27ಕ್ಕೆ ಬಾಕ್ಸ್ ಆಫೀಸ್ ಮುಖಾಮುಖಿ!
Updated on: 

2019 ವರ್ಷಾಂತ್ಯ ಕನ್ನಡ ಸಿನಿಮಾ ಪ್ರಿಯರಿಗೆ ಭರ್ಜರಿಯ ಇಯರ್ ಎಂಡಿಂಗ್ ಆಗಿರಲಿದೆ. ಕಾರಣ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿವೆ. 

ನಂದ ಕಿಶೋರ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಪೊಗರು ಹಾಗೂ ರಕ್ಷಿತ್ ಶೆಟ್ಟಿ ನಟನೆಯ, ನಿರ್ದೇಶಕರಾಗಿ ಸಚಿನ್ ರವಿ ಅವರ ಮೊದಲ ಸಿನಿಮಾ ಅವನೇ ಶ್ರೀಮನ್ನಾರಾಯಣ ಡಿ.27 ರಂದು ಬಿಡುಗಡೆಯಾಗಲಿವೆ. ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಹೊಸದಾಗಿ ಪ್ರಕಟಿಸಿರುವುದರಿಂದ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಖಾಮುಖಿಯಾಗಲಿವೆ.

ಅವನೇ  ಶ್ರೀಮನ್ನಾರಾಯಣ ಸಿನಿಮಾವನ್ನು ನವೆಂಬರ್ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆಯಾಗಿತ್ತು. ಆದರೆ ಈಗ ಬದಲಾದ ಯೋಜನೆಯ ಪ್ರಕಾರ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಟ್ವಿಟರ್ ನಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಬಹಿರಂಗಪಡಿಸಿದ್ದಾರೆ. 2019 ರ ಡಿ.27 ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ 3 ನೇ ವಾರ್ಷಿಕೋತ್ಸವದ ದಿನವಾಗಲಿದೆ. 

ಇನ್ನು ಪೊಗರು ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ ಧ್ರುವ ಸರ್ಜಾ ತಮ್ಮ ಇತ್ತೀಚಿನ ಮಾಧ್ಯಮ ಸಂವಾದಗಳಲ್ಲಿ ಡಿ.27 ರಂದು ಬಿಡುಗಡೆಯಾಗುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಉದ್ದೇಶ ಚಿತ್ರ ತಂಡದಲ್ಲಿದ್ದು, ಈ ನಿಟ್ಟಿನಲ್ಲಿ ಕೆಲಸಗಳು ಭರದಿಂದ ಸಾಗಿವೆ. 

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪೊಗರು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಧನಂಜಯ್ ವಿಲ್ಲನ್ ಪಾತ್ರದಲ್ಲಿ ಅಭಿನಯಿಸಿದ್ದು, ತಾರಾ, ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com