ಕನ್ನಡಕ್ಕೆ ಬಂದ ಅರ್ನಾಲ್ಡ್: 'ಟರ್ಮಿನೇಟರ್ ಡಾರ್ಕ್ ಫೇಟ್' ಟ್ರೇಲರ್ ಲಾಂಚ್ ಮಾಡಿದ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ನೆಚ್ಚಿನ ಕಿಚ್ಚ ಸುದೀಪ್ ಇದೀಗ ಹಾಲಿವುಡ್ ಚಿತ್ರವೊಂದಕ್ಕೆ ಸಹ ಸಾಥ್ ನೀಡಿದ್ದು ಈ ಮೂಲಕ ಅಂತರಾಷ್ತ್ರೀಯ ಮಟ್ಟದಲ್ಲಿ ಪ್ರಸಿದ್ದರಾಗಲು ತಯಾರಾಗಿದ್ದಾರೆ. ಸುದೀಪ್ ಹಾಲಿವುಡ್ ಕನ್ನಡ ಡಬ್ಬಿಂಗ್ಚಿತ್ರ  ಟರ್ಮಿನೇಟರ್ ನ ಕನ್ನಡ ಟ್ರೇಲರ್ ಲಾಂಚ್ ಮಾಡಿದ್ದಾರೆ.
ಕನ್ನಡಕ್ಕೆ ಬಂದ ಅರ್ನಾಲ್ಡ್: 'ಟರ್ಮಿನೇಟರ್ ಡಾರ್ಕ್ ಫೇಟ್' ಟ್ರೇಲರ್ ಲಾಂಚ್ ಮಾಡಿದ ಕಿಚ್ಚ ಸುದೀಪ್
Updated on: 

ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ನೆಚ್ಚಿನ ಕಿಚ್ಚ ಸುದೀಪ್ ಇದೀಗ ಹಾಲಿವುಡ್ ಚಿತ್ರವೊಂದಕ್ಕೆ ಸಹ ಸಾಥ್ ನೀಡಿದ್ದು ಈ ಮೂಲಕ ಅಂತರಾಷ್ತ್ರೀಯ ಮಟ್ಟದಲ್ಲಿ ಪ್ರಸಿದ್ದರಾಗಲು ತಯಾರಾಗಿದ್ದಾರೆ. ಸುದೀಪ್ ಹಾಲಿವುಡ್ ಕನ್ನಡ ಡಬ್ಬಿಂಗ್ಚಿತ್ರ  ಟರ್ಮಿನೇಟರ್ ನ ಕನ್ನಡ ಟ್ರೇಲರ್ ಲಾಂಚ್ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಹಾಲಿವುಡ್‍ನ ಟರ್ಮಿನೇಟರ್ ಡಾರ್ಕ್ ಫೇಟ್ ಕನ್ನಡದಲ್ಲಿ ಸಹ ಮೂಡಿಬರುತ್ತಿದ್ದು ಸುದೀಪ್ ಈ ಚಿತ್ರದ ಕನ್ನಡ ಟ್ರೇಲರ್ ಅನ್ನು ತಮ್ಮ ತಮ್ಮ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ನವೆಂಬರ್ 1ರಂದು ಟರ್ಮಿನೇಟರ್ ಡಾರ್ಕ್ ಫೇಟ್ ವಿಶ್ವದಾದ್ಯಂತ ತೆರೆ ಕಾಣಲಿದೆ. 

"ಅರ್ನಾಲ್ಡ್ ದೊಡ್ಡ ಆಕ್ಷನ್ ಹೀರೋಗಳಲ್ಲಿ ಒಬ್ಬರು ಮತ್ತು ನಾನು ಅವರ ಅಭಿಮಾನಿಕೂಡ ಹೌದು. ಟರ್ಮಿನೇಟರ್ ಫ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನು  ರೋಮಾಂಚನಗೊಳಿಸಿದೆ. ಫಾಕ್ಸ್‌ಸ್ಟೂಡಿಯಸ್‌ಗಾಗಿ ಕನ್ನಡ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ." ಸುದೀಪ್ ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com