
ಬೆಂಗಳೂರು: ಛಾಯಾಗ್ರಾಹಕ ಕರ್ಮ ಚಾವ್ಲಾ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಬಾಕ್ಸರ್ ಪಾತ್ರದಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಇದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 11ನೇ ಸಿನಿಮಾವಾಗಿದ್ದು, ಪ್ರಮುಖ ಕಲಾವಿದರ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ.
ಅಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್, ವಿನಯ್ ಕುಮಾರ್ ಜೋಡಿಯಾಗಲಿದ್ದಾರೆ. ಸೊಡಾ ಬುಡ್ಡಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿರುವ ಅನುಷಾ, ಲೈಪ್ 360, ಒನ್ಸ್ ಮೋರ್ ಕೌರವ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ವಿರಾಮದ ನಂತರ ಮತ್ತೆ ಬೆಳ್ಳಿ ತೆರೆಗೆ ಕಮ್ ಬ್ಯಾಕ್ ಆಗಿರುವ ಅನುಷಾ ರಂಗನಾಥ್, ಕರ್ಮ ಚಾವ್ಲಾ ಚೊಚ್ಚಲ ನಿರ್ದೇಶನದಲ್ಲಿ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕರ್ಮಾ ಚಾವ್ಲಾ ಈ ಹಿಂದೆ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಶಿಯನ್ ನೊಗರಾಜ್ , ಅವನ್ನೆ ಶ್ರೀಮನ್ ನಾರಾಯಣ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ವಿನಯ್ ರಾಜ್ ಕುಮಾರ್, ಅನುಷಾ ಹೊರತುಪಡಿಸಿದಂತೆ ಗೋಪಾಲ್ ದೇಶಪಾಂಡೆ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ಪಸ್ಟ್ ಲುಕ್ ಪೋಸ್ಟರ್ ಹಾಗೂ ಶೀರ್ಷಿಕೆಯನ್ನು ನಿರ್ಮಾಪಕರು ಬಿಡುಗಡೆ ಮಾಡಲಿದ್ದಾರೆ.
Advertisement