ಗಣೇಶೋತ್ಸವದಲ್ಲಿ ತಮಟೆ ಸದ್ದಿಗೆ 'ದೊಡ್ಮನೆ ಹುಡುಗರ' ಬಿಂದಾಸ್ ಸ್ಟೆಪ್!

ದೊಡ್ಮನೆ ಹುಡುಗರು ಸದಾಶಿವನಗರದಲ್ಲಿ ಗಣೇಶೋತ್ಸವದಲ್ಲಿ ಸ್ಟಾರ್ ಗಳೆಂಬ ಹಮ್ಮು ಬಿಮ್ಮು ಬಿಟ್ಟು ಜನಸಾಮಾನ್ಯರೊಂದಿಗೆ  ಬಿಂದಾಸ್ ಸ್ಟೆಪ್ ಹಾಕಿದ್ದಾರೆ.  
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಸಮಾಜಕ್ಕೆ  ದೊಡ್ಮನೆ ಕೊಡುಗೆ ಅಪಾರ ಹಾಗೂ ಅನನ್ಯವಾಗಿದೆ.ಕನ್ನಡ ನೆಲ, ಜಲ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಈ ಮನೆಯ ಪಾತ್ರ ಮಹತ್ವದು.

ಈ ಮನೆಯ ಯಜಮಾನ, ಕನ್ನಡ ನಾಡಿನ ಮೇರು ನಟ ಅಣ್ಣಾವ್ರು  ನಮ್ಮನ್ನು ಭೌತಿಕವಾಗಿ ಅಗಲಿ ಹಲವು ವರ್ಷಗಳಾಗಿದ್ದರೂ ನಾಡಿನ ಮನೆ ಮನೆ ಹಾಗೂ ಜನರ ಮನಸ್ಸಿನಲ್ಲಿ ಚಿರಿಸ್ಥಾಯಿಯಾಗಿ ಉಳಿದಿದ್ದಾರೆ.ಇವರ ಪುತ್ರರಾದ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್  ನಟ ಸೌರ್ವಭೌಮನ ಹೆಸರಿಗೆ ಕಳಂಕ ಬಾರದ ರೀತಿಯಲ್ಲಿ ಬದುಕು ಸಾಗಿಸುವುದರ ಜೊತೆಗೆ ನೆಲ, ಸಂಸ್ಕೃತಿ, ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಇಂತಹ ಹಿನ್ನೆಲೆ ಹೊಂದಿರುವ  ದೊಡ್ಮನೆ ಹುಡುಗರು ಸದಾಶಿವನಗರದಲ್ಲಿ ಗಣೇಶೋತ್ಸವದಲ್ಲಿ ಸ್ಟಾರ್ ಗಳೆಂಬ ಹಮ್ಮು ಬಿಮ್ಮು ಬಿಟ್ಟು ಜನಸಾಮಾನ್ಯರೊಂದಿಗೆ  ಬಿಂದಾಸ್ ಸ್ಟೆಪ್ ಹಾಕಿದ್ದಾರೆ.  ರಾಘವೇಂದ್ರ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹಾಗೂ ವಿನಯ್ ರಾಜ್ ಕುಮಾರ್  ರಸ್ತೆಯಲ್ಲಿ ತಮಟೆ ಸದ್ದಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಈ ಮೂಲಕ ಅಲ್ಲಿದ್ದವರನ್ನು ಡ್ಯಾನ್ಸ್ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುಟುಂಬದ ಸರಳತೆಗೆ ಹಿಡಿದಿ ಕೈಗನ್ನಡಿಯಂತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com