ಪೈಲ್ವಾನ್ ವೀಕ್ಷಿಸಲಿದ್ದಾರೆ ಸಲ್ಮಾನ್ ಖಾನ್

ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರವನ್ನು ತಮ್ಮ ಕುಟುಂಬ ಸದಸ್ಯರ ಜೊತೆ ವೀಕ್ಷಿಸಲಿದ್ದಾರೆ.  
ಪೈಲ್ವಾನ್ ವೀಕ್ಷಿಸಲಿದ್ದಾರೆ ಸಲ್ಮಾನ್ ಖಾನ್
ಪೈಲ್ವಾನ್ ವೀಕ್ಷಿಸಲಿದ್ದಾರೆ ಸಲ್ಮಾನ್ ಖಾನ್
Updated on

ಬೆಂಗಳೂರು: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರವನ್ನು ತಮ್ಮ ಕುಟುಂಬ ಸದಸ್ಯರ ಜೊತೆ ವೀಕ್ಷಿಸಲಿದ್ದಾರೆ.
  
ಸಲ್ಮಾನ್ ಖಾನ್ ಅವರು ಹಿಂದಿಯಲ್ಲಿ ಬಿಡುಗಡೆಯಾಗುವ ಪೈಲ್ವಾನ್ ಚಿತ್ರವನ್ನು ತಮ್ಮ ಕುಟುಂಬಸ್ಥರ ಜೊತೆ ವೀಕ್ಷಿಸಲಿದ್ದಾರೆ ಮೂಲಗಳ ಪ್ರಕಾರ ಸಲ್ಮಾನ್ ಖಾನ್ ಅವರು ಸೆ.10 ಅಂದರೆ ಮಂಗಳವಾರ ಈ ಸಿನಿಮಾವನ್ನು ನೋಡಬೇಕಿತ್ತು ಆದರೆ ಕಾರಣಾಂತರದಿಂದ ಚಿತ್ರತಂಡ ಈ ಸಿನಿಮಾವನ್ನು ಸಲ್ಮಾನ್ ಅವರಿಗೆ ತೋರಿಸಲು ಆಗಲಿಲ್ಲ ಹಾಗಾಗಿ ಈ ವೀಕೆಂಡ್ ಸಲ್ಮಾನ್ ಅವರು ಪೈಲ್ವಾನ್ ಚಿತ್ರ ನೋಡಲಿದ್ದಾರೆ
  
ಪೈಲ್ವಾನ್ ಸಿನಿಮಾ ವೀಕ್ಷಿಸಲು ಸ್ವತಃ ಸಲ್ಮಾನ್ ಅವರೇ ಆಸಕ್ತಿ ತೋರಿದ್ದು, ಮುಂಬೈನಲ್ಲಿ ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬಸ್ಥರಿಗೆ ಸ್ಪೆಷಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ನಿರ್ದೇಶಕ ಎಸ್ ಕೃಷ್ಣ ಸೇರಿದಂತೆ ಚಿತ್ರತಂಡದ ಹಲವು ಮುಖ್ಯ ವ್ಯಕ್ತಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
  
ಈ ಹಿಂದೆ ಪೈಲ್ವಾನ್ ಚಿತ್ರದ ಟೀಸರ್ ಬಿಡುಗಡೆ ಆಗಿದ್ದಾಗ ಸಲ್ಮಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಸಿನಿಮಾ ಟೀಸರ್‍ನ ಯೂಟ್ಯೂಬ್ ಲಿಂಕ್ ಹಾಕಿ, “ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್ ಪೈಲ್ವಾನ್ ಹಾಗೂ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು.
  
ಸೆ. 12ರಂದು ಅಂದರೆ ಗುರುವಾರದಂದು ಪೈಲ್ವಾನ್ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ನಂತರ ಹಿಂದಿ ಭಾಷೆಯಲ್ಲಿ ಪೈಲ್ವಾನ್ ಬಿಡುಗಡೆ ಆಗಲಿದೆ.
  
ಕರ್ನಾಟಕದಲ್ಲಿ ಪೈಲ್ವಾನ್ ಸಿನಿಮಾ 400 ಚಿತ್ರಮಂದಿರಗಳಲ್ಲಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 4 ಸಾವಿರ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

4 ಸಾವಿರ ಚಿತ್ರಮಂದಿರಗಳಿಗೆ “ಪೈಲ್ವಾನ್” ಲಗ್ಗೆ
  
ಸ್ಯಾಂಡಲ್ ವುಡ್ ನ ಖ್ಯಾತ ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಪೈಲ್ವಾನ್” ಚಿತ್ರ ಗುರುವಾರ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಶುಕ್ರವಾರ ಸೆ 13ರಂದು ಹಿಂದಿ ಭಾಷೆಯಲ್ಲಿ ತೆರೆಗೆ ಬರಲಿದೆ
  
ಒಟ್ಟು 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಿಗೆ “ಪೈಲ್ವಾನ್” ಲಗ್ಗೆ ಇಡಲಿದ್ದು, ಅಮೆರಿಕ, ಯುರೋಪ್, ಇಂಗ್ಲೆಂಡ್, ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. 
  
“ಪೈಲ್ವಾನ್ ಚಿತ್ರದಲ್ಲಿ ನಟ ಸುನಿಲ್ ಶೆಟ್ಟಿ ಅಭಿನಯಿಸಿದ್ದಾರೆ  ಅವರಿಗೆ ಭಾಷೆಯ ಸಮಸ್ಯೆ ಕಾಡಲಿಲ್ಲ  ಪರಸ್ಪರ ಗೌರವವಿದ್ದಾಗ ಭಾಷೆಗಳ ನಡುವಿನ ಗೋಡೆ ಬಿದ್ದುಹೋಗುತ್ತದೆ” ಎಂದು ಸುದೀಪ್ ಹೇಳಿದ್ದಾರೆ. “ಪೈಲ್ವಾನ್”ಗೆ ಶುಭ ಕೋರಿರುವ ಕ್ರೇಜಿಸ್ಟಾರ್ ರವಿಚಂದ್ರನ್, “ಇಂದಿನ ದಿನಮಾನದಲ್ಲಿ ಕನ್ನಡ ಚಿತ್ರಗಳು 100 ಕೋಟಿ ಕ್ಲಬ್ ಸೇರುವ ಹಾದಿ ಸುಗಮವಾಗಿದೆ   ಪೈಲ್ವಾನ್ ಕೂಡ  ಕ್ಲಬ್ ಸೇರಲಿ” ಎಂದಿದ್ದಾರೆ.
  
ಎಲ್ಲೆಡೆ ಪೈಲ್ವಾನ್ ಕ್ರೇಜ್ ಕಂಡುಬಂದಿದ್ದು,ಚಿತ್ರ ವೀಕ್ಷಣೆಗಾಗಿ ಮೂರು ದಿನ ಮುಂಚಿತವಾಗಿಯೇ ಟಿಕೆಟ್ ಬುಕಿಂಗ್ ಆರಂಭವಾಗಿದೆ ಸೆ 12ರಂದು ಬಿಡುಗಡೆಯಾಗಲಿರುವ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಜೋರಾಗಿಯೆ ಸದ್ದು ಮಾಡಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಎಸ್ ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುದೀಪ್, ಆಕಾಂಕ್ಷಾ ಸಿಂಗ್, ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಮೊದಲಾದವರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com