ನವೆಂಬರ್ ನಲ್ಲಿ ಪುನೀತ್ ನಟನೆಯ ಜೇಮ್ಸ್ ಸಿನಿಮಾ ಶೂಟಿಂಗ್ ಆರಂಭ!

ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾಗಾಗಿ ಕಾಯುತ್ತಿದ್ದಾರೆ, ಇದರ ಜೊತೆಗೆ ಪುನೀತ್ ಮುಂದಿನ ಸಿನಿಮಾ ಜೇಮ್ಸ್ ಗಾಗಿಯು ಕಾತುರರಾಗಿದ್ದಾರೆ.
ಜೇಮ್ಸ್ ಪೋಸ್ಟರ್
ಜೇಮ್ಸ್ ಪೋಸ್ಟರ್

ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾಗಾಗಿ ಕಾಯುತ್ತಿದ್ದಾರೆ, ಇದರ ಜೊತೆಗೆ ಪುನೀತ್ ಮುಂದಿನ ಸಿನಿಮಾ ಜೇಮ್ಸ್ ಗಾಗಿಯು ಕಾತುರರಾಗಿದ್ದಾರೆ.

ಕಮರ್ಷಿಯಲ್ ಮನರಂಜನಾತ್ಮಕ ಸಿನಿಮಾ ಇದಾಗಿದ್ದು, ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ, ಇದೇ ಮೊದಲ ಬಾರಿಗೆ ನಿರ್ದೇಶಕ ಚೇತನ್ ಕುಮಾರ್ ಮತ್ತು ಪುನೀತ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ, 

ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬದಂದು ಇದರ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿತ್ತು, ಕಿಶೋರ್ ಪತ್ತಿಕೊಂಡ  ನಿರ್ಮಿಸುತ್ತಿರುವ ಈ ಸಿನಿಮಾ ನವೆಂಬರ್ ನಿಂದ ಶೂಟಿಂಗ್ ಆರಂಭವಾಗಲಿದೆ, ನಿರ್ದೇಶಕ ಚೇತನ್ ಸದ್ಯ ಶ್ರೀಮುರುಳಿ ಅಭಿನಯದ ಭರಾಟೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದಾರೆ.

ಜೇಮ್ಸ್ ಸಿನಿಮಾ ಕಥೆ ಈಗಾಗಲೇ ಸಿದ್ದವಾಗಿದ್ದು, ಶೂಟಿಂಗ್ ಗಾಗಿ ಸಿನಿಮಾ ತಂಡ ತಯಾರಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com