ಭರಾಟೆ ಚಿತ್ರದ ತುಣುಕು
ಸಿನಿಮಾ ಸುದ್ದಿ
ಶ್ರೀಮುರುಳಿ ಅಭಿನಯದ ಭರಾಟೆ ಅಕ್ಟೋಬರ್ 18ಕ್ಕೆ ಬಿಡುಗಡೆ
ಚೇತನ್ ಕುಮಾರ್ ನಿರ್ದೇಶನದ ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗಲಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರ ತಂಡ ಉದ್ದೇಶಿಸಿತ್ತು.ಇದೀಗ ಅದು ಮುಂದಕ್ಕೆ ತಳಲ್ಪಟ್ಟಿದೆ.
ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದ ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗಲಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರ ತಂಡ ಉದ್ದೇಶಿಸಿತ್ತು.ಇದೀಗ ಅದು ಮುಂದಕ್ಕೆ ತಳಲ್ಪಟ್ಟಿದೆ.
ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದ ನಂತರ ನಿರ್ಮಾಪಕರು ಇದನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಈ ಮಧ್ಯೆ ಬಿಡುಗಡೆಯಾಗಿರುವ ಮೂರು ವಿಡಿಯೋ ಹಾಡುಗಳು ಹಿಟ್ ಆಗಿದ್ದು, ಮಿಲಿಯನ್ ವೀಕ್ಷಣೆ ಪಡೆದುಕೊಂಡಿವೆ.
ಮುಂದಿನ ವಾರ ಟ್ರೈಲರ್ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಮಾರು 75 ಕಲಾವಿದರ ಬಳಗವಿದೆ.
ಸಾಯಿ ಕುಮಾರ್ ಸಹೋದರರಾದ ರವಿಶಂಕರ್, ಅಯ್ಯಪ್ಪ ಶರ್ಮಾ ಸೇರಿದಂತೆ 9 ಮಂದಿ ವಿಲನ್ ಗಳಿದ್ದಾರೆ. ರಚಿತಾ ರಾಮ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ