'ನ್ಯೂರಾನ್' ಒಂದು ವೈಜ್ಞಾನಿಕ ಥ್ರಿಲ್ಲರ್ ಚಿತ್ರ, ಕಾಲ್ಪನಿಕವಲ್ಲ!

ಸ್ಯಾಂಡಲ್ ವುಡ್ ನಲ್ಲಿ ಪ್ರತಿವರ್ಷ ಹಲವು ಚಿತ್ರಗಳು ತೆರೆಗೆ ಬರುತ್ತವೆ.  ಆದರೆ ವೈಜ್ಞಾನಿಕ ತಳಹದಿಯ ಸಿನಿಮಾಗಳು ಕಡಿಮೆ ಎನ್ನಬಹುದು.
ನ್ಯೂರಾನ್ ಚಿತ್ರದ ಸ್ಟಿಲ್
ನ್ಯೂರಾನ್ ಚಿತ್ರದ ಸ್ಟಿಲ್

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಪ್ರತಿವರ್ಷ ಹಲವು ಚಿತ್ರಗಳು ತೆರೆಗೆ ಬರುತ್ತವೆ.  ಆದರೆ ವೈಜ್ಞಾನಿಕ ತಳಹದಿಯ ಸಿನಿಮಾಗಳು ಕಡಿಮೆ ಎನ್ನಬಹುದು.  

ಇಂತಹ ಕೊರತೆ ನೀಗಿಸುವ ನಿಟ್ಟಿನಲ್ಲಿ ‘ನ್ಯೂರಾನ್’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.  ಮಾನವನ ಸೃಷ್ಟಿಯಾಗುವಾಗಲೇ ಆತನಿಗೆ ಬೇಕಾದ ಎಲ್ಲ ಬಗೆಯ ಶಕ್ತಿಗಳನ್ನೂ ಪಡೆದುಕೊಂಡಿರುತ್ತಾನೆ. ಆದರೆ ಅದರ ಅರಿವನ್ನು ಪಡೆದುಕೊಳ್ಳಬೇಕಾಗುತ್ತದೆ.  “ಮನುಷ್ಯ ಏನನ್ನು ಪಡೆದುಕೊಂಡಿದ್ದಾನೆ, ಏನು ಕಳೆದುಕೊಳ್ಳುತ್ತಿದ್ದಾನೆ” ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ‘ನ್ಯೂರಾನ್’ ನಿರ್ಮಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

‘ನ್ಯೂರಾನ್’ ಒಂದು ವೈಜ್ಞಾನಿಕ ಶಬ್ದ. ಪ್ರಪಂಚ ಸೃಷ್ಟಿಯಾದಾಗಲೇ ಈ ನ್ಯೂರಾನ್ ಕೂಡ ಸೃಷ್ಟಿಯಾಯಿತು.  ಮಾನವನ ಮಿದುಳು ಎಷ್ಟರಮಟ್ಟಿಗಿನ ಶಕ್ತಿ ಹೊಂದಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ಹೇಳಿದ್ದಾರೆ.

2010ಲ್ಲಿ ನಡೆದ ನೈಜ್ಯ ಘಟನೆಯಾಧಾರಿತ ಚಿತ್ರವಾಗಿದೆ. ಸದ್ಯ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನವೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

ಚಿತ್ರದಲ್ಲಿ ನೇಹಾ ಪಾಟೀಲ್, ವೈಷ್ಣವಿ ಮೆನನ್, ಶಿಲ್ಪಾ ಶೆಟ್ಟಿ, ವರ್ಷ ಮತ್ತು ಕಬೀರ್ ದುಹಾನ್ ಸಿಂಗ್ ನಟಿಸಿದ್ದಾರೆ. ಗುರು ಕಿರಣ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಶೋಯಬ್ ಅಹ್ಮದ್ ಕೆಎಂ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com