ರಿಷಬ್ ಶೆಟ್ಟಿ ಬಾಳಲ್ಲಿ ಪುಟಾಣಿ ಹೀರೋ ಆಗಮನ

ಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರ ಮನೆಗೆ ಯುಗಾದಿ ಹಬ್ಬದ ದಿನವೇ ಹೊಸ...
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರ ಮನೆಗೆ ಯುಗಾದಿ ಹಬ್ಬದ ದಿನವೇ ಹೊಸ ಸದಸ್ಯನ ಆಗಮನವಾಗಿದೆ. ಅವರ ಪತ್ನಿ ಪ್ರಗತಿ ಶೆಟ್ಟಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಖುಷಿಯ ವಿಚಾರವನ್ನು ರಿಷಬ್ ಶೆಟ್ಟಿಯವರೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.  ಆಸ್ಪತ್ರೆಯ ಬೆಡ್ ಮೇಲಿರುವ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು “Yes…… it’s a Hero” ಎಂದು ಬರೆದು ಹುಡುಗನ ಎಮೋಜಿ ಹಾಕಿದ್ದಾರೆ.
ರಿಷಬ್ ಶೆಟ್ಟಿ ಅವರು 2017 ರಲ್ಲಿ ಶಿವಮೊಗ್ಗ ಮೂಲದ ಪ್ರಗತಿ ಅವರನ್ನು ವಿವಾಹವಾಗಿದ್ದರು. ವೃತ್ತಿಯಲ್ಲಿ ಎಂಜಿನಿಯರ್ ಮತ್ತು ವಸ್ತ್ರ ವಿನ್ಯಾಸಕಿ ಕೂಡ ಆಗಿದ್ದಾರೆ ಪ್ರಗತಿ ಶೆಟ್ಟಿ.
ಕಳೆದ ವರ್ಷ ಬಿಡುಗಡೆಯಾದ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ದೊಡ್ಡ ಮಟ್ಟಿನ ಯಶಸ್ಸು ಕಂಡಿದ್ದರೆ, ನಾಯಕನಾಗಿ ನಟಿಸಿ ಇತ್ತೀಚೆಗೆ ಬಿಡುಗಡೆಯಾದ ‘ಬೆಲ್ ಬಾಟಂ’ ಸಿನಿಮಾ ಕೂಡ 50 ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗೆ ಡಬಲ್ ಸಂಭ್ರಮದ ಮೂಡ್ ನಲ್ಲಿದ್ದಾರೆ ರಿಷಬ್ ಶೆಟ್ಟಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com