ಮುಂದಿನ ಸಿನಿಮಾ ಟೈಟಲ್ ಗಾಗಿ ಮಗಳ ಸಲಹೆ ಕೇಳಿದ ನಾಗತಿಹಳ್ಳಿ ಚಂದ್ರಶೇಖರ್

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಸಿನಿಮಾದ ಪೋಸ್ಚ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾಗಾಗಿ ನಾಗತಿಹಳ್ಳಿ ಕೆಲಸ ಮಾಡುತ್ತಿದ್ದಾರೆ,...
ವಶಿಷ್ಟ ಸಿಂಹ ಮತ್ತು ಮಾನ್ವಿತಾ ಕಾಮತ್
ವಶಿಷ್ಟ ಸಿಂಹ ಮತ್ತು ಮಾನ್ವಿತಾ ಕಾಮತ್
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಮುಂದಿನ ಸಿನಿಮಾದ ಪೋಸ್ಚ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾಗಾಗಿ ನಾಗತಿಹಳ್ಳಿ ಕೆಲಸ ಮಾಡುತ್ತಿದ್ದಾರೆ, ಇದೇ ವೇಳೆ ಲವ್ ಇನ್ ಲಂಡನ್ ಎಂಬ ಟೈಟಲ್ ಇಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ನಾಗತಿಹಳ್ಳಿ ಈ ಟೈಟಲ್ ನಿರಾಕರಿಸಿದ್ದಾರೆ, ತಮ್ಮ ಮಗಳು ಕನಸು ಜೊತೆ ಚರ್ಚಿಸಿ ನಂತರ ಟೈಟಲ್ ಇಡಲು ಸಮಯ ಕೇಳಿದ್ದಾರೆ, ಈ ಸಿನಿಮಾಗೆ ತಮ್ಮ ಪುತ್ರಿ ಕನಸು ಕಥೆ ಬರೆದಿದ್ದಾರೆ, ಮುಂದಿನ 10 ದಿನಗಳಲ್ಲಿ ಸಿನಿಮಾ ಟೈಟಲ್ ಪ್ರಕಟಿಸಲಿದ್ದಾರೆ, 
ವೈಎನ್ ಶಂಕರೇಗೌಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ವಶಿಷ್ಟ ಸಿಂಹ ನಾಯಕನಾಗಿ ನಟಿಸಿದ್ದಾರೆ, ಮಾನ್ವಿತಾ ಕಾಮತ್ ನಾಯಕಿಯಾಗಿದ್ದಾರೆ, ಅನಂತ್ ನಾಗ್ , ಸುಮಲತಾ ಅಂಬರೀಷ್ ಕೂಡ ನಟಿಸಿದ್ದಾರೆ.
ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ತೋರಿಸುವ ಕಥೆ ಇದಾಗಿದೆ, ಸದ್ಯ ಡಬ್ಬಿಂಗ್ ಕೆಲಸ ನಡೆಯುತ್ತಿದೆ, ಅರ್ಜುನ್ ಜನ್ಯ ಜೊತೆ ನಾಗತಿಹಳ್ಳಿ ರಿ ರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com