ಕೆಜಿಫ್-2 ಗಾಗಿ ಹೊಸ ಪ್ರತಿಭೆಗಳ ಹುಡುಕಾಟ: ಪ್ರಯತ್ನಿಸಿದರೆ ನಿಮಗೂ ಸಿಗಬಹುದು ಅವಕಾಶ!

ಭಾರತೀಯ ಚಿತ್ರರಂಗವೇ ಅಚ್ಚರಿಪಟ್ಟಿದ್ದ ಕೆಜಿಎಫ್ ಸಿನಿಮಾ ತಂಡ ಈಗ ಚಾಪ್ಟರ್-2 ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ.

Published: 21st April 2019 12:00 PM  |   Last Updated: 21st April 2019 07:22 AM   |  A+A-


KGF chapter-2 team on the hunt for new talent

ಕೆಜಿಫ್-2 ಗಾಗಿ ಹೊಸ ಪ್ರತಿಭೆಗಳ ಹುಡುಕಾಟ: ಪ್ರಯತ್ನಿಸಿದರೆ ನಿಮಗೂ ಸಿಗಬಹುದು ಅವಕಾಶ!

Posted By : SBV SBV
Source : Online Desk
ಬೆಂಗಳೂರು: ಭಾರತೀಯ ಚಿತ್ರರಂಗವೇ ಅಚ್ಚರಿಪಟ್ಟಿದ್ದ ಕೆಜಿಎಫ್ ಸಿನಿಮಾ ತಂಡ ಈಗ ಚಾಪ್ಟರ್-2 ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. 

ಕೆಜಿಎಫ್ ಮೊದಲ ಭಾಗದಲ್ಲಿ ಗರುಡ ಪಾತ್ರದಲ್ಲಿ ನಟಿಸಿದ್ದ ನಟ ರಾಮ್ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ತಂಡ ಈಗ ಕೆಜಿಎಫ್ ಚಾಪ್ಟರ್ 2 ರಲ್ಲೂ ಇದೇ ಪ್ರಯೋಗಕ್ಕೆ ಮುಂದಾಗಿದೆ. 

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಚಾಪ್ಟರ್-2 ತಯಾರಾಗುತ್ತಿದ್ದು, ಚಿತ್ರತಂಡ ಹೊಸ ಪ್ರತಿಭೆಗಳಿಗಾಗಿ ಹುಡುಕಾಟ ಪ್ರಾರಂಭಿಸಿದೆ.  ಹೊಸ ಪ್ರತಿಭೆಗಳನ್ನು ಗುರುತಿಸಲು ಕೆಜಿಎಫ್-2 ಚಿತ್ರತಂಡ ಆಡಿಷನ್ ಪ್ರಾರಂಭಿಸಿದೆ. 

8-16 ವರ್ಷ ವರ್ಷದ ಬಾಲಕರು 25 ಹಾಗೂ ಮೇಲ್ಪಟ್ಟ ಪುರುಷರು ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಮಲ್ಲೇಶ್ವರಂ ವೆಸ್ಟ್ ನಲ್ಲಿರುವ  ಜಿಎಂ ರಿಜಾಯ್ಸ್ ನಲ್ಲಿ ಏ.26 ರಂದು ಬೆಳಿಗ್ಗೆ 8 ರಿಂದ ಸಂಜೆ 4 ವರೆಗೆ ಆಡಿಷನ್ ನಡೆಯಲಿದೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp