ಇಂಗ್ಲೀಷ್ ನಲ್ಲೂ 'ಗಿರ್ಮಿಟ್' ಕೊಡಲು ರವಿ ಬಸ್ರೂರ್ ತಯಾರು!

ಇತ್ತೀಚೆಗೆ ಸ್ಯಾಂಡಲ್ ವುಡ್ ಚಿತ್ರಗಳು ನಾಲ್ಕೈದು ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದೀಗ ರವಿ ಬಸ್ರೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ....

Published: 01st August 2019 12:00 PM  |   Last Updated: 01st August 2019 11:41 AM   |  A+A-


Kannada film Girmit to see English release too

ಇಂಗ್ಲೀಷ್ ನಲ್ಲಿಯೂ 'ಗಿರ್ಮಿಟ್' ಕೊಡಲು ತಯಾರಾದ ರವಿ ಬಸ್ರೂರ್

Posted By : RHN
Source : The New Indian Express
ಇತ್ತೀಚೆಗೆ ಸ್ಯಾಂಡಲ್ ವುಡ್ ಚಿತ್ರಗಳು ನಾಲ್ಕೈದು ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದೀಗ ರವಿ ಬಸ್ರೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಮುಂದಿನ ಚಿತ್ರ "ಗಿರ್ಮಿಟ್" ಚಿತ್ರವನ್ನು  ಹಿಂದಿ ಮತ್ತು ತೆಲುಗಿನಲ್ಲಿ  ಬಿಡುಗಡೆ ಮಾಡುತ್ತಿರುವುದರೊಡನೆ ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್  ಭಾಷೆಗಳಲ್ಲಿ ಸಹ ತೆರೆ ಕಾಣುತ್ತಿದೆ.

ನಿರ್ದೇಶಕರು ಇದಾಗಲೇ ಇಂಗ್ಲಿಷ್ ನಲ್ಲಿ ಡಬ್ಬಿಂಗ್ ಪ್ರಾರಂಭಿಸಿದ್ದು  ಇದಕ್ಕಾಗಿ ಅವರು ಹೊಸ ತಂಡವನ್ನು ರಚಿಸಿದ್ದಾರೆ.ಚಿತ್ರದಲ್ಲಿನ ಹಾಡನ್ನು ಇಂಗ್ಲೀಷ್ ನಲ್ಲಿ ಹಾಡುವುದಕ್ಕಾಗಿ ಸಹ ರವಿ ಬಸ್ರೂರ್ ಒಂದು ಹೊಸ ತಂಡವನ್ನು ರಚನೆ ಮಾಡಿದ್ದಾರೆ.ಅಲ್ಲದೆ ವಿವಿಧ ಹಾಡುಗಳಿಗೆ ಅವರೂ ಧ್ವನಿಯಾಗಿದ್ದಾರೆ.

ಕಮರ್ಷಿಯಲ್ ಎಂಟರ್‌ಟೈನರ್‌ ಚಿತ್ರವಾಗಿರುವ "ಗಿರ್ಮಿಟ್" ಸುಮಾರು 280 ಬಾಲ ಕಲಾವಿದರು ಮತ್ತು ಕಲಾವಿದರಾದ  ಅಶ್ಲೇಶ್ ರಾಜ್ ಮತ್ತು ಶ್ಲಾಘಾ ಸಾಲಿಗ್ರಾಮ ಅವರನ್ನೊಳಗೊಂಡಿದೆ.ಓಂಕರ್ ಮೂವೀಸ್ ಮತ್ತು ರವಿ ಬಸ್ರೂರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಎನ್ ಎಸ್ ರಾಜ್‌ಕುಮಾರ್ ನಿರ್ವಹಿಸಿದ್ದಾರೆ. ರವಿ ಬಸ್ರೂರ್ ಸ್ವತಃ ಸಂಗೀತ, ಧ್ವನಿ ವಿನ್ಯಾಸ ಮತ್ತು ಚಿತ್ರಕಥೆಯನ್ನು ನಿರ್ವಹಿಸಿದರೆ, ಅವರ ಸಹೋದರ ಸಚಿನ್ ಬಸ್ರೂರ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. 

ಇನ್ನು ಚಿತ್ರದ ಪ್ರಮುಖ ಪಾತ್ರಗಳಿಗೆ ಯಶ್, ರಾಧಿಕಾ ಪಂಡಿತ್ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ್ದು ತಾರಾ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ರಂಗಾಯಣ ರಘು, ಸಾಧು ಕೋಕಿಲಾ, ಪೆಟ್ರೋಲ್ ಪ್ರಸನ್ನ, ಅನುಪಮ ಗೌಡ, ಅನುರಾಧಾ ಭಟ್, ಮತ್ತು ಶಿವರಾಜ್ ಕೆ.ಆರ್ ಮೊದಲಾದವರು ಚಿತ್ರದಲ್ಲಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp