ಯೋಗರಾಜ್ ಭಟ್ಟರ ಗಾಳಿಪಟ-2 ಹಾರಿಸಲಿದ್ದಾರಾ ನಟ ಪ್ರಭುದೇವ?

ಯೋಗರಾಜ ಭಟ್ ನಿರ್ದೇಶನದ  ಗಾಳಿಪಟ-2 ಸಿನಿಮಾ ಗಾಂಧಿನಗರದಲ್ಲಿ ಭಾರಿ ಹೈಪ್ ಕ್ರಿಯೇಟ್ ಮಾಡಿದೆ, ಜೊತೆಗೆ ಕಲಾವಿದರಲ್ಲೂ ಕೂಡ ಬದಲಾಗಿದೆ.

Published: 21st August 2019 10:02 AM  |   Last Updated: 21st August 2019 07:14 PM   |  A+A-


Prabhu Deva, Mahesh Danannavar , Yogaraj Bhat

ಯೋಗರಾಜ್ ಭಟ್, ಪ್ರಭುದೇವ, ಮಹೇಶ್ ದಾನಣ್ಣನವರ್

Posted By : Shilpa D
Source : Online Desk

ಯೋಗರಾಜ ಭಟ್ ನಿರ್ದೇಶನದ  ಗಾಳಿಪಟ-2 ಸಿನಿಮಾ ಗಾಂಧಿನಗರದಲ್ಲಿ ಭಾರಿ ಹೈಪ್ ಕ್ರಿಯೇಟ್ ಮಾಡಿದೆ, ಜೊತೆಗೆ ಕಲಾವಿದರಲ್ಲೂ ಕೂಡ ಬದಲಾಗಿದೆ.

ರೋಮ್ಯಾಂಟಿಕ್ ಮತ್ತು ಕಾಮಿಡಿ ಸಿನಿಮಾವಾದ ಗಾಳಿಪಟ-2 ನಲ್ಲಿ ಗಣೇಶ್ ಮತ್ತು ದಿಗಂತ್ ಜೊತೆಗೆ ನಟ ಹಾಗೂ ಡ್ಯಾನ್ಸರ್ ಪ್ರಭುದೇವ ಕೂಡ ಅಭಿನಯಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಪ್ರಭುದೇವ ಅವರ ಜೊತೆ ಮುಂಬಯಿಯಲ್ಲಿ ನಿರ್ಮಾಪಕ ಮಹೇಶ್ ದಾನಣ್ಣನವರ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಭುದೇವ ಸದ್ಯಕ್ಕೆ ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ನಟ ಸುದೀಪ್ ಕೂಡ ಅಭಿನಯಿಸುತ್ತಿದ್ದಾರೆ, ಮೈಸೂರು ಮೂಲದ  ಪ್ರಭುದೇವ ತಮಿಳು ತೆಲುಗು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಚಿರಪರಿಚಿತರು. 2002 ರಲ್ಲಿ ಉಪೇಂದ್ರ ಮತ್ತು ಪ್ರಿಯಾಂಕಾ ನಟನೆಯ H2o ಸಿನಿಮಾದಲ್ಲಿ ಪ್ರಭುದೇವ ಅಭಿನಯಿಸಿದ್ದರು.

ಗಣೇಶ್ ಮತ್ತು ದಿಗಂತ್ ಜೊತೆಗೆ ಪವನ್ ಕುಮಾರ್ ಮತ್ತು ಅನಂತ್ ನಾಗ್ ಕೂಡ ಅಭಿನಯಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Yeddyurappa

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ 2021 ಕುರಿತು ನಿಮ್ಮ ಅಭಿಪ್ರಾಯ...


Result
ಸಮತೋಲಿತ ಬಜೆಟ್
ಗೊತ್ತುಗುರಿ ಇಲ್ಲದ ಬಜೆಟ್
flipboard facebook twitter whatsapp