ಕಿರುತೆರೆಯಲ್ಲಿ ನಿರೂಪಕರಾಗಿ ಡಿ ಬಾಸ್ ದರ್ಶನ್ ದರ್ಬಾರ್?

ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ , ಸಿಹಿಸಿಹಿ ಸುದ್ದಿ ಹರಿದಾಡುತ್ತಿದೆ.
ದರ್ಶನ್
ದರ್ಶನ್

ಬೆಂಗಳೂರು: ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ , ಸಿಹಿಸಿಹಿ ಸುದ್ದಿ ಹರಿದಾಡುತ್ತಿದೆ.

ಸದ್ಯ ಅವರ ಒಡೆಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೆ.. ಅತ್ತ ರಾಬರ್ಟ್ ಚಿತ್ರ ಇನ್ನೇನು ಕೊನೆಯ ಹಂತದಲ್ಲಿದೆ..ಇಷ್ಟರ ನಡುವೆ ಅವರು ಕಿರುತೆರೆ ರಿಯಾಲಿಟಿ ಶೋ ನಿರೂಪಣೆ ಮಾಡಲು ದರ್ಶನ್ ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ.

ಕೆಲವು ತಿಂಗಳ ಹಿಂದೆ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಇದೀಗ ಖಾಸಗಿ ವಾಹಿನಿಯೊಂದರ ಶೋ ನಡೆಸಿಕೊಡಲಿದ್ದಾರೆ. ಆದರೆ ಆ ಶೋ ಯಾವುದು, ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಇನ್ನೂ ಬಂದಿಲ್ಲ. 

ಇನ್ನು ಕನ್ನಡ 'ಬಿಗ್ ಬಾಸ್‌' ಮೂಲಕ ಕಿಚ್ಚ ಸುದೀಪ್, ಕನ್ನಡದ ಕೋಟ್ಯಾಧಿಪತಿ ಮೂಲಕ ಪುನೀತ್ ರಾಜ್ ಕುಮಾರ್, ವೀಕೆಂಡ್ ವಿತ್ ರಮೇಶ್ ಮೂಲಕ ರಮೇಶ್ ಅರವಿಂದ್ ಸೇರಿ ಕನ್ನಡದ ಖ್ಯಾತ ನಟ ನಟಿಯರು ರಿಯಾಲಿಟಿ ಶೋ ನಡೆಸಿ ಹೆಸರಾಗಿದ್ದಾರೆ. ಇದೀಗ ಆ ಸಾಲಿಗೆ ಡಿ ಬಾಸ್ ದರ್ಶನ್ ಕೂಡ ಸೇರ್ಪಡೆಗೂಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com