ಇಂದೇ ನಿಜವಾದ ನರಕಚತುರ್ದಶಿ: ಕಾಮಪಿಶಾಚಿಗಳ ಎನ್‌ಕೌಂಟರ್‌ಗೆ ಸ್ಯಾಂಡಲ್‌ವುಡ್ ಹೇಳಿದ್ದೇನು?

ಹೈದರಾಬಾದ್‌ನಲ್ಲಿ ತೆಲಂಗಾಣ ಪಶುವೈದ್ಯೆಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಗಹಗಹಿಸಿದ್ದ ನಾಲ್ವರು ಕಾಮಪಿಶಾಚಿಗಳ ಎನ್‌ಕೌಂಟರ್‌ಗೆ ಸ್ಯಾಂಡಲ್‌ವುಡ್ ನಟ, ನಟಿಯರು ರ್ಷ ವ್ಯಕ್ತಪಡಿಸಿದ್ದಾರೆ.
ಜಗ್ಗೇಶ್
ಜಗ್ಗೇಶ್
Updated on

ಬೆಂಗಳೂರು: ಹೈದರಾಬಾದ್‌ನಲ್ಲಿ ತೆಲಂಗಾಣ ಪಶುವೈದ್ಯೆಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಗಹಗಹಿಸಿದ್ದ ನಾಲ್ವರು ಕಾಮಪಿಶಾಚಿಗಳ ಎನ್‌ಕೌಂಟರ್‌ಗೆ ಸ್ಯಾಂಡಲ್‌ವುಡ್ ನಟ, ನಟಿಯರು ರ್ಷ ವ್ಯಕ್ತಪಡಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ, ನಟ ವಿ ಮನೋಹರ್, ಇಂದೇ ನಿಜವಾದ ನರಕ ಚತುರ್ದಶಿ ಇಡೀ ದೇಶ ಖುಷಿಯಿಂದ ಚಪ್ಪಾಳೆ ತಟ್ಟುವ ಈ ದಿನವನ್ನು ಎಲ್ಲರೂ ಆಚರಿಸಬೇಕು ಹೈದರಾಬಾದ್ ಪೊಲೀಸರು ಅತ್ಯಾಚಾರಿಗಳನ್ನು ಹೊಡೆದು ಬಿಸಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ನವರಸನಾಯಕ, ನಟ ಜಗ್ಗೇಶ್, ದುರ್ಗಾಮಾತೆಗೆ ವಿಶೇಷ ನಮಸ್ಕಾರ ಅರ್ಪಿಸಿ ಶ್ರಿಚಕ್ರದ 7ನೆ ಮುದ್ರೆ ಯಲ್ಲಿ 108 ದಕ್ಷಿಣ ಕಾಳಿಕ ಕಿಂಕಿಣಿ ವಿಚ್ಚೆ ಚಪಮಾಡಿ.. ಇನ್ನು ಸತ್ಯವಿದೆ ಭೂಮಿಯಲ್ಲಿ ಎಂದು ದನ್ಯವಾದ ಅರ್ಪಿಸಿದೆ ದೇವಿಗೆ!
ಅಮಾಯಕ ಸಹೋದರಿ ಸಾವು ನನ್ನ ಕಾಡುತ್ತಿತ್ತು ವಾರದಿಂದ ಇಂದು ಸಮಾಧಾನವಾಯಿತು! ಈ ಕಾರ್ಯ ಮಾಡಿದ ಆರಕ್ಷಕರೆ ಆ ಮಹಾದೇವಿ ಕೃಪೆ  ನಿಮ್ಮ ಮೇಲಿರಲಿ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com