2019 ಹಿನ್ನೋಟ: ಸ್ಯಾಂಡಲ್ ವುಡ್ ನಲ್ಲಿ ಗೆದ್ದವರು, ಸೋತವರು: ನಂಬರ್ 1 ಯಾರು ಗೊತ್ತಾ?

ಕನ್ನಡ ಚಿತ್ರರಂಗದ ಮಟ್ಟಿಗೆ 2019  ವರ್ಷ ಅಂತಹ ಹೇಳಿಕೊಳ್ಳುವಂತಹ ಸಂಭ್ರಮವಿಲ್ಲ. ಭರಪೂರ ಚಿತ್ರಗಳು ತೆರೆ ಕಂಡರೂ ಯಶಸ್ಸು ಸಾಧಿಸಿದ್ದು ಮಾತ್ರ ಬೆರಳೆಣಿಕೆಯಷ್ಟು  ಸಿನಿಮಾಗಳು ಮಾತ್ರ
2019ರಲ್ಲಿ ತೆರೆ ಕಂಡ ಪ್ರಮುಖ ಚಿತ್ರಗಳ ಪೋಸ್ಟರ್
2019ರಲ್ಲಿ ತೆರೆ ಕಂಡ ಪ್ರಮುಖ ಚಿತ್ರಗಳ ಪೋಸ್ಟರ್

ಕನ್ನಡ ಚಿತ್ರರಂಗದ ಮಟ್ಟಿಗೆ 2019  ವರ್ಷ ಅಂತಹ ಹೇಳಿಕೊಳ್ಳುವಂತಹ ಸಂಭ್ರಮವಿಲ್ಲ. ಭರಪೂರ ಚಿತ್ರಗಳು ತೆರೆ ಕಂಡರೂ ಯಶಸ್ಸು ಸಾಧಿಸಿದ್ದು ಮಾತ್ರ ಬೆರಳೆಣಿಕೆಯಷ್ಟು  ಸಿನಿಮಾಗಳು ಮಾತ್ರ. ತುಳು ಚಿತ್ರಗಳು ಸೇರಿದಂತೆ ಒಟ್ಟು 220ಕ್ಕೂ ಹೆಚ್ಚು ಚಿತ್ರಗಳು ತೆರೆ ಕಂಡರೂ ಬಾಕ್ಸ್ ಆಫೀಸ್ ಹಿಟ್ ಆಗಿದ್ದು ಮಾತ್ರ ಕೆಲವೇ ಕೆಲವು. ಇನ್ನೂ ಕೆಲ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸ್ವಲ್ಪ ಮಟ್ಟಿಗೆ ಸೌಂಡ್ ಮಾಡಿದ್ದು, ನಿರ್ಮಾಪಕರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗಿವೆ. ನವೆಂಬರ್ ತಿಂಗಳಲ್ಲಿ 34 ಸಿನಿಮಾಗಳು ತೆರೆ ಕಂಡಿದೆ.  

ಈ ವರ್ಷದಲ್ಲಿ ಕೆಲ ಯುವ ಉದಯೋನ್ಮುಖ ನಿರ್ದೇಶಕರು, ನಾಯಕ, ನಟರು ಸ್ಯಾಂಡಲ್ ವುಡ್ ನಲ್ಲಿ ಬೆಳಕಿಗೆ ಬಂದಿದ್ದು, ಹಲವಾರು ಪ್ರಯೋಗಾತ್ಮಕ ಚಿತ್ರಗಳು ತೆರೆ ಕಂಡಿವೆ. 2018ರಲ್ಲಿ ತೆರೆ ಕಂಡಿದ್ದ ಕೆಜಿಎಫ್ ಚಾಪ್ಟರ್ 1 ಪ್ರಭಾವದಿಂದಾಗಿ ಹಲವಾರು ನಿರ್ಮಾಪಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದಾರೆ. 

ಬಾಕ್ಸ್ ಆಫೀಸ್ ಹಿಟ್ ಚಿತ್ರಗಳು


ವರ್ಷಾಂತ್ಯದಲ್ಲಿ ಬಂದ ಅವನೇ ಶ್ರಿಮನ್ನಾರಾಯಣ, ಒಡೆಯ, ಕುರುಕ್ಷೇತ್ರ , ಯಜಮಾನ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದದ್ದು ಹೊರತುಪಡಿಸಿದರೆ ಬೇರೆ ಯಾವ ಚಿತ್ರಗಳು ನಿರೀಕ್ಷಿಸಿದಷ್ಟು ಪ್ರದರ್ಶನ ಕಾಣಲಿಲ್ಲ.ಡಿಸೆಂಬರ್ ಮಾಸಾಂತ್ಯದಲ್ಲಿ ಬಿಡುಗಡೆಯಾದ ಅವನೇ ಶ್ರೀಮಾನ್ ನಾರಾಯಣ ಚಿತ್ರ  ಬಿಡುಗಡೆಯಾದ ಮೊದಲ ದಿನವೇ 6 ಕೋಟಿ ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್ ವುಡ್ ನತ್ತ ಬೇರೆ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ್ದಾರೆ. ಮೊದಲ ವಾರದಲ್ಲಿ ಅಂದಾಜು 24 ಕೋಟಿ ಕಲೆಕ್ಷನ್ ಮಾಡಿದ್ದು,ಹಿಂದಿ, ತೆಲುಗು, ಹಾಗೂ ತಮಿಳು ಭಾಷೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಮೂಲಕ ಕೆಜಿಎಫ್ ನಂತರ ಮತ್ತೊಂದು ಮತ್ತೊಂದು ಕನ್ನಡ ಸಿನಿಮಾ ಫ್ಯಾನ್ ಇಂಡಿಯಾ ಸಿನಿಮಾವಾಗಿ ಯಶಸ್ಸಿನತ್ತ ಸಾಗುತ್ತಿದೆ. 

'ಡಿ'ಬಾಸ್ ನಂಬರ್ 1
2019 ದರ್ಶನ್ ಪಾಲಿಗೆ ಖುಷಿ ನೀಡಿದ ವರ್ಷವಾಗಿದೆ. 2018ರಲ್ಲಿ ಅವರ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈ ವರ್ಷ ಬಿಡುಗಡೆಯಾದ ಯಜಮಾನ, ಕುರುಕ್ಷೇತ್ರ ಶತದಿನ ಪೂರೈಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಕಂಡಿವೆ. ಪೌರಾಣಿಕ ಹಿನ್ನೆಲೆಯ ಕುರುಕ್ಷೇತ್ರ 100 ಕೋಟಿ ಕ್ಲಬ್ ಸೇರಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬಿದಿಲ್ಲ. ಇನ್ನೂ ಡಿಸೆಂಬರ್ 12ರಂದು ಬಿಡುಗಡೆಯಾದ ಒಡೆಯ ಚಿತ್ರವೂ ರಾಜ್ಯದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಅವರ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ಲಕ್ಷ ಲೈಕ್ ಪಡೆದುಕೊಂಡಿದೆ. 

ಈ ವರ್ಷ ತೆರೆ ಕಂಡ ಒಟ್ಟಾರೇ 205 ಚಿತ್ರಗಳ ಪೈಕಿಯಲ್ಲಿ ಯಜಮಾನ, ಕುರುಕ್ಷೇತ್ರ, ಬೆಲ್ ಬಾಟಂ, ಕವಲುದಾರಿ, ಐ ಎಲ್ ಯೂ, ಫೈಲ್ವಾನ್ , ಅವನೇ ಶ್ರೀಮನ್ನಾರಾಯಣ ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿವೆ.

ಕೃಷ್ಣ ನಿರ್ದೇಶನದ  ಫೈಲ್ವಾನ್ ಚಿತ್ರದ ಮೂಲಕ ಸುದೀಪ್  ಸಂಚಲನ ಸೃಷ್ಟಿಸಿದ್ದರು. ಫೈಲ್ವಾನ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗಿತ್ತು. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿಯದ ಸೈರಾ ನರಸಿಂಹ ರೆಡ್ಡಿಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸಲ್ಮಾನ್ ಖಾನ್ ಅವರೊಂದಿಗೆ ದಬಾಂಗ್ 3ರಲ್ಲಿ ಅಭಿನಯಿಸುವ ಮೂಲಕ 10 ವರ್ಷಗಳ ಧೀರ್ಘ ವಿರಾಮದ ಬಳಿಕ  ಮತ್ತೆ ಬಾಲಿವುಡ್ ಗೆ ಮರಳಿದರು. ಪ್ರಸ್ತುತ ಬಿಗ್ ಬಾಗ್ ಕನ್ನಡ ಶೋನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರಿಗೆ ಈ ವರ್ಷ ವಿಶಿಷ್ಠ ವರ್ಷವಾಗಿತ್ತು. ಏಕೆಂದರೆ ಈ ವರ್ಷ ಅವರು ತಮ್ಮದೇ ಆದ ಪಿಆರ್ ಕೆ ಪ್ರೊಢಕ್ಷನ್ ಹೌಸ್ ಸ್ಛಾಪಿಸಿ ಮೊದಲ ಬಾರಿಗೆ ಕವಲುದಾರಿ ಸಿನಿಮಾವನ್ನು ನಿರ್ಮಾಣ ಮಾಡಿದರು. ಆದೇ ಹೆಸರಿನಲ್ಲಿ ಆಡಿಯೋ ಕಂಪನಿಯನ್ನು ಕೂಡಾ ಅವರು ಸ್ಥಾಪಿಸಿದ್ದಾರೆ. ಆದಾಗ್ಯೂ, ಈ ವರ್ಷ ಪುನೀತ್ ಅಭಿನಯದ ನಟಸೌರ್ವಭಾಮ ಚಿತ್ರ ಮಾತ್ರ ಬಿಡುಗಡೆಯಾಯಿತು. ಅಲ್ಲದೇ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋಗೆ ಮತ್ತೆ ಮರಳಿದರು. 

ಹೆಸರಾಂತ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಮೊದಲ ಬಾರಿಗೆ ಅಭಿನಯಿಸಿದ ಬೆಲ್ ಬಾಟಂ ಚಿತ್ರ ಕೂಡಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಏಳು ನಿರ್ದೇಶಕರನ್ನೊಳಗೊಂಡ ಕಥಾ ಸಂಗಮ ಪ್ರಯೋಗಾತ್ಮಕ ಚಿತ್ರವನ್ನು ಮಾಡಿ ಸೈ ಎನಿಸಿಕೊಂಡರು.   

ಉಳಿದಂತೆ ಪುನೀತ್, ಶಿವರಾಜ್ ಕುಮಾರ್, ಸುದೀಪ್, ಗಣೇಶ್ , ಜಗ್ಗೇಶ್, ಮತ್ತಿತರರಿಗೆ 2019 ರಲ್ಲಿ ಅಂತಹ ಖುಷಿಯೇನೂ ನೀಡಿಲ್ಲ. ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ, ಕಾಳಿದಾಸ ಮೇಷ್ಟ್ರು ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ಥಿಯೇಟರ್ ಸಮಸ್ಯೆ ಎದುರಿಸಬೇಕಾಯಿತು. 

ಸಕ್ಸಲ್ ಪುಲ್ ನಟಿಯರು 

ಕೆಲವು ಹಿರೋಹಿನ್ ಗಳು ಸ್ಯಾಂಡಲ್ ವುಡ್ ನಲ್ಲಿ ಹೆಚ್ ಸೌಂಡ್ ಮಾಡಿದ್ದಾರೆ. ರಚಿತಾ ರಾಮ್, ಹರಿಪ್ರಿಯಾ, ಮತ್ತು ಅದಿತಿ ಪ್ರಭುದೇವ ಅವರಿಗೆ ಈ ವರ್ಷ ಮಹತ್ವದ ವರ್ಷವಾಗಿತ್ತು. ರಚಿತಾ ರಾಮ್ ಸೀತಾ ರಾಮ ಕಲ್ಯಾಣ, ನಟ ಸಾರ್ವಭೌಮ, ಐ ಲವ್ ಮತ್ತು ಅಯುಷ್ಮನ್ ಭವ ಚಿತ್ರಗಳಲ್ಲಿ ಅಭಿನಯಿಸಿದರು. ಅದಿತಿ ಪ್ರಭುದೇವ ಅಭಿನಯದ ಆಪರೇಷನ್ ನಕ್ಷತ್ರ, ಬಜಾರ್, ರಂಗನಾಯಕಿ, ಬ್ರಹ್ಮಚಾರಿ ಹಾಗೂ ಸಿಂಗ ಚಿತ್ರಗಳು ತೆರೆ ಕಂಡಿವೆ. 

ಕುರುಕ್ಷೇತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹರಿಪ್ರಿಯಾ ಅವರಿಗೂ ಈ ವರ್ಷ ಅತ್ಯುತ್ತಮವಾಗಿದೆ. ಅವರು ಅಭಿನಯಿಸಿರುವ ಬೆಲ್ ಬಾಟಂ, ಸೂಜಿದಾರ, ಡಾಟರ್ ಆಫ್ ಫಾರ್ವತಮ್ಮ, ಏಲ್ಲಿದ್ದೆ ಇಲ್ಲಿತನಕ, ಕನ್ನಡ ಗೊತ್ತಿಲ್ಲ, ಮತ್ತು ಕಥಾ ಸಂಗಮ ಚಿತ್ರಗಳು ತೆರೆ ಕಂಡಿವೆ. 

ಕೊಂಚ ಸದ್ದು ಮಾಡಿದ ಚಿತ್ರಗಳು

 ಭರಾಟೆ, ನಟ ಸಾರ್ವಭೌಮ, ಸೀತಾರಾಮ ಕಲ್ಯಾಣ, ಆಯುಷ್ಮಾನ್ ಭವ, ಅಮರ್, ದಮಯಂತಿ, ಚಂಬಲ್, ದೇವಕಿ, ಬ್ರಹ್ಮಚಾರಿ, ಅಳಿದು ಉಳಿದವರು, ಪ್ರೀಮಿಯರ್ ಪದ್ಮಿನಿ  ಕೊಂಚು ಸದ್ದು ಮಾಡಿ ನಿರ್ಮಾಪಕರ ಜೇಬು ತುಂಬಿಸಿದ್ದು ಬಿಟ್ಟರೆ ಬಹುನಿರೀಕ್ಷಿತ ಚಿತ್ರಗಳಾದ ಪೈಲ್ವಾನ್, ಗೀತಾ, ದಶರಥ, ಕಥಾ ಸಂಗಮ ಚಿತ್ರಗಳು ಹೆಸರು ಮಾಡಿದವಷ್ಟೇ ಹೊರತು ಯಶಸ್ಸು ಸಾಧಿಸಲಾಗಲಿಲ್ಲ. 

ಪ್ರಯೋಗಾತ್ಮಕ ಚಿತ್ರಗಳು

ಹಿಂದಿನ ವರ್ಷಕ್ಕೆ ಹೋಲಿಸಿದರೆ  ಈ ಬಾರಿ ಪ್ರಯೋಗಾತ್ಮಕ ಸಿನಿಮಾನಗಳು ಹೆಚ್ಚಾಗಿ ತೆರೆ ಕಂಡಿದಿದ್ದರಿಂದ ಅನೇಕ ನವ ನಿರ್ದೇಶಕರು,  ನಾಯಕ ನಟರು ಗಾಂಧಿನಗರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಬೀರ್ ಬಲ್, ಗಂಟು ಮೂಟೆ,  ಅಳಿದು ಉಳಿದವರು, ನನ್ನ ಪ್ರಕಾರ, ಕವಲು ದಾರಿ, ಲುಂಗಿ, ಸವರ್ಣ ಧೀರ್ಘ ಸಂಧಿ, ಅಂದವಾದ , ಮಹಿರ,  ಸಾರ್ವಜನಿಕರಲ್ಲಿ ವಿನಂತಿ, ದೇವರು ಬೇಕಾಗಿದ್ದಾರೆ, ಕಥಾ ಸಂಗಮದಂತಹ ಚಿತ್ರಗಳು ಹೊಸಬರ ಚಿತ್ರಗಳಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.

ಹಾರರ್, ಥ್ರಿಲ್ಲರ್ ಚಿತ್ರಗಳು

ಈ ವರ್ಷ ಬಿಡುಗಡೆಯಾದ  ಹಾರರ್, ಥ್ರಿಲ್ಲರ್, ಸಿನಿಮಾಗಳು ಸಂಖ್ಯೆಯೂ ದಾಖಲಾರ್ಹ, ಆ ದೃಶ್ಯ, ಮನೆ ಮಾರಾಟಕ್ಕಿದೆ. ರತ್ನಮಂಜರಿ,  ಕಮರೊಟ್ಟು ಚೆಕ್ ಪೋಸ್ಟ್, ಅನುಷ್ಕಾ,  ಕಲ್ಪನಾ ವಿಲಾಸಿ, ಮೂರ್ಕಲ್ ಎಸ್ಟೇಟ್  ಸೇರಿದಂತೆ ಇನ್ನೊಂದಿಷ್ಟು ಚಿತ್ರಗಳು ತೆರೆಕಂಡವಾದರೂ ಪ್ರೇಕ್ಷಕರ ಮನ ಮುಟ್ಟುವಲ್ಲಿ ವಿಫಲವಾದವು. 

ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಚಿತ್ರಗಳು
ಮನ್ಸೂರ್ ನಿರ್ದೇಶನದ ನಾತಿಚರಾಮಿ ಚಿತ್ರ 66ನೇ ರಾಷ್ಟ್ರೀಯ ಚಲಚಿತ್ರ ಪ್ರಶಸ್ತಿಯಲ್ಲಿ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿತು. 2018ರಲ್ಲಿ ತೆರೆ ಕಂಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿಯದ ಕೆಜಿಎಫ್ ಚಾಪ್ಟರ್ 1, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮೂಕಜ್ಜಿಯ ಕನಸುಗಳು ಮತ್ತಿತರ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. 

ಕನ್ನಡಕ್ಕೆ ಡಬ್ ಆದ ಬೇರೆ ಭಾಷೆಯ ಚಿತ್ರಗಳು

ಈ ವರ್ಷ ಬೇರೆ ಭಾಷೆಯ ಅನೇಕ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವ ಮೂಲಕ ಬಿಡುಗಡೆ ಮಾಡಲಾಗಿತ್ತು. ಅವುಗಳಲ್ಲಿ ಪ್ರಮುಖವಾಗಿ  ಒರು ಅದಾರ್ ಲವ್ ಮಲಯಾಳಂ ಚಿತ್ರವನ್ನು ಕಿರಿಕ್ ಲವ್ ಸ್ಟೋರಿಯಾಗಿ ಕನ್ನಡಕ್ಕೆ ಡಬ್ ಮಾಡಲಾಗಿತ್ತು. ನಂತರ  ಅಜಿತ್ ಅವರ ಜಗಮಲ್ಲ, ರಾಮ್ ಚರಣ್ ಅವರ ರಂಗಸ್ಥಳಂ, ಚಿರಂಜೀವಿ ಅವರ ಸೈರಾ ನರಸಿಂಹ ರೆಡ್ಡಿ, ಸಲ್ಮಾನ್ ಖಾನ್- ಸುದೀಪ್ ಅಭಿಯದ ದಬಾಂಗ್ -3 ಚಿತ್ರಗಳು ಕನ್ನಡಕ್ಕೆ ಡಬ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿವೆ

ಉದಯೋನ್ಮುಖ ತಾರೆಯರು 

ಈ ವರ್ಷ ಶ್ರೇಯಸ್ , ಅಭಿಷೇಕ್ ಅಂಬರೀಷ್, ರುಕ್ಮೀಣಿ ವಾಸಂತ್, ಅನುಪಮ ಪರಮೇಶ್ವರನ್, ಸಂಜನಾ ಆನಂದ್, ಅರ್ಚನಾ ಜಯಕೃಷ್ಣ, ಶ್ರುತಿ ಪ್ರಕಾಶ್, ಚೈತ್ರಾ ರೆಡ್ಡಿ, ಸನಾ  ತಮ್ಮಯ್ಯ, ಕೃಷ್ಣ ಭಟ್, ತೇಜ್ ಬೆಳವಡಿ, ಮತ್ತಿತರ ಉದಯೋನ್ಮುಖ ತಾರೆಯರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದರು. 

ಸ್ಯಾಂಡಲ್ ವುಡ್  ವಿವಾದಗಳು
ಐ ಲವ್ ಯು ಸಿನಿಮಾದಲ್ಲಿ ಹಾಡೊಂದರಲ್ಲಿ ರಚಿತಾ ರಾಮ್  ಹಾಗೂ ಉಪೇಂದ್ರ ಅವರ ಅತಿಯಾದ ರೋಮ್ಯಾನ್ಸ್, ಬೋಲ್ಡ್  ವಿವಾದ ಹುಟ್ಟುಹಾಕಿತ್ತು. ಯಜಮಾನ, ಫೈಲ್ವಾನ್, ನಟಸೌರ್ವಭೌಮದಂತಹ ಚಿತ್ರಗಳು ಫೈರಸಿ ಸಮಸ್ಯೆ ಎದುರಿಸಬೇಕಾಯಿತು. ದುಂಡುಪಾಳ್ಯ 4 ಸಿನಿಮಾವನ್ನು ಮೊದಲಿಗೆ ಸೆನ್ಸಾರ್ ಮಂಡಳಿ ತಿರಸ್ಕರಿಸಿತ್ತು.  ನಂತರ  ಬಿಡುಗಡೆಗೆ ಅವಕಾಶ ನೀಡಲಾಗಿತ್ತು. ಕ್ರಿಸ್ ಮಸ್ ಮುನ್ನಾದಿನ ನಟಿ ಸಂಜನಾ  ಹಾಗೂ ನಿರ್ಮಾಪಕಿ ವಂದನಾ ಜೈನ್ ನಡುವೆ ಹೋಟೆಲ್ ವೊಂದರಲ್ಲಿ ನಡೆದ ಹೊಡೆದಾಟ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. 

ಸ್ಯಾಂಡಲ್ ವುಡ್ ಕಳೆದುಕೊಂಡ ಮಹನೀಯರು
 ಈ ವರ್ಷ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ , ನಟ, ನಿರ್ದೇಶಕ ಗಿರೀಶ್ ಕಾರ್ನಾಡ್, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ,  ಸಂಭಾಷಣೆಗಾರ ಕೆ, ನಂಜುಂಡ, ನಿರ್ಮಾಪಕ ಸಮರ್ಥ ಪ್ರಸಾದ್, ನಿರ್ದೇಶಕ ಕೋಡಿ ರಾಮಕೃಷ್ಣ ಹಾಗೂ ಕಲಾವಿದರಾದ ಎಸ್ ಕೆ ಪದ್ಮಾದೇವಿ ಅವರನ್ನು ಸ್ಯಾಂಡಲ್ ವುಡ್ ಕಳೆದುಕೊಂಡಿತು. 
 

ಒಟ್ಟಾರೇ 2019ರಲ್ಲಿ ಬಿಡುಗಡೆಗೊಂಡ ಚಿತ್ರಗಳು ಇಂತಿವೆ. 

ಜನವರಿ ತಿಂಗಳಲ್ಲಿ ಆಡುವ ಗೊಂಬೆ, ಬೆಸ್ಟ್ ಪ್ರೆಂಡ್, ಪಾರ್ಚೂನರ್, ಪ್ರಾಸ್ಥ, ಗಿಣಿ ಹೇಳಿದ ಕಥೆ, ಲಂಬೊದಾರ, ಲಾಕ್, ಮಿಸ್ಟ್ ಲಾಕ್, ಸೀತಾರಾಮ ಕಲ್ಯಾಣ, ಸಪ್ಲಮೆಂಟರಿ, ಅನುಕ್ತಾ ಮತ್ತಿತರ 13 ಚಿತ್ರಗಳು ಬಿಡುಗಡೆಯಾಗಿವೆ. 

ಫೆಬ್ರವರಿ ತಿಂಗಳಲ್ಲಿ ಸುನಿ ನಿರ್ದೇಶನದ ಬಜಾರ್, ಭೂತಾ ಕಾಲ, ಮಟಾಷ್, ತ್ರಯೋದಾಷ, ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸಾರ್ವಭೌಮ , ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ, ಬೆಲ್ ಬಾಟಂ, ಕೆಮಿಸ್ಚ್ರೀ ಆಫ್ ಕರಿಯಪ್ಪ, ಗಹಾನ, ಚಂಬಲ್, ಕಾಡು ಮುಚ್ಚಿ, ಸ್ಟ್ರೈಕರ್, ಯಾರಿಗೆ ಯಾರುಂಟು ಮತ್ತಿತರ 14 ಚಿತ್ರಗಳು ತೆರೆ ಕಂಡಿವೆ.

ಮಾರ್ಚ್ ತಿಂಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ ಯಜಮಾನ, ಅಮ್ಮನ ಮನೆ, ಮದುವೆ, ಡಿಕೆ ಬಾಸ್, ಗಿರ್ ಗಿಟ್ಲೆ, ಮಿಸ್ಸಿಂಗ್ ಬಾಯ್, ಉದ್ಘರ್ಷ, ಧರ್ಮಪುರ, ಪಂಚತಂತ್ರ, ರಗಡ್  ಮತ್ತಿತರ 20ಕ್ಕೂ ಹೆಚ್ಚು ಚಿತ್ರಗಳು ತೆರೆಗೊಂಡಿದ್ದವು.

ಏಪ್ರಿಲ್ ತಿಂಗಳಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಕವಚ, ರಿಷಿ ಅಭಿನಯದ ಕವಲು ದಾರಿ, ಗುರು ದೇಶಪಾಂಡೆ ನಿರ್ದೇಶನದ ಪಡ್ಡೆ ಹುಲಿ, ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ, ಗಣೇಶ್ ಅಭಿಯನದ 99 ಮತ್ತಿತರ ಚಿತ್ರಗಳು ಬಿಡುಗಡೆಯಾದವು.
 
ಮೇ ತಿಂಗಳಲ್ಲಿ ಮೌನೀಷ್ ಬಡಿಗರ್ ನಿರ್ದೇಶನದ ಸೂಜಿದಾರ, ರತ್ನ ಮಂಜರಿ, ಡಾಟರ್ ಆಫ್ ಪಾರ್ವತಮ್ಮ, ಅಮರ್, ಸೇರಿದಂತೆ ಸುಮಾರು 15 ಚಿತ್ರಗಳು ತೆರೆ ಕಂಡಿವೆ. ಹರಿಪ್ರಿಯಾ ನಾಯಕಿಯಾಗಿದ್ದ ಸೂಜಿದಾರ ಕಲಾತ್ಮಕ ಚಿತ್ರವಾಗಿ ಜನಮನಸೊರೆಗಳಿಸುವಲ್ಲಿ ಯಶಸ್ವಿಯಾಯಿತಾದರೂ ಬಾಕ್ಸ್ ಆಫೀಸ್  ಕಲೆಕ್ಷನ್ ನಲ್ಲಿ ಹಿಂದೆ ಬಿದಿತ್ತು. 

ಜೂನ್ ತಿಂಗಳಲ್ಲಿ ಕೋಟಿಗೊಬ್ಬ-2, ಲವ್ ಯೂ, ಹಫ್ತಾ, ರುಸ್ತುಂ ಮತ್ತಿತರ 11ಕ್ಕೂ ಹೆಚ್ಚುಗಳು ಬಿಡುಗಡೆಯಾದರೆ ಜುಲೈ ತಿಂಗಳಲ್ಲಿ  ಪ್ರಿಯಾಂಕಾ ಉಪೇಂದ್ರ ಅಭಿಯನದ ದೇವಕಿ, ದೀರ ಕನ್ನಡಿಗ, ಒಂಟಿ, ಯಾನಾ, ನಿರೂಫ್ ಭಂಡಾರಿ ಅವರ ಆದಿ ಲಕ್ಷ್ಮಿ ಪುರಾಣ, ಸಿಂಗ, ಮಳೆ ಬಿಲ್ಲು, ದಶರಥ, ಮಹಿರಾ ಮತ್ತಿತರ ಚಿತ್ರಗಳು ಬಿಡುಗಡೆಯಾದವು. 

ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ ನಾಗಣ್ಣ ನಿರ್ದೇಶದ ಮುನಿರತ್ನ ನಿರ್ಮಾಣದ ಬಹುವೆಚ್ಚದ ಕುರುಕ್ಷೇತ್ರ ಚಿತ್ರ ಶತದಿನೋತ್ಸವ ಆಚರಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು.ಉಳಿದಂತೆ ರಾಂಧಾವ, ಉಡುಂಬಾ, ವಿಜಯರಥ, ವಿಷ್ಣು ಸರ್ಕಲ್ ಸಿನಿಮಾಗಳು ಬಿಡುಗಡೆಯಾದವು.

ಸೆಪ್ಟೆಂಬರ್ ತಿಂಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಫೈಲ್ವಾನ್ ಚಿತ್ರ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತಾದರೂ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡುವಲ್ಲಿ ವಿಫಲವಾಯಿತು. ಉಳಿದಂತೆ ಗಣೇಶ್ ಅಭಿನಯದ ಗೀತಾ, ಕಿಸ್,  ಚಿತ್ರಗಳು ಕೂಡಾ ನಿರೀಕ್ಷೆ ಮೂಡಿಸಿದಷ್ಟು ಪ್ರದರ್ಶನ ಕಾಣಲಿಲ್ಲ.

ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿಯಲ್ಲಿ  ಅಧ್ಯಕ್ಷ ಇನ್ ಅಮೆರಿಕಾ, ದೇವರು ಬೇಕಾಗಿದ್ದಾರೆ, ಏಲ್ಲಿದ್ದೆ ಇಲ್ಲಿ ತನಕಾ, ಲುಂಗಿ, ಭರಾಟೆ, ಸವರ್ಣ ಧೀರ್ಘ ಸಂದಿ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಒಂದಿಷ್ಟು ಹೆಸರು ಮಾಡಿದ್ದು ಹೊರತುಪಡಿಸಿದರೆ, ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅಷ್ಟೇನೂ ಸುದ್ದಿಯಾಗಲಿಲ್ಲ. 

ನವೆಂಬರ್ ತಿಂಗಳಲ್ಲಿ ಮೂಕಜ್ಜಿಯ ಕನಸುಗಳು, ರಣಹೇಡಿ, ಅಲೆಕ್ಸ್, ಕಿರುಮಿನ್ಕಣಜ, ಕಾಳಿದಾಸ ಕನ್ನಡ ಮೇಷ್ಟು, ರಿವೀಲ್ , ನಾನೇ ರಾಜಾ, ಮಾರ್ಗರೇಟ್, ಪೆನ್ಸಿಲ್ ಬಾಕ್ಸ್ , ಬ್ರಹ್ಮಚಾರಿ, ಮುಂದಿನ ನಿಲ್ದಾಣ, ಕನ್ನಡ ಗೊತ್ತಿಲ್ಲ, ರಾಜಲಕ್ಷ್ಮಿ, ಮರಣಂ, ನ್ಯೂರಾನ್, ಮನರೂಪ, ಅಣ್ಣನಿಗೆ ತಕ್ಕ ತಮ್ಮ ಮತ್ತಿತರ ಚಿತ್ರಗಳು ಬಿಡುಗಡೆಯಾಗಿವೆ.

ಡಿಸೆಂಬರ್ ತಿಂಗಳಲ್ಲಿ   ಗರ್ನಲ್, ನಿಗೂಢ, ಸಾರ್ವಜನಿಕರಿಗೆ ಸುರ್ವಣಾಕಾಶ, ಒಡೆಯ, ಸಿಕ್ರೇಟ್ಸ್, ಅಳಿದು ಉಳಿದವರು, ಹಗಲು ಕನಸು, ಕಥಾ ಸಂಗಮ, ದಬಾಂಗ್ -3,  ಅವನ್ನೇ ಶ್ರೀರಾಮನ್ ನಾರಾಯಣ, ಬಡ್ಡಿಮಗನ್ ಲೈಪ್ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಹಾಗೂ ರಕ್ಷಿತ್ ಶೆಟ್ಟಿ ಅಭಿಯನದ ಅವನೇ ಶ್ರೀಮಾನ್ ನಾರಾಯಣ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿವೆ

2020ರಲ್ಲಿ ಬಿಡುಗಡೆ ಕಾಣಲಿರುವ ಚಿತ್ರಗಳು

ಮುಂದಿನ ವರ್ಷ ದರ್ಶನ್ ಅಭಿಯನದ ರಾಬರ್ಟ್, ಗಂಡುಗಲಿ ಮದಕರಿ ನಾಯಕ ಮತ್ತಿತರ ಚಿತ್ರಗಳು ಬಿಡುಗಡೆಯಾಗಲಿವೆ. ರಾಬರ್ಟ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದ ಮೊದಲ ದಿನವೇ 11 ಲಕ್ಷ ವೀವ್ಹ್ ಹಾಗೂ 1 ಲಕ್ಷ ಮೆಚ್ಚುಗೆ ಪಡೆಯುವ ಮೂಲಕ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿತು. 

ಇನ್ನೂ ಸುದೀಪ್ ಅವರ ಕೋಟಿಗೊಬ್ಬ 3,  ಪುನೀತ್ ರಾಜ್ ಕುಮಾರ್ ಅವರ ಯುವರತ್ನ, ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 2 , ಧ್ರವ ಸರ್ಜಾ ಅವರ ಪೊಗರು, ದುನಿಯಾ ವಿಜಯ್ ಅವರ ಸಲಗ ಚಿತ್ರಗಳ ಮೇಲೆ ಸ್ಯಾಂಡಲ್ ವುಡ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನುಟ್ಟಿಕೊಂಡಿದ್ದು, ಚಿತ್ರ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ. 

 ನಿರೀಕ್ಷೆಗಳು ಹೆಚ್ಚಾಗಿವೆ. ಇವರಲ್ಲದೇ, ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ, ಪ್ರಾರಂಭ, ರುದ್ರಪ್ರಯಾಗ, ಬಿಚ್ಚುಗತ್ತಿ ಮತ್ತಿತರ ಚಿತ್ರಗಳು ಬಿಡುಗಡೆಯಾಗಲಿದ್ದು, 2020ರಲ್ಲೂ ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com