ನವೀನ್ ರೆಡ್ಡಿ ನಿರ್ದೇಶನದ 'ಖಾಕಿ' ಚಿತ್ರದಲ್ಲಿ ಚಿರಂಜೀವಿ ಸರ್ಜಾ

ಚೊಚ್ಚಲ ನಿರ್ದೇಶನದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿರುವ ನವೀನ್ ರೆಡ್ಡಿಯವರ ಖಾಕಿ ಚಿತ್ರಕ್ಕೆ ...
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ
ಚೊಚ್ಚಲ ನಿರ್ದೇಶನದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿರುವ ನವೀನ್ ರೆಡ್ಡಿಯವರ ಖಾಕಿ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. ದ ಪವರ್ ಆಫ್ ಕಾಮನ್ ಮ್ಯಾನ್ ಚಿತ್ರದ ಟ್ಯಾಗ್ ಲೈನ್ ಆಗಿದೆ.
ಚಿತ್ರಕ್ಕೆ ಕಥೆ ಬರೆದಿದ್ದು ವಿದ್ಯಾಧರ್. ತರುಣ್ ಟಾಕೀಸ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಕೇಬಲ್ ಆಪರೇಟರ್ ಆಗಿ ಪಾತ್ರ ನಿರ್ವಹಿಸಲಿದ್ದಾರೆ.
ಟಿ ಎಸ್ ನಾಗಾಭರಣ ನಿರ್ದೇಶನದ ಕಡ್ಡಿಪುಡಿ ಚಂದ್ರು ನಿರ್ಮಾಣದ ಜುಗಾರಿ ಕ್ರಾಸ್ ಚಿತ್ರದ ಶೂಟಿಂಗ್ ನಿನ್ನೆ ಆರಂಭಗೊಂಡಿತು. ಇಂದು ಖಾಕಿ ಚಿತ್ರದ ಮುಹೂರ್ತ. ರಿತ್ವಿಕ್ ಅವರ ಸಂಗೀತ, ಬಾಲು ಅವರ ಕ್ಯಾಮರಾ ಚಿತ್ರಕ್ಕಿದೆ. ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ.
ಇನ್ನೊಂದೆಡೆ ರಾಜಮಾರ್ಥಾಂಡ ಚಿತ್ರದ ಬಿಡುಗಡೆಗಾಗಿ ಚಿರಂಜೀವಿ ಎದುರು ನೋಡುತ್ತಿದ್ದಾರೆ. ಆ ಕ್ಷಣ, ರಣಂ ಮತ್ತು ಸಿಂಗ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com