ಕೆಜಿಫ್-2 ಚಿತ್ರಕಥೆ ಬರೆಯುವುದು ನನ್ನ ಕೆರಿಯರ್ ನಲ್ಲೆ ಅತ್ಯುತ್ತಮ ಪ್ರಾಜೆಕ್ಟ್ ಆಗಲಿದೆ: ಪ್ರಶಾಂತ್ ನೀಲ್

ಕೆಜಿಎಫ್ ಭಾಗ1 ಸುಮಾರು 2 ವರ್ಷ ಸಮಯ ಹಿಡಿಯಿತು, ಆದರೆ ಕೆಜಿಎಫ್-2 ಒಂದೇ ವರ್ಷದಲ್ಲಿ ಪೂರ್ಣಗೊಳ್ಳಲಿದೆ, ಮಾರ್ಚ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದ್ದು,...
ಕೆಜಿಎಫ್ ಪೋಸ್ಟರ್
ಕೆಜಿಎಫ್ ಪೋಸ್ಟರ್
ಥಿಯೇಟರ್ ಗಳಲ್ಲಿ ಕೆಜಿಎಫ್-1 ಸತತ 50ನೇ ದಿನ ಪ್ರದರ್ಶನ ಮುಂದುವರಿಯುತ್ತಿದ್ದು, ಅಮೆಜಾನ್ ಪ್ರೈಮ್ ನಲ್ಲಿ ಶೋ ಆರಂಭವಾಗಿದೆ, ಇದು ಇಡಿ ಚಿತ್ರ ತಂಡದ ಯಶಸ್ಸು,ಇದು ಹೊಗಳಿಕೆಗೆ ಅರ್ಹವಾದದ್ದು ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.
ಕೆಜಿಎಫ್ ಯಶಸ್ಸಿನ ಹಿಂದೆ ನಿರ್ಮಾಪಕ ವಿಜಯ್ ಕಿರಂಗದೂರು ಮತ್ತು ನಟ ಯಶ್ ಶ್ರಮ ಹೆಚ್ಚಿದೆ, ನಮ್ಮ ನಿಯಮಿತ ಗಡಿ ದಾಟಿ ಮುಂದೆ ಹೋಗಲು ಕಾರಣರಾಗಿದ್ದಾರೆ, ಭಾರತೀಯ ಪ್ರೇಕ್ಷಕರು ಕೆಜಿಎಫ್ ಸಿನಿಮಾವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಒಪ್ಪುತ್ತಾರೆ ಎಂದು ನನಗೆ ನಂಬಿಕೆಯಿರಲಿಲ್ಲ, ಸಿನಿಮಾ ಲುಕ್, ಟ್ರೇಲರ್  ಹೆಚ್ಚಿನ ಕೆಲಸ ಮಾಡಿದೆ, ಮಾರುಕಟ್ಟೆಯಲ್ಲಿ ಪ್ರಾಡಕ್ಟ್ ಮಾರಾಟವಾಗಲು ಅವರು ಹೆಚ್ಚಿನ ಸಹಾಯ ಮಾಡಿದ್ದಾರೆ. ಕೇವಲ ನಿರ್ಮಾಪಕ ಮತ್ತು ನಟರಾಗಿ ಅವರು ತಮ್ಮ ಕೆಲಸವನ್ನು ಸೀಮಿತಗೊಳಿಸಿರಲಿಲ್ಲ,ಅದಕ್ಕಿಂತಲೂ ಹೆಚ್ಚಿನ ಪಾತ್ರ ವಹಿಸಿದ್ದಾರೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.,
ಸಿನಿಮಾದ ಎಲ್ಲಾ ತಂತ್ರಜ್ಞರಿಗೆ ಹಾಗೂ ಚಿತ್ರತಂಡಕ್ಕೆ ಎಲ್ಲಾ ಕ್ರೆಡಿಟ್ ಹೋಗಬೇಕು ಎಂದುತಿಳಿಸಿದ್ದಾರೆ. ಪ್ರಾಜೆಕ್ಟ್ ಆರಂಭವಾಗುವಾಗ ಎರಡು ಭಾಗದಲ್ಲಿ ಸಿನಿಮಾ ಬರಬೇಕೆಂದು ಯೋಚಿಸಿರಲಿಲ್ಲ, ಸಿನಿಮಾ ಆರಂಭವಾದ ಮೇಲೆ ನನಗೆ ನಿಜ ತಿಳಿಯಿತು, 2 ಭಾಗಗಳಲ್ಲಿ ಸಿನಿಮಾ ಹೊರತರಬೇಕು ಎಂದು ಅರಿವಾಯಿತು. ಸುಮಾರು 1 ತಿಂಗಳ ಕಾಲ ಚರ್ಚೆ ನಂತರ ನಿರ್ಧರಿಸಲಾಯಿತು. ಸಿನಿಮಾ ಯಶಸ್ಸು ಪ್ರೇಕ್ಷಕರಿಗೆ ಬಿಟ್ಟದ್ದು, ನಮ್ಮ ಆಕಾಂಕ್ಷೆಯಂತೆಯೇ ಜೊತೆಗೆ ಸಿನಿಮಾ ಬಜೆಟ್ ಕೂಡ  ದೊಡ್ಡದಾಗಿತ್ತು. ಹಾಗೇಯೇ ಜವಾಬ್ದಾರಿ ಕೂಡ. 
ಕೆಜಿಎಫ್ ಭಾಗ 1 ರಲ್ಲಿ ಹೆಚ್ಚಿನ ಕಥೆ ಸೆಟ್ ನಲ್ಲಿಯೇ ಬರೆಯಬೇಕಾಯಿತು, ಆದರೆ ಬಾಗ 2 ಆ ರೀತಿ ಆಗುವುದಿಲ್ಲ. ಇದು ಅತ್ಯುತ್ತಮವಾಗಲಿದೆ, ನನ್ನ ಎಲ್ಲಾ ಪ್ರಾಜೆಕ್ಟ್ ಗಳಿಗಿಂತಲೂ ಇದು ವಿಭಿನ್ನವಾಗಲಿದೆ, ನನ್ನ ಕೆರಿಯರ್ ನಲ್ಲೇ ಅದು ಅತ್ಯಂತ ಸ್ಟ್ರಾಂಗ್ ಆಗಿರಲಿದೆ,
ಕೆಜಿಎಫ್ ಭಾಗ1  ಸುಮಾರು 2 ವರ್ಷ ಸಮಯ ಹಿಡಿಯಿತು, ಆದರೆ ಕೆಜಿಎಫ್-2 ಒಂದೇ ವರ್ಷದಲ್ಲಿ ಪೂರ್ಣಗೊಳ್ಳಲಿದೆ, ಮಾರ್ಚ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದ್ದು, ಪ್ರತಿದಿನ ಡಬಲ್ ಕೆಲಸ ಮಾಡಲಾಗುವುದು ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com