
ಭರಾಟೆ ಸಿನಿಮಾದಲ್ಲಿ ಸಾಯಿ ಕುಮಾರ್ ಸಹೋದರರು
Source : The New Indian Express
ಬೆಂಗಳೂರು: ಡೈಲಾಗ್ ಕಿಂಗ್ ಸಾಯಿಕುಮಾರ್ ಸಹೋದರರಾದ ಆರ್ಮುಗಂ ರವಿಶಂಕರ್, ಅಯ್ಯಪ್ಪ ಪಿ ಶರ್ಮಾ ಮೂವರು ಒಂದೇ ಸಿನಿಮಾದಲ್ಲಿ ಒಟ್ಟಾಗಿದ್ದಾರೆ.
ಹೌದು, ಚೇತನ್ ಕುಮಾರ್ ನಿರ್ದೇಶನದ ಶ್ರೀಮುರುಳಿ ಅಭಿನಯದ ಭರಾಟೆ ಸಿನಿಮಾದಲ್ಲಿ ಮೂವರು ಸಹೋದರರನ್ನು ಕರೆ ತಂದಿದ್ದಾರೆ, ಮೂವರು ಪ್ರಧಾವ ಪಾತ್ರದಲ್ಲಿ ನಟಿಸಿದ್ದಾರೆ.
ನಿರ್ಮಾಪಕರಾಗಿ ಸುಪ್ರೀತ್ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ರವಿಶಂಕರ್ ಮತ್ತು ಅಯ್ಯಪ್ಪ ಅವರ ಭಾಗದ ಸಿನಿಮಾ ಶೂಟಿಂಗ್ ಮುಗಿದಿದ್ದು, ಸಾಯಿ ಕುಮಾರ್ ಶೀಘ್ರವೇ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ರವಿಶಂಕರ್ ಮತ್ತು ಸಾಯಿ ಕುಮಾರ್ ಡಬ್ಬಿಂಗ್ ಕಲಾವಿದರಾಗಿದ್ದು, ನಂತರ ಕಲಾವಿದರಾಗಿ ನಟಿಸುತ್ತಿದ್ದಾರೆ, ಕನ್ನಡ ಮತ್ತು ತೆಲುಗು ಸಿನಿಮಾದಲ್ಲಿ ಇಬ್ಬರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೌಟುಂಬಿಕ ಸಿನಿಮಾವಾದ ಭರಾಟೆ ಸಿನಿಮಾವಾಗಿದೆ,ಭರಾಟೆ ಸಿನಿಮಾವನ್ನು ಬೇರೆ ಭಾಷೆಗಳಲ್ಲಿಯೂ ತರುವಂತೆಯೂ ಒತ್ತಾಯ ಮಾಡಲಾಗುತ್ತಿದೆ.
Stay up to date on all the latest ಸಿನಿಮಾ ಸುದ್ದಿ news