ಬೌಬೌ ಸಿನಿಮಾ ಸ್ಟಿಲ್
ಬೌಬೌ ಸಿನಿಮಾ ಸ್ಟಿಲ್

ಬಿಡುಗಡೆಗೂ ಮುನ್ನ ಪ್ರಶಸ್ತಿ ಬಾಚಿಕೊಂಡಿರುವ ಕನ್ನಡದ ಬೌ ಬೌ ಸಿನಿಮಾ 7 ಭಾಷೆಗಳಲ್ಲಿ ರಿಲೀಸ್

ಕಳೆದ 20 ವರ್ಷಗಳಿಂದ ಪ್ರಮುಖ ನಿರ್ದೇಶಕರೊಂದಿಗೆ ಪಳಗಿರುವ ಎಸ್ ಪ್ರದೀಪ್ ಕಿಳ್ಳಿಕರ್ ತಮ್ಮ ಮೊದಲ ನಿರ್ದೇಶನದಲ್ಲಿಯೇ ಯಶಸ್ಸುಗಳಿಸುವಲ್ಲಿ ...
ಬೆಂಗಳೂರು: ಕಳೆದ 20 ವರ್ಷಗಳಿಂದ ಪ್ರಮುಖ ನಿರ್ದೇಶಕರೊಂದಿಗೆ ಪಳಗಿರುವ ಎಸ್ ಪ್ರದೀಪ್ ಕಿಳ್ಳಿಕರ್ ತಮ್ಮ ಮೊದಲ ನಿರ್ದೇಶನದಲ್ಲಿಯೇ ಯಶಸ್ಸುಗಳಿಸುವಲ್ಲಿ ಸಫಲರಾಗಿದ್ದಾರೆ.
ಪ್ರದೀಪ್ ಕಿಳ್ಳಿಕರ್ ನಿರ್ದೇಶನದ ಬೌಬೌ ಸಿನಿಮಾ ಬಿಡುಗಡೆಗೆ ಮುನ್ನವೇ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಬಾಚಿಕೊಂಡಿದೆ. ಜೊತೆಗೆ ಈ ಚಿತ್ರ 7 ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ .
ಶ್ವಾನ ಹಾಗೂ ಮನುಷ್ಯನ ನಡುವಿನ ಬಾಂಧವ್ಯ, ಶ್ವಾನಗಳಿಗೂ ಭಾವನೆಯಿದೆ ಎಂದು ಸಾರುವ ಚಿತ್ರವನ್ನು ಲಂಡನ್ ಟಾಕೀಸ್ ಅಡಿಯಲ್ಲಿ ನಟರಾಜನ್ ನಿರ್ಮಿಸಿದ್ದಾರೆ 
ಹೆತ್ತವರಿಲ್ಲದೆ ಅಜ್ಜಿ, ತಾತ ಹಾಗೂ ಬಂಧುಗಳ ಆಶ್ರಯದಲ್ಲಿರುವ ಪುಟ್ಟ ಬಾಲಕ, ಶ್ವಾನದ ಜೊತೆಗೆ ಸ್ನೇಹ ಬೆಳೆಸುತ್ತಾನೆ ಅವರಿಬ್ಬರ ಬಾಂಧವ್ಯಕ್ಕೆ ಧಕ್ಕೆ ಬರುವುದು ಹೇಗೆ, ಈ ಸಂದರ್ಭದಲ್ಲಿ ಶ್ವಾನ ವ್ಯಕ್ತಪಡಿಸುವ ಭಾವನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ.
“ಮಾಸ್ಟರ್ ಅಹಾನ್ ಜೊತೆಗೆ ಬೀದಿ ನಾಯಿ ಸುಲ್ತಾನ್ ಬೀಗಲ್ ಡಾಗ್ ಲಕ್ಕಿ ಹಾಗೂ ಪ್ರಮುಖ ಪಾತ್ರದಲ್ಲಿ ಲ್ಯಾಬ್ರಡಾರ್ ಡಾಗ್ ರೋವರ್ ನಟಿಸಿವೆ ಅಹಾನ್ ಹಾಗೂ ಶ್ವಾನಗಳ ಸಹಜಾಭಿನಯವಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ” ಎಂದು ನಿರ್ದೇಶಕ ಪ್ರದೀಪ್ ಕಿಳ್ಳಿಕರ್ ತಿಳಿಸಿದ್ದಾರೆ
ಭಾರತೀಯ ಸಿನಿಮಾ ರಂಗದಲ್ಲಿ ಪೆಟ್ ಅನಿಮಲ್ ಗಳ ಕುರಿತು ಹಲವು ಸಿನಿಮಾ ತಯಾರಾಗಿವೆ, ಅವುಗಳಲ್ಲಿ ಬಹುತೇಕ ಆ್ಯಕ್ಷನ್ ಚಿತ್ರಗಳಾಗಿವೆ, ಆದರೆ ಬೌಬೌ ಭಾವನಾತ್ಮಕ ಸಿನಿಮಾವಾಗಿದೆ. ಕ್ಲೈಮ್ಯಾಕ್ಸ್ ನ ಕೊನೆಯ 30 ನಿಮಿಷಗಳಲ್ಲಿ ಯಾವುದೇ ಸಂಭಾಷಣೆಯಿಲ್ಲ, ಕೇವಲ ಹಿನ್ನೆಲೆ ಸಂಗೀತವಿದೆ, ಇದು ನೈಜ ಘಟನೆಗಳ ಆಧರಿತ ಸಿನಿಮಾವಾಗಿದೆ ಎಂದು ಪ್ರದೀಪ್ ತಿಳಿಸಿದ್ದಾರೆ.
‘ಬೌ ಬೌ’ ಚಿತ್ರದ ತಾರಾಬಳಗದಲ್ಲಿ ಮಾ. ಅಹಾನ್, ಸುಲ್ತಾನ್(ಬೀದಿನಾಯಿ) ಬೀಗಲ್ ಡಾಗ್ ಲಕ್ಕಿ ಲ್ಯಾಬ್ರಡಾರ್ ಡಾಗ್ ರೋವರ್. ಶಿವ, ತೇಜಸ್ವಿ, ಆರೋಗ್ಯರಾಜ್, ಸತ್ಯಂ, ಶರ್ಮಿಳಾ, ನಂಜಿಲ್ ವಿ. ರಾಮ್ ಬಾಬು ಮುಂತಾದವರು ನಟಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com