ನಿಗೂಢ ರೀತಿಯಲ್ಲಿ ಯುವತಿ ಹತ್ಯೆ ಸ್ಟೋರಿ ಸದ್ಯದಲ್ಲೇ ತೆರೆ ಮೇಲೆ

ನಿಗೂಢ ರೀತಿಯಲ್ಲಿ ಹತ್ಯೆಯಾಗಿದ್ದ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಸ್ಟೋರಿ ಸದ್ಯದಲ್ಲಿಯೇ ತೆರೆ ಮೇಲೆ ಬರಲಿದೆ. ಈ ವರ್ಷದ ಏಪ್ರಿಲ್ 13 ರಂದು ನಾಪತ್ತೆಯಾಗಿದ್ದ ಈ ವಿದ್ಯಾರ್ಥಿ ಎರಡು ದಿನಗಳ ಬಳಿಕ ಶವವಾಗಿ ಬೇರೆಯವರ ಜಮೀನೊಂದರಲ್ಲಿ ಪತ್ತೆಯಾಗಿದ್ದಳು.
ಸಿನಿಮಾ ಚಿತ್ರೀಕರಣ
ಸಿನಿಮಾ ಚಿತ್ರೀಕರಣ
ರಾಯಚೂರು: ನಿಗೂಢ ರೀತಿಯಲ್ಲಿ ಹತ್ಯೆಯಾಗಿದ್ದ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಸ್ಟೋರಿ ಸದ್ಯದಲ್ಲಿಯೇ  ತೆರೆ ಮೇಲೆ ಬರಲಿದೆ. ಈ ವರ್ಷದ ಏಪ್ರಿಲ್ 13 ರಂದು ನಾಪತ್ತೆಯಾಗಿದ್ದ ಈ ವಿದ್ಯಾರ್ಥಿ ಎರಡು ದಿನಗಳ ಬಳಿಕ ಶವವಾಗಿ ಬೇರೆಯವರ ಜಮೀನೊಂದರಲ್ಲಿ ಪತ್ತೆಯಾಗಿದ್ದಳು.
ವಿವಿಧ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗಿತ್ತು. ಇದು ಆತ್ಮಹತ್ಯೆ ಎಂದು  ಪರಿಗಣಿಸಿ ತನಿಖಾ ತಂಡ ಚಾರ್ಚ್ ಶೀಟ್ ದಾಖಲಿಸಿತ್ತು. ಈ ಸಂಬಂಧ ಸುದರ್ಶನ್ ಯಾದವ್  ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಇದೀಗ ಈ ಬಾಲಕಿಯ ನಿಗೂಢ ಹತ್ಯೆ  ಘಟನೆಯನ್ನು  ಇಟ್ಟುಕೊಂಡು ಜಿಲ್ಲೆಯ ಆರು ಮಂದಿಯ ತಂಡವೊಂದು ಸಿನಿಮಾ ಮಾಡುತ್ತಿದೆ. ಭೀಮ್ ರಾವ್ ಪಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.ಚಿತ್ರದ ಟ್ರೈಲರ್ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ದೀಪಲ್ ಈ ಚಿತ್ರದ ಪೋಟೋಗ್ರಾಫಿ ಮಾಡಲಿದ್ದಾರೆ. ಸಂತ್ರಸ್ತೆಯ ಹೆಸರಿಗೆ ಯಾವುದೇ ರೀತಿಯ ಹಾನಿಯಾಗದ ರೀತಿಯಲ್ಲಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಪ್ರಕರಣ ಕುರಿತು ಕುಟುಂಬಸ್ಥರು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಹಾಗೂ ಹೋರಾಟಗಾರರ ಸ್ಪಂದಿಸಿದ ರೀತಿ ಹಾಗೂ ಪೊಲೀಸ್ ತನಿಖೆಯ ಆಯಾಮನ್ನಿಟ್ಟುಕೊಂಡು ಚಿತ್ರವನ್ನು ಮಾಡಲಾಗುತ್ತಿದೆ. ಈ ವರ್ಷದಲ್ಲಿಯೇ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಭೀಮ್ ರಾವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com