ಸೈಮಾ ಕಿರು ಚಿತ್ರೋತ್ಸವದಲ್ಲಿ 'ವಿಧಾತ್ರು' ಕಿರುಚಿತ್ರಕ್ಕೆ ಪ್ರಶಸ್ತಿ!

ಉದಯೋನ್ಮುಖ ಕಲಾವಿದರು ತಮ್ಮ ಪ್ರತಿಭೆ ತೋರಿಸಲು ಉತ್ತಮ ವೇದಿಕೆ ಕಿರುಚಿತ್ರ ಕಿರುಚಿತ್ರಗಳ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿರುವ ಸಾಕಷ್ಟು ಪ್ರತಿಭೆಗಳು ಹಿರಿತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ.
ಸೈಮಾ ಕಿರು ಚಿತ್ರೋತ್ಸವದಲ್ಲಿ 'ವಿಧಾತ್ರು' ಕಿರುಚಿತ್ರಕ್ಕೆ ಪ್ರಶಸ್ತಿ!
ಸೈಮಾ ಕಿರು ಚಿತ್ರೋತ್ಸವದಲ್ಲಿ 'ವಿಧಾತ್ರು' ಕಿರುಚಿತ್ರಕ್ಕೆ ಪ್ರಶಸ್ತಿ!
ಉದಯೋನ್ಮುಖ ಕಲಾವಿದರು ತಮ್ಮ ಪ್ರತಿಭೆ ತೋರಿಸಲು ಉತ್ತಮ ವೇದಿಕೆ ಕಿರುಚಿತ್ರ ಕಿರುಚಿತ್ರಗಳ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿರುವ ಸಾಕಷ್ಟು ಪ್ರತಿಭೆಗಳು ಹಿರಿತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ
ಕೆಲವು ದಿಗಳ ಹಿಂದೆ ಸಂತೋಷ್.ಬಿ (ಸಂತು) ಅವರ ನಿರ್ದೇಶನದಲ್ಲಿ 27 ನಿಮಿಷಗಳ `ವಿಧಾತ್ರು` ಕಿರುಚಿತ್ರ ನಿರ್ಮಾಣವಾಗಿತ್ತು. ಇತ್ತೀಚೆಗೆ ಹೈದರಾಬಾದ್‍ನಲ್ಲಿ ನಡೆದ ಸೈಮಾ ಕಿರುಚಿತ್ರೋತ್ಸವದಲ್ಲಿ `ವಿಧಾತ್ರು` ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ನಿರ್ದೇಶನಕ್ಕಾಗಿ ಸಂತೋಷ್ ಅವರಿಗೆ ಹಾಗೂ ಅತ್ಯುತ್ತಮ ಪೋಷಕ ಪ್ರಧಾನ ಪಾತ್ರಕ್ಕಾಗಿ ನಾಗೇಂದ್ರ ಶಾ ಅವರಿಗೆ ಪ್ರಶಸ್ತಿ ಸಂದಿದೆ
ಅಪ್ಪ-ಮಗನ ಸಂಬಂಧದ ಕಥೆ ಹೊಂದಿರುವ ಈ ಕಿರುಚಿತ್ರವನ್ನು ಪೆನ್ಸಿಲ್ ಕಟ್ ಬ್ಯಾನರ್ ಲಾಂಛನದಲ್ಲಿ ನವೀನ್ ಎಸ್.ಪಿ ಹಾಗೂ ಆಶಾ ಎಚ್.ಎಸ್ ನಿರ್ಮಿಸಿದ್ದಾರೆ.  ಕಾರ್ತಿಕ್ ಶರ್ಮ ಸಂಗೀತ, ಆಶ್ಲೇ ಮೆಂಡೋಸಾ ಹಿನ್ನೆಲೆ ಸಂಗೀತ, ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣ, ಪ್ರಕಾಶ್ ಕಾರಿಂಜಾ ಸಂಕಲನ ಈ ಕಿರುಚಿತ್ರಕ್ಕಿದೆ. ತಾರಾಗಣದಲ್ಲಿ ವಿವೇಕ್ ಸಿಂಹ, ತೇಜಸ್ವಿನಿ ಶೇಖರ್, ನಾಗೇಂದ್ರ ಶಾ, ಪದ್ಮಕಲಾ, ನಿಸರ್ಗ, ಗಿರೀಶ್, ವಿನೋದ್ ಜ್ಯೋತಿನಗರ್, ಪುರುಷೋತ್ತಮ್, ರಾಘವೇಂದ್ರ, ಸುನಿಲ್ ಕುಲಕರ್ಣಿ ಮುಂತಾದವರು  ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com