ಮತ್ತೊಂದು ಸೆಲೆಬ್ರಿಟಿ ಜೋಡಿ ಬಾಳಲ್ಲಿ ಬಿರುಕು: ವಿಚ್ಛೇದನ ಕೋರಿ ರಘು ದೀಕ್ಷಿತ್ -ಮಯೂರಿ ಅರ್ಜಿ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗಾಯಕ ರಘು ದೀಕ್ಷಿತ್, ಹಾಗೂ ಡ್ಯಾನ್ಸರ್ ಮಯೂರಿ ದಂಪತಿ ಬಾಳಲ್ಲಿ ಬಿರುಕು ಮೂಡಿದೆ. ..

Published: 13th June 2019 12:00 PM  |   Last Updated: 13th June 2019 12:07 PM   |  A+A-


Raghu Dixit And  Mayuri Upadhya

ರಘು ದೀಕ್ಷಿತ್ ಮತ್ತು ಮಯೂರಿ

Posted By : SD SD
Source : Online Desk
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗಾಯಕ ರಘು ದೀಕ್ಷಿತ್, ಹಾಗೂ ಡ್ಯಾನ್ಸರ್ ಮಯೂರಿ ದಂಪತಿ ಬಾಳಲ್ಲಿ ಬಿರುಕು ಮೂಡಿದೆ. 

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಪರಸ್ಪರ ಬೇರೆ ಬೇರೆಯಾಗಿದ್ದರು. 

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಗಾಯಕ ರಘು ದೀಕ್ಷಿತ್ ವಿರುದ್ಧ ಚಿನ್ಮಯಿ ಶ್ರೀ ಪಾದ್ ಎಂಬ ಗಾಯಕಿ ಗಂಭೀರ ಆರೋಪ ಮಾಡಿದ್ದರು. ರಘು ದೀಕ್ಷಿತ್ ತನ್ನ ಸ್ನೇಹಿತೆಯಾಗಿರುವ ಒಬ್ಬ ಗಾಯಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಚಿನ್ಮಯಿ ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಘು ದೀಕ್ಷಿತ್ ಆರೋಪದ ಬಗ್ಗೆ ನನಗೆ ವಾಸ್ತವವಾಗಿ ಅರಿವಿದೆ. ಹೀಗಾಗಿ ಈ ಘಟನೆಯ ನನ್ನ ಕಡೆಯ ಸಂಗತಿಯನ್ನು ಹೇಳಿಕೊಳ್ಳಲು ಬಯಸುತ್ತೇನೆ ಮತ್ತು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು. 
Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp