
ವಿಕ್ರಮ್ ರವಿಚಂದ್ರನ್
Source : The New Indian Express
ಸಹನಮೂರ್ತಿ ನಿರ್ದೇಶನದ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅವರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ.
ಚಿತ್ರಕ್ಕೆ ತ್ರಿವಿಕ್ರಮ ಎಂದು ಹೆಸರಿಡಲಾಗಿದ್ದು ಹೈ ವೋಲ್ಟೇಜ್ ಲವ್ ಸ್ಟೋರಿ ಎಂಬ ಟ್ಯಾಗ್ ಲೈನ್ ಇದೆ. ಚಿತ್ರದ ಮುಹೂರ್ತ ದಿನಾಂಕ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದಂದು ಆಗಿದ್ದು ಅದಕ್ಕಿಂತ ಮೊದಲು ಚಿತ್ರದ ಮೋಶನ್ ಪೋಸ್ಟರ್ ಸಜ್ಜಾಗಲಿದೆ.
ಇದೀಗ ಚಿತ್ರತಂಡ ಪೂರ್ವ ತಯಾರಿ ಕೆಲಸದಲ್ಲಿ ನಿರತವಾಗಿದೆ. ಲೊಕೋಶನ್ ಗಳ ಹುಡುಕಾಟ ಕೂಡ ಸಾಗಿದೆ. ಚಿತ್ರದ ನಾಯಕಿ ಹುಡುಕಾಟ ನಡೆಯುತ್ತಿದೆ. ಇಲ್ಲಿ ವಿಕ್ರಮ್ ಲವ್ವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು, ರಾಜಸ್ತಾನ, ದಾಂಡೇಲಿ, ಸಿಂಗಾಪುರ ಮತ್ತಿತರ ಕಡೆ ಶೂಟಿಂಗ್ ನಡೆಯಲಿದೆ.
ನ್ಯೂಜಿಲ್ಯಾಂಡ್ ನಲ್ಲಿ ವಿಶೇಷ ಹಾಡಿನ ಶೂಟಿಂಗ್ ಗೆ ತಂಡ ಕೊರಿಯೊಗ್ರಫಿಗೆ ಪ್ರಭುದೇವ ಅವರನ್ನು ಕರೆತರುವ ಪ್ರಯತ್ನವನ್ನು ಕೂಡ ಚಿತ್ರತಂಡ ಮಾಡುತ್ತಿದೆ.
ಗೌರಿ ಎಂಟರ್ಟೇನ್ ಮೆಂಟ್ ನಡಿ ಸೋಮಣ್ಣ ಮತ್ತು ಸುರೇಶ್ ನಿರ್ಮಿಸುತ್ತಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿರುತ್ತದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now