ಎರಡು ಭಾಗಗಳಲ್ಲಿ 'ತೋತಾಪುರಿ'

ಕೆಜಿಎಫ್ ಮಾದರಿಯಲ್ಲಿ ತೋತಾಪುರಿ ಚಿತ್ರ ಕೂಡ ಎರಡು ಭಾಗಗಳಲ್ಲಿ ಬರುತ್ತಿದೆ. ನಿರ್ದೇಶಕ ...

Published: 15th June 2019 12:00 PM  |   Last Updated: 15th June 2019 02:07 AM   |  A+A-


Jaggesh

ಜಗ್ಗೇಶ್

Posted By : SUD SUD
Source : The New Indian Express
ಕೆಜಿಎಫ್ ಮಾದರಿಯಲ್ಲಿ ತೋತಾಪುರಿ ಚಿತ್ರ ಕೂಡ ಎರಡು ಭಾಗಗಳಲ್ಲಿ ಬರುತ್ತಿದೆ. ನಿರ್ದೇಶಕ ವಿಜಯಪ್ರಸಾದ್ ಮತ್ತು ನಿರ್ಮಾಪಕ ಕೆ ಎ ಸುರೇಶ್ ಚಿತ್ರಕಥೆಯ ವಿಷಯ ದೊಡ್ಡದಾಗಿರುವುದರಿಂದ ಎರಡು ಭಾಗಗಳಲ್ಲಿ ತೆರೆ ಮೇಲೆ ತರಲು ನಿಶ್ಚಯಿಸಿದ್ದಾರೆ. 

90 ದಿನಗಳ ಶೂಟಿಂಗ್ ನ್ನು ಈಗಾಗಲೇ ಮಾಡಿ ಮುಗಿಸಿರುವ ತೋತಾಪುರಿ ಚಿತ್ರದ ಉಳಿದ 60 ದಿನಗಳ ಶೂಟಿಂಗ್ ಬಾಕಿಯಿದೆ. ಜುಲೈಯಲ್ಲಿ ಮುಂದಿನ ಶೂಟಿಂಗ್ ಆರಂಭವಾಗಲಿದ್ದು ಅದರಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ್ ಮತ್ತು ವೀಣಾ ಸುಂದರ್ ಭಾಗಿಯಾಗಲಿದ್ದಾರೆ. ಈಗ ಮೂರು ದಿನಗಳ ಶೂಟಿಂಗ್ ಧನಂಜಯ್ ಮತ್ತು ಸುಮನ್ ರಂಗನಾಥ್ ಅವರದ್ದು ಬಾಕಿಯಿದೆ. 

ನವೆಂಬರ್ ವೇಳೆಗೆ ತೆರೆ ಮೇಲೆ ತರಲು ಚಿತ್ರತಂಡ ಯೋಚಿಸುತ್ತಿದ್ದು ಸಿನಿಮಾದ ಮೊದಲ ಭಾಗಕ್ಕೆ ಜನರಿಂದ ಸಿಗುವ ಪ್ರತಿಕ್ರಿಯೆಗಳನ್ನು ನೋಡಿಕೊಂಡು ದ್ವಿತೀಯಾರ್ಧ ಭಾಗವನ್ನು ತರುವ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರು ನಿರ್ಧರಿಸಲಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ ಚಿತ್ರಕ್ಕಿದೆ. 

ಸಮಾಜದಲ್ಲಿರುವ ಜಾತಿ ರಾಜಕೀಯ ಮತ್ತು ಅದು ಜನರನ್ನು ಹೇಗೆ ಇಬ್ಘಾಗ ಮಾಡುತ್ತದೆ, ಜನರು ಅದರಿಂದ ಪರಿಣಾಮ ಬೀರಬಾರದು ಎಂಬುದನ್ನು ಕಾಮಿಡಿ-ಡ್ರಾಮಾ ಚಿತ್ರದಲ್ಲಿ ತೋರಿಸಲಾಗುತ್ತದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp