ಕೊಟ್ಟ ಮಾತು ಉಳಿಸಿಕೊಂಡ ನಿರ್ದೇಶಕ ಪ್ರೇಮ್: ಎಕ್ ಲವ್ ಯಾ ಸಿನಿಮಾಗೆ ಕನ್ನಡತಿ ಹಿರೋಯಿನ್!

ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ನಟಿಸುತ್ತಿರುವ ಎಕ್ ಲವ್ ಯಾ ಸಿನಿಮಾಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರೀಷ್ಮಾ ನಾಣಯ್ಯ ಮತ್ತು ಪ್ರೇಮ್
ರೀಷ್ಮಾ ನಾಣಯ್ಯ ಮತ್ತು ಪ್ರೇಮ್
ಕ್ರೇಜಿ ಕ್ವೀನ್ ರಕ್ಷಿತಾ ಸಹೋದರ ರಾಣಾ ನಟಿಸುತ್ತಿರುವ ಎಕ್ ಲವ್ ಯಾ ಸಿನಿಮಾಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 
ನಿರ್ದೇಶಕ ಜೋಗಿ ಪ್ರೇಮ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ, ಈ ಹಿಂದೆ ನಿರ್ದೇಶಕ ಪ್ರೇಮ್ ಚಿತ್ರಕ್ಕೆ ಕನ್ನಡಿತಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ರಚಿತಾ ರಾಮ್ ಕೂಡ ನಟಿಸುತ್ತಿದ್ದಾರೆ ರೀಷ್ಮಾ ನಾಣಯ್ಯ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದ್ದು, ಮಹೇಂದ್ರ ಸಿಂಹ ಸಿನಿಮಾಟೋಗ್ರಫಿ ಮಾಡಿದ್ದಾರೆ.
ಕೂರ್ಗಿನ 18 ವರ್ಷದ  ರೀಷ್ಮಾ ನಾಣಯ್ಯ ಪ್ರೇಮ್ ನಿರ್ದೇಶನದ ,ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ, ಬುಧವಾರ ಸೆಟ್ ಗೆ ಆಗಮಿಸಿದ ರೀಷ್ಮಾ ನಾಣಯ್ಯ , ಚಿಕ್ಕ ವಯಸ್ಸಿನಿಂದ ನಾನು ನಟಿಯಾಗಬೇಕೆಂಬ ಆಸೆ ಇಟ್ಟಿಕೊಂಡಿದ್ದ, ಅದು ಈಗ ನನಸಾಗಿದೆ, ನಿರ್ದೇಶಕರು ಏಪ್ರಿಲ್ ಫೂಲ್ ದಿನದಂದು ಸಂದೇಶ ಕಳುಹಿಸಿದ್ದರು, ಅದರ ಹಿಂದಿನ ದಿನ ಫ್ಯಾಷನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ, ಎಂದು ನೆನಪು ಮಾಡಿಕೊಂಡಿದ್ದಾರೆ.
ಆರಂಭದಲ್ಲಿ ನನ್ನ ಫ್ರೆಂಡ್ಸ್ ನನಗೆ ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಕೊಂಡಿದ್ದೆ, ನನ್ನನ್ನು ಫೂಲ್ ಮಾಡಲು ಮೆಸೇಜ್ ಮಾಡುತ್ತಿದ್ದಾರೆ ಎಂದುಕೊಂಡೆ, ಆದರೆ ನನ್ನ ತಾಯಿ ಮೆಸೇಜ್ ಗೆ ರಿಪ್ಲೈ ಮಾಡುವಂತೆ ಹೇಳಿದರು, ಆಗ ತಿಳಿಯಿತು ಅದು ನಿರ್ದೇಶಕ ಪ್ರೇಮ್ ಮೆಸೇಜ್ ಮಾಡಿದ್ದಾರೆ ಎಂದು,ಆಡಿಷನ್ ಅಟೆಂಡ್ ಮಾಡಬೇಕು ಎಂದು ತಿಳಿಸಿದ್ದಾರೆ.
ಅಲ್ಲಿಂದ ನನ್ನ ಸಿನಿ ಪಯಣ ಆರಂಭವಾಯಿತು. ನನಗೆ ನಟನೆ ಬಗ್ಗೆ ಯಾವಾಗಲೂ ಆಸಕ್ತಿ ಹೊಂದಿದ್ನೇ, ಪ್ರೇಮ್ ಸರ್ ನನ್ನ ಮೊದಲ ಗುರು. ರೀಷ್ಮಾ ನಾಣಯ್ಯ  ಜ್ಯೋತಿ ನಿವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com