ದಕ್ಷಿಣ ಭಾರತದ 'ಕ್ವೀನ್'ಗೆ ಅಮಿತಾಭ್ ಕಂಠ

ಈ ಹಿಂದೆ ‘ಅಮೃತಧಾರೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಈಗ ರಮೇಶ್ ಅರವಿಂದ್ ನಿರ್ದೇಶನದ ‘ಬಟರ್ ಫ್ಲೈ’ ಸಿನಿಮಾದಲ್ಲಿ ಧ್ವನಿ ನೀಡುವ...
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್
ಈ ಹಿಂದೆ ‘ಅಮೃತಧಾರೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಈಗ ರಮೇಶ್ ಅರವಿಂದ್ ನಿರ್ದೇಶನದ ‘ಬಟರ್ ಫ್ಲೈ’ ಸಿನಿಮಾದಲ್ಲಿ ಧ್ವನಿ ನೀಡುವ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಬಾಲಿವುಡ್ ನ ‘ಕ್ವೀನ್’ ಚಿತ್ರ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದು, ಅದರ ಕನ್ನಡದ ‘ಬಟರ್ ಫ್ಲೈ’ ಮತ್ತು ತೆಲುಗು ಅವತರಣಿಕೆಗಳಿಗೆ ರಮೇಶ್ ಅರವಿಂದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. 
ಬಿಗ್ ಬಿ ‘ಬಟರ್ ಫ್ಲೈ’ಚಿತ್ರದ ಭಾಗವಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಅರವಿಂದ್ ಅವರು, ಮೂಲ ಚಿತ್ರದಲ್ಲಿ ಒಂದು ಪಬ್ ಸಾಂಗ್ ಇದೆ. ಈ ಹಾಡನ್ನು ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ದೇವದಾಸಿ ನಾಟಕಕ್ಕೆ ಬಳಸಿದ್ದಾರೆ. ಇದು 40 ವರ್ಷ ಹಳೆಯ ನಾಟಕ. ಹೀಗಾಗಿ ಈ ಹಾಡಿಗೆ ಯಾರ ಧ್ವನಿ ಸೂಕ್ತ ಎಂದು ನಾನು ವಿಚಾರ ಮಾಡುತ್ತಿದ್ದಾಗ ನಾನು ಅಮಿತಾಭ್ ಬಚ್ಚನ್ ಅವರ ಹೆಸರು ಪ್ರಸ್ತಾಪಿಸಿದೆ ಮತ್ತು ಆ ಹಾಡಿಗೆ ಅವರಿಗಿಂತ ಉತ್ತಮ ಧ್ವನಿ ಸಿಗಲು ಸಾಧ್ಯವೆ ಇಲ್ಲ ಎಂದು ಬಿಗ್ ಬಿ ಅವರನ್ನು ಭೇಟಿ ಮಾಡಿದೆವು ಎಂದರು. ಅಲ್ಲದೆ ಬಿಗ್ ಬಿ ಧ್ವನಿಯನ್ನು ಎಲ್ಲಾ ನಾಲ್ಕು ಭಾಷೆಗಳಲ್ಲೂ ಬಳಸಲಾಗುವುದು ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
‘ಬಟರ್ ಫ್ಲೈ’ ಚಿತ್ರದಲ್ಲಿ ಪಾರೂಲ್ ಯಾದವ್ ನಾಯಕಿಯಾಗಿದ್ದು, ತೆಲುಗಿಗೆ ತಮನ್ನಾ, ತಮಿಳಿನಲ್ಲಿ ಕಾಜಲ್ ಅಗರ್​ವಾಲ್, ಮಲಯಾಳಂನಲ್ಲಿ ಮಂಜಿಮಾ ಮೋಹನ್ ನಾಯಕಿಯಾಗಿದ್ದಾರೆ. 
‘ಬಟರ್ ಫ್ಲೈ’ ಚಿತ್ರದಲ್ಲಿ ಬರುವ ಹಾಡೊಂದಕ್ಕಾಗಿ ಮಾಸ್ಟರ್ ಹಿರಣ್ಣಯ್ಯ ಅವರ ‘ದೇವದಾಸಿ’ ನಾಟಕದ ಒಂದು ಗೀತೆಯ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಮಿಶ್ರಿತವಾಗಿರುವ ಈ ಹಾಡಿನಲ್ಲಿ ಬರುವ ಇಂಗ್ಲಿಷ್ ಸಾಹಿತ್ಯಕ್ಕೆ ಅಮಿತಾಭ್ ಧ್ವನಿ ನೀಡಿದ್ದಾರೆ.
ಪ್ಯಾರಿಸ್​ನ ಸವೆನ್ ಸ್ಟಾರ್ ಹೋಟೆಲ್​ವೊಂದರಲ್ಲಿ ಈ ಗೀತೆಯನ್ನು ಚಿತ್ರಿಸಲಾಗಿದ್ದು, ಬಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕೊರಿಯೋಗ್ರಫಿ ಮಾಡಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿರುವ ‘ಬಟರ್​ಫ್ಲೈ’ ಹಾಡುಗಳನ್ನು ‘ಜೀ ಮ್ಯೂಸಿಕ್ ಕಂಪನಿ’ ಖರೀದಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com